ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೆಕ್ಕಕ್ಕುಂಟು ಆಟಕ್ಕಿಲ್ಲದ ಸಹಕಾರ ಇಲಾಖೆ ಅಧಿಕಾರಿಗಳಿಗೆ ಖಡಕ್ ಸೂಚನೆ!

|
Google Oneindia Kannada News

ಬೆಂಗಳೂರು, ಮೇ 24: ಡೆಪ್ಯೂಟೇಶನ್ ಅನ್ನೋದು ಸರ್ಕಾರಿ ಕೆಲಸದಲ್ಲಿರುವವರಿಗೆ ಒಂದು ರೀತಿಯಲ್ಲಿ ಸಮೃದ್ಧವಾಗಿ ಹಾಲು ಕರೆಯುವ ಎಮ್ಮೆ ಇದ್ದಂತೆ. ಮೂಲ ಇಲಾಖೆಯನ್ನು ಬಿಟ್ಟು ಫಲವತ್ತಾಗಿರುವ, ಪ್ರಭಾವಿ ಹುದ್ದೆಗಳಿಗೆ ಡೆಪ್ಯೂಟೇಶನ್ ಮೇಲೆ ನಾಮುಂದು ತಾಮುಂದು ಎಂಬಂತೆ ಅಧಿಕಾರಿಗಳು ಹೋಗುತ್ತಾರೆ. ಕೆಲವೊಂದು ಪ್ರಕರಣಗಳಲ್ಲಿ ಸರ್ಕಾರಿ ಕೆಲಸಕ್ಕೆ ಸೇರಿಕೊಂಡು ಡೆಪ್ಯೂಟೇಶನ್ ಮೇಲೆ ಹೋದವರು ನಿವೃತ್ತಿ ಸಮಯದಲ್ಲಿ ಮೂಲ ಇಲಾಖೆಗೆ ವಾಪಸ್ ಆಗಿರುವ ಉದಾಹರಣೆಗಳು ಇವೆ.

Recommended Video

ಕಾಂಗ್ರೆಸ್ ವಿರುದ್ಧ ಸಿಎಂಗೆ ಸಾಫ್ಟ್ ಕಾರ್ನರ್..? | Yediyurappa

'ಕೊರೊನಾ ನಡುವೆ ಕಲಿಕೆ': ಶಾಲಾ ಆರಂಭದ ಬಗ್ಗೆ ಸುರೇಶ್ ಕುಮಾರ್ ಮಾಹಿತಿ 'ಕೊರೊನಾ ನಡುವೆ ಕಲಿಕೆ': ಶಾಲಾ ಆರಂಭದ ಬಗ್ಗೆ ಸುರೇಶ್ ಕುಮಾರ್ ಮಾಹಿತಿ

ಲೆಕ್ಕಕ್ಕೆ ಹುದ್ದೆ ಖಾಲಿ ಇಲ್ಲ, ಕೆಲಸಕ್ಕೆ ಅಧಿಕಾರಿಗಳು ಸಿಗಲ್ಲ ಎಂಬಂತಾಗಿದೆ ಸಹಕಾರ ಇಲಾಖೆಯ ಪರಿಸ್ಥಿತಿ. ಮರಳಿ ಮೂಲ ಇಲಾಖೆಗೆ ಎಂಬ ಕ್ರಮಕ್ಕೆ ಇದೀಗ ಸಹಕಾರ ಇಲಾಖೆ ಮುಂದಾಗಿದೆ.

ಲೆಕ್ಕಕ್ಕಿಲ್ಲದ 58 ಅಧಿಕಾರಿಗಳು

ಲೆಕ್ಕಕ್ಕಿಲ್ಲದ 58 ಅಧಿಕಾರಿಗಳು

ಲೆಕ್ಕದಲ್ಲಿ ಸಹಕಾರ ಇಲಾಖೆಗೆ ನೇಮಕವಾಗುವ ಅಧಿಕಾರಿಗಳು, ಸಿಬ್ಬಂದಿ ಕೆಲಸ ಮಾಡುವುದು ಮಾತ್ರ ಬೇರೆ ಇಲಾಖೆಗಳಲ್ಲಿ. ಸಹಕಾರ ಹಾಗೂ ಲೆಕ್ಕ ಪರಿಶೋಧನೆ ಇಲಾಖೆಗೆಂದು ನೇಮಕವಾಗಿರುವ 50ಕ್ಕೂ ಹೆಚ್ಚು ಅಧಿಕಾರಿಗಳು ಬೇರೆ ಬೇರೆ ಇಲಾಖೆಗಳಿಗೆ ಡೆಪ್ಯೂಟೇಶನ್ ಮೇಲೆ ಹೋಗಿದ್ದಾರೆ.

ಇಲಾಖೆಯ ಲೆಕ್ಕದಲ್ಲಿ ಸಂಪೂರ್ಣ ಹುದ್ದೆಗಳು ಭರ್ತಿಯಾಗಿವೆ. ಆದರೆ ಕೆಲಸ ಮಾಡಲು ಮಾತ್ರ ಯಾರೂ ಸಿಗಲ್ಲ. ಹೀಗಾಗಿ ಅವರೆಲ್ಲರನ್ನು ಮೂಲ ಇಲಾಖೆಗೆ ಕರೆಯಿಸಿಕೊಳ್ಳುವಂತೆ ಸಹಕಾಲ ಬರುವಂತೆ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ.

ಲೆಕ್ಕಕ್ಕೆ ಹುದ್ದೆ ಖಾಲಿ ಇಲ್ಲ, ಕೆಲಸಕ್ಕೆ ಸಿಗಲ್ಲ

ಲೆಕ್ಕಕ್ಕೆ ಹುದ್ದೆ ಖಾಲಿ ಇಲ್ಲ, ಕೆಲಸಕ್ಕೆ ಸಿಗಲ್ಲ

ಹೀಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಡೆಪ್ಯುಟೇಶನ್ ಮೇಲೆ ಹೋಗಿರುವುದರಿಂದ ಹಲವು ಬ್ಯಾಂಕ್‌ಗಳಲ್ಲಿ ಸಾಲ ವಸೂಲಾತಿ ಸಮಸ್ಯೆಯಾಗುತ್ತಿದೆ. ಜೊತೆಗೆ ಸಮಯಕ್ಕೆ ಸರಿಯಾಗಿ ಕೆಲಸವನ್ನು ಪೂರ್ತಿಗೊಳಿಸಲು ಆಗುತ್ತಿಲ್ಲ. ಹೀಗಾಗಿ ಇಲಾಖೆ ಹಾಕಿಕೊಂಡ ಗುರಿ ಮುಟ್ಟಲೂ ಸಮಸ್ಯೆಯಾಗುತ್ತಿದೆ. ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸುವಾಗ ವಿಷಯ ಗಮನಕ್ಕೆ ಬಂದಿದೆ.

ಯಾವ ಇಲಾಖೆಯ ಎಷ್ಟೆಷ್ಟು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ? ಇಲಾಖೆಯಲ್ಲಿ ಎಲ್ಲೆಲ್ಲಿ ಯಾವ ಯಾವ ಹುದ್ದೆಗಳಿಗೆ ಅತಿ ಅವಶ್ಯಕತೆ ಇದೆ ಎಂಬ ಬಗ್ಗೆ ತಕ್ಷಣ ತಮಗೆ ವರದಿ ಸಲ್ಲಿಸಬೇಕು ಎಂದು ಉನ್ನತ ಅಧಿಕಾರಿಗಳಿಗೆ ಸೂಚಿಸಿದ್ದರು.

ಲಾಭದಾಯಕ ಹುದ್ದೆ

ಲಾಭದಾಯಕ ಹುದ್ದೆ

ಸಹಕಾರ ಇಲಾಖೆಯಿಂದ ಅಲ್ಪಸಂಖ್ಯಾತರ ನಿರ್ದೇಶನಾಲಯ, ಬಿಬಿಎಂಪಿ, ವಿವಿಧ ಜಿಲ್ಲೆಗಳಲ್ಲಿ ಇರುವ ಕೌಶಲ್ಯಾಭಿವೃದ್ಧಿ ಇಲಾಖೆ, ಜಿಲ್ಲಾ ಪಂಚಾಯಿತಿಗಳು ಸೇರಿದಂತೆ ಅನೇಕ ಕಡೆ ಅಧಿಕಾರಿಗಳು ನಿಯೋಜನೆಗೊಂಡಿದ್ದಾರೆ. ಲಾಭದಾಯಕ ಹಾಗೂ ಆಯಕಟ್ಟಿನ ಜಾಗಕ್ಕೆ ಡೆಪ್ಯೂಟ್ ಮಾಡಿಸಿಕೊಂಡು ಹೋದವರು ಮತ್ತೆ ಸಹಕಾರ ಇಲಾಖೆಯತ್ತ ಸುಳಿದಿಲ್ಲ.


ಹೀಗೆ ಹೋದವರನ್ನು ಪುನಃ ಸಹಕಾರ ಇಲಾಖೆಗೆ ವಾಪಸ್ ಕರೆಸಿಕೊಳ್ಳುವಂತೆ ಸಹಕಾರಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಗೆ ಸೂಚಿಸಿದ್ದಾರೆ.

ಮಾತೃ ಇಲಾಖೆಗೆ ಕರೆಯಿಸಿಕೊಳ್ಳಿ

ಮಾತೃ ಇಲಾಖೆಗೆ ಕರೆಯಿಸಿಕೊಳ್ಳಿ

ಸಹಕಾರ ಇಲಾಖೆ ಹಾಗೂ ಲೆಕ್ಕ ಪರಿಶೋಧನಾ ಇಲಾಖೆಯಿಂದ ಉಪ ನಿಬಂಧಕರು, ಉಪ ನಿರ್ದೇಶಕರು, ಜಂಟಿ ನಿಬಂಧಕರು, ಜಂಟಿ ನಿರ್ದೇಶಕರು ಹಾಗೂ ಅಪರ ನಿಬಂಧಕರು, ಅಪರ ನಿರ್ದೇಶಕರು ಹಾಗೂ ಸಚಿವರ ಆಪ್ತ ಕಾರ್ಯದರ್ಶಿ ಹೀಗೆ ಹಲವಾರು ವರ್ಷಗಳಿಂದ ಇನ್ನಿತರ ಇಲಾಖೆಗಳಲ್ಲಿ ನಿಯೋಜನೆಗೊಂಡು ಕಾರ್ಯನಿರ್ವಹಿಸುತ್ತಿದ್ದು, ಇಂಥವರನ್ನು ಕೂಡಲೇ ಮಾತೃ ಇಲಾಖೆಗೆ ಹಿಂದಿರುಗುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಸಹಮತ

ಮುಖ್ಯಮಂತ್ರಿ ಯಡಿಯೂರಪ್ಪ ಸಹಮತ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಹಕಾರ ಇಲಾಖೆ ಬೇಡಿಕೆಗೆ ಸ್ಪಂದಿಸಿದ್ದಾರೆ . ಇಲಾಖೆಯ ಸಿಬ್ಬಂದಿ ಬೇರೆಡೆ ನಿಯೋಜನೆಗೊಂಡಿರುವ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನಕ್ಕೆ ಎಸ್.ಟಿ. ಸೋಮಶೇಖರ್ ತಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ತಕ್ಷಣವೇ ಕ್ರಮ ಕೈಗೊಂಡು ಮಾತೃ ಇಲಾಖೆ ಸೇವೆಗೆ ಬಳಸಿಕೊಳ್ಳಿ ಎಂದು ಸೂಚಿಸಿದ್ದಾರೆ.

English summary
The circular has been issued by the Department of Cooperatives for the return who have gone on deputation to other departments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X