• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಶ್ಚಿಮ ಘಟ್ಟದ ನೀಲಿ ಬೆಟ್ಟಗಳ ನಡುವೆ ವಾಕಿಂಗ್!

By Rajendra
|

ಬೆಂಗಳೂರು-ಕೊಯಂಬತ್ತೂರ್-​​ಚೆನ್ನೈ, ಫೆ.10 : ಓಮಾಶ್ರಮ ಟ್ರಸ್ಟ್, ವೃದ್ಧಾಶ್ರಮ ಬೆಂಗಳೂರು ಕರ್ನಾಟಕ ಮತ್ತು ಕಥೀರ್ ವೇಲ್ ನಾಗಮ್ಮಲ್ ಟ್ರಸ್ಟ್ ಕೂನೂರ್ ತಮಿಳುನಾಡು ಮತ್ತು ಜಂಟಿಯಾಗಿ 2ನೇ ಕೂನುರ್ ಹಿಲ್ವಾಕರ್ 2015ಕ್ಕೆ ಆತ್ಮೀಯ ಸ್ವಾಗತ ನೀಡುತ್ತಿದೆ.

ನಿಮ್ಮ ಕನಸುಗಳ ಜೊತೆ ನಡೆದು ಉಳಿದವ್ರ ಕನಸುಗಳಿಗೆ ಸಾಕಾರ ನೀಡಲು ನಿಮಗಿದು ಸದಾವಕಾಶ. ಕಳೆದ ಬಾರಿ ನಮ್ಮೊಂದಿಗೆ ಕೈ ಜೋಡಿಸಿ ಹಲವರ ಭವಿಷ್ಯ ಬರೆದ ನಿಮಗೆ ಈಗ ಮತ್ತೊಮ್ಮೆ ಒಂದೊಳ್ಳೆಯ ಕೆಲ್ಸಕ್ಕೆ ಕೈ ಜೋಡಿಸುವಂತೆ ನಮ್ಮ ಮನವಿ.

ಒಂದೊಳ್ಳೆ ಕೆಲಸಕ್ಕಾಗಿ ನಾವು ಎಷ್ಟು ನಡಿಗೆಯಲ್ಲಿ ಭಾಗವಹಿಸಿದ್ದೇವೆ..? ನಮ್ಮ ಕೆಲ ಕಿಲೋಮೀಟರ್ ಗಳ ನಡಿಗೆ ಕಷ್ಟದಲ್ಲಿರುವ ಕೆಲ ಜೀವಗಳಿಗೆ ಸಹಾಯ ನೀಡಬಹುದು. ಹೌದು, ಹಲವು ಎನ್ ಜಿಒಗಳು ಸಾಮಾಜಿಕ ಕೆಲಸಕ್ಕಾಗಿ ಹಣದ ದೇಣಿಗೆ ಕೇಳುತ್ತಿವೆ. ಆದ್ರೆ ನಾವು ಇನ್ನೊಬ್ಬರ ಬದುಕು ರೂಪಿಸಲು ಕೆಲ ಕಿಲೋಮೀಟರ್ ಗಳ ನಡಿಗೆಯ ಕೊಡುಗೆ ಕೇಳುತ್ತಿದ್ದೇವೆ.

ಫೆಬ್ರವರಿ 22ರಂದು ಊಟಿ ಸಮೀಪದ ಕೂನುರಿನ ಗ್ಲೆಂಡಲ್ ಹಳ್ಳಿಯಿಂದ ಆರಂಭವಾಗುವ ನಡಿಗೆಯಲ್ಲಿ ನೀವು ಭಾಗವಹಿಸಿ. ನಿಮ್ಮ ನಡಿಗೆ ಹಲವರ ಬದುಕು ರೂಪಿಸಬಹುದು. ಕಷ್ಟಗಳನ್ನು ಎದುರಿಸುತ್ತಿರುವವರ ಪಾಲಿಗೆ ಸಂಜೀವಿನಿಯಾಗಬಹುದು. ಬೆಂಗಳೂರಿನ ಜನರ ಹೃದಯವಂತಿಕೆಯನ್ನು ತೋರಿಸೋದಿಕ್ಕೆ ನಿಮಗೆ ದೊಡ್ಡದೊಂದು ಅವಕಾಶ.

ಕೂನೂರಿನ ಎಸ್ಟೇಟ್​​ಗಳ ಮಧ್ಯೆ 5 ರಿಂದ ಹತ್ತು ಕಿಲೋಮೀಟರ್​​ ನಡೆದ್ರೆ ನಿಮಗೂ ಖುಷಿ.. ಅದೆಷ್ಟೋ ಬಡಜೀವಗಳಿಗೂ ನೆಮ್ಮದಿ. ದಾರಿಯುದ್ದಕ್ಕೂ ಫೋಟೋಗ್ರಫಿ, ಸಿನಿಮೀಯ ದೃಶ್ಯಗಳು ಮತ್ತು ಸಂತೋಷವನ್ನು ನಿಮ್ಮದಾಗಿಸಿಕೊಳ್ಳುವ ಜೊತೆಗೆ ಕೈಲಾಗದವ್ರಿಗೆ ಸಹಾಯ ಹಸ್ತ ಚಾಚಿದ ಪುಣ್ಯವೂ ನಿಮ್ಮದಾಗುತ್ತದೆ.

ಒಮಾಶ್ರಮ ಟ್ರಸ್ಟ್​​ನ ಫೌಂಡರ್​ ಮ್ಯಾನೇಜಿಂಗ್​ ಟ್ರಸ್ಟಿ, ಗೀತಾಶಂಕರ್​​​, ಮಾತನಾಡಿ, "ನಮ್ಮ ಜೊತೆಗೆ ಕೈ ಜೋಡಿಸಿ, ಇನ್ನೊಬ್ಬರ ಬದುಕನ್ನು ಬದಲಿಸಿ. ಸಂತೋಷವನ್ನು ಹಂಚಿಕೊಳ್ಳಿ " ಎಂದು ಹೇಳಿದ್ರು.

ದಿನಾಂಕ: 22 ಫೆಬ್ರವರಿ 2015, ಸ್ಥಳ: ಕೂನೂರು, ಊಟಿ, ತಮಿಳುನಾಡು, ಸಮಯ: ಬೆಳಗ್ಗೆ 7 ರಿಂದ, ರಿಜಿಸ್ಟ್ರೇಶನ್: http://www.coonoorhillwalker.in/register-now.

ಕೂನೂರ್ ಹಿಲ್ ವಾಕರ್ ಗಳಿಗೆ ವಿಶೇಷತೆ:

*ಪಶ್ಚಿಮ ಘಟ್ಟದ ನೀಲಿ ಬೆಟ್ಟಗಳ ನಡುವೆ ನಡಿಗೆ. ಹಚ್ಚ ಹಸಿರ ಕಾಡಿನ ನಡುವೆ ನಡಿಗೆ. ಟೀ ಗಾರ್ಡನ್, ಸಿನಿಕ್ ಬ್ಯೂಟಿ ಮತ್ತು ಹಿಲ್‍ವಾಕರ್ ಗಳಿಗೆ *ಆರಂಭದ ಜಾಗ, ರಿಪೋರ್ಟಿಂಗ್ ಮತ್ತು ಹೊರ ನಡಿಗೆಯ ವ್ಯವಸ್ಥೆ.

*ಹಿಲ್ ವಾಕರ್‍ಗಳಿಗೆ ನೆರವುನೀಡಲು ಸ್ವಯಂ ಸೇವಕರು- ಆಹಾರ ನೀರಿನ ವ್ಯವಸ್ಥೆ.

*ಜಲಪಾತಗಳನ್ನು ನೋಡುವ ಅವಕಾಶ. ಬುಡಕಟ್ಟು ಜನರ ಜೊತೆ ಸೇರಿಕೊಂಡ ಅನುಭವ.

*ಕುಟುಂಬದ ಸದಸ್ಯರುಗಳನ್ನು ಕರೆತರಲು ಅವಕಾಶ- ಹಿಲ್‍ವಾಕರ್ ಗಳಿಗೆ ಪ್ರೋತ್ಸಾಹ ನೀಡಲು ಹಲವು ಗಣ್ಯರ ಆಗಮನ

*ಕೂನುರ್ ನಡಿಗೆ ಬುಡಕಟ್ಟು ಮಕ್ಕಳ ಶಿಕ್ಷಣ ಮತ್ತು ಅನಾಥ ವೃದ್ಧರ ಆಶ್ರಮಕ್ಕೆ ದೇಣಿಗೆ ಸಂಗ್ರಹಿಸುವ ಕನಸು ಕಟ್ಟಿಕೊಂಡಿದೆ.

*ಈ ವಿಶೇಷ ನಡಿಗೆ ಕಾರ್ಯಕ್ರಮವನ್ನು ಕಥೀರ್‍ವೆಲ್ ನಾಗಮ್ಮಲ್ ಟ್ರಸ್ಟ್ ಕೂನೂರ್ ತಮಿಳುನಾಡು ಮತ್ತು ಓಮಾಶ್ರಮ ಟ್ರಸ್ಟ್, ವೃದ್ಧಾಶ್ರಮ ಬೆಂಗಳೂರು ಕರ್ನಾಟಕ ಜಂಟಿಯಾಗಿ ಆಯೋಜಿಸುತ್ತಿವೆ.

*ನತದೃಷ್ಟರ, ಅನಾಥ ಮತ್ತು ವಯೋವೃದ್ಧರ ಬದುಕು ಕಟ್ಟಿಕೊಡಲು ದೇಣಿಗೆ ಸಂಗ್ರಹಿಸುವ ಉದ್ದೇಶ ಹೊಂದಿದೆ. 2 ಸದಸ್ಯರ ತಂಡ ಸುಮಾರು 6 ಗಂಟೆಗಳಲ್ಲಿ 20 ಕಿಲೋಮೀಟರ್ ನಡೆದ್ರೆ ಅದೆಷ್ಟೋ ಕಷ್ಟಗಳನ್ನು ಎದುರಿಸ್ತಾ ಇರೋ ಜೀವಗಳಿಗೆ ನೆರವು ಸಿಗಲಿದೆ.

ಓಮಾಶ್ರಮದ ಬಗ್ಗೆ:

ಒಮಾಶ್ರಮವನ್ನು 2001ರಲ್ಲಿ ಶ್ರೀಮತಿ ಗೀತಾ ಶಂಕರ್ ಮತ್ತು ದಿವಂಗತ ಶ್ರೀ ಮೊಹನ್ ಪೈಯವರು 2001ರಲ್ಲಿ ಬಿಲೇಕಹಳ್ಳಿಯ ವಿಜಯಾ ಬ್ಯಾಂಕ್ ಕಾಲೋನಿಯಲ್ಲಿ ಆರಂಭಿಸಿದ್ರು. ಹಲವು ಸಂಕಷ್ಟಗಳನ್ನು ಎದುರಿಸಿ ಮೆಟ್ಟಿನಿಂತ ಒಮಾಶ್ರಮ ಮೋಹನ್ ಪೈ ಸೇವೆಯನ್ನು ಕಳೆದುಕೊಂಡ್ರು, ಗೀತಾ ಶಂಕರ್, ಟ್ರಸ್ಟಿ ಪ್ರಾಥನಾ ಉನ್ಕಾಲ್ಕರ್ ( ರೀಜನಲ್ ಹೆಡ್- ಈಸ್ಟ್, ಸೌತ್-1, ವಾಲಿಂಟೀಯರ್) ಜೊತೆ ಸೇರಿಕೊಂಡು ಮುನ್ನಡೆಸಿದ್ರು.

ಕಳೆದ 13 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಒಮಾಶ್ರಮ ಸದ್ಯ 50 ಹಿರಿಯ ನಾಗರೀಕರಿಗೆ ಮತ್ತು 40 ಹಿರಿಯ ಅನಾಥರಿಗೆ ಉತ್ತಮ ವ್ಯವವಸ್ಥೆಗಳೊಂದಿಗೆ ಆಶ್ರಯ ನೀಡಿದೆ.

ಒಮಾಶ್ರಮದ ನಿವಾಸಿಗಳು ಎಲ್ಲಾ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಊಟ, ವಸತಿ, ಮೆಡಿಕಲ್ ಕೇರಿಂಗ್, ಲೈಬ್ರರಿ ಸೇರಿದಂತೆ ಟಿವಿ, ಇಂಡೋರ್ ಗೇಮ್ಸ್, ಯೋಗ ತರಗತಿಗಳಂತಹ ಅತ್ಯುತ್ತಮ ವ್ಯವಸ್ಥೆಗಳು ಇಲ್ಲಿವೆ. ಎದ್ದೇಳಲು ಸಾಧ್ಯವಾಗದ, ತನ್ನ ಕೆಲಸಗಳನ್ನು ಮಾಡಿಕೊಳ್ಳಲು ಸಾಧ್ಯವಾಗದ ಹಿರಿಯರಿಗೆ ಪ್ರತೇಕ ವ್ಯವಸ್ಥೆಗಳನ್ನು ಮಾಡಲಾಗಿದೆ.

ಉದ್ದೇಶ: ಅನಾಥ ವಯೋವೃದ್ಧರ ಬದುಕು ರೂಪಿಸಲು ಮತ್ತು ಬದುಕಿನ ಮಸ್ಸಂಜೆಯಲ್ಲಿರುವ ಜೀವಗಳಿಗೆ ನೆರವಾಗುವ ಕನಸುಕುನೂರು ಹಿಲ್ ವಾಕ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ: coonoorhillwalker@gmail.com ಅಥವಾ ಕರೆ ಮಾಡಿ Kishore Joseph: 094835 37475

English summary
Omashram Trust- Old Age Care, Bengaluru, Karnataka in Association with Kathirvel Nagammal Trust, Coonoor, Tamil Nadu, Welcomes you to the second season of COONOOR HILLWALKER 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X