ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂಮಿ ನೀಡಿದರೆ ಲಾಜಿಸ್ಟಿಕ್ ಪಾರ್ಕ್‌ ನಿರ್ಮಾಣಕ್ಕೆ ವ್ಯವಸ್ಥೆ: ಗಡ್ಕರಿ

|
Google Oneindia Kannada News

ಬೆಂಗಳೂರು ಸೆಪ್ಟಂಬರ್ 08: ರಾಜ್ಯ ಸರ್ಕಾರಗಳು ಭೂಮಿ ಒದಗಿಸಿದರೆ, ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಲಾಜಿಸ್ಟಿಕ್ ಪಾರ್ಕ್‌ಗಳ ನಿರ್ಮಾಣಕ್ಕೆ ವ್ಯವಸ್ಥೆ ಮಾಡಲಿದೆ ಎಂದು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದರು.

ಬೆಂಗಳೂರಿನಲ್ಲಿ ನಡೆಯುತ್ತಿರುವ ಎರಡು ದಿನ ರಾಷ್ಟ್ರೀಯ ಸಮ್ಮೆಳನವಾದ 'ಮಂಥನ್-ಐಡಿಯಾ ಟು ಆಕ್ಷನ್' ಅನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ಲಾಜಿಸ್ಟಿಕ್ಸ್ ಪಾರ್ಕ್‌ಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಅವುಗಳ ನಿರ್ಮಾಣಕ್ಕೆ ರಾಜ್ಯಗಳು ಜಾಗ ಒದಗಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

ಬೆಂಗಳೂರು ಟ್ರಾಫಿಕ್ ನಿರ್ವಹಣೆಗೆ ಪ್ರತ್ಯೇಕ ಪ್ರಾಧಿಕಾರ ರಚನೆ: ಸಿಎಂಬೆಂಗಳೂರು ಟ್ರಾಫಿಕ್ ನಿರ್ವಹಣೆಗೆ ಪ್ರತ್ಯೇಕ ಪ್ರಾಧಿಕಾರ ರಚನೆ: ಸಿಎಂ

ಲಾಜಿಸ್ಟಿಕ್ ಪಾಕ್‌ ಎಂಬುದು ವಿವಿಧ ಸರಕುಗಳ ಸಂಗ್ರಹಣೆ, ನಿರ್ವಹಣೆ, ವಿತರಣೆ ಮತ್ತು ಸಾಗಣೆಗಾಗಿ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಕೈಗಾರಿಕಾ ಪ್ರದೇಶವಾಗಿದೆ. ಇಂತಹ ಲಾಜಿಸ್ಟಿಕ್ಸ ವೆಚ್ಚವನ್ನು ಶೇ.16ರಿಂದ 10ಕ್ಕೆ ಇಳಿಕೆ ಮಾಡಲು ಸಮಗ್ರ ಬದಲಾವಣೆ ತರುವುದು ಅತ್ಯಗತ್ಯವಾಗಿದೆ. ಚೀನಾದಲ್ಲಿ ಈ ವೆಚ್ಚ ಶೇ.10 ಇದ್ದರೆ ಯುರೋಫ್‌ನಲ್ಲಿ ಶೆ. 12ರಷ್ಟಿದೆ ಎಂದರು.

ರಸ್ತೆ ಮಾರ್ಗದ ಮೂಲಕವೇ ಹೆಚ್ಚು ಸಂಚಾರ

ರಸ್ತೆ ಮಾರ್ಗದ ಮೂಲಕವೇ ಹೆಚ್ಚು ಸಂಚಾರ

ಬಸ್-ಬಂದರುಗಳು ಅಭಿವೃದ್ಧಿಯ ಕೇಂದ್ರಗಳನ್ನಾಗಿ ಮಾಡಬಹುದು. ಹೊಸ ತಂತ್ರಜ್ಞಾನ, ಆಧುನಿಕ ಉಪಕರಣಗಳು ಮತ್ತು ಸಾಮಗ್ರಿಗಳ ಮೂಲಕ ರಸ್ತೆ ಮೂಲಸೌಕರ್ಯವನ್ನು ಸುಧಾರಿಸಬೇಕು. ಅದರಿಂದ ಭೂ, ಜಲ, ರೈಲ್ವೆ ಸೇರಿದಂತೆ ವಿವಿಧ ಸಾರಿಗೆ ವಿಭಾಗಗಳನ್ನು ಜೋಡಿಸಬೇಕಿದೆ.

ಭಾರತವು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸಬೇಕಾದರೆ ಬಹು-ಮಾದರಿ ಸಾರಿಗೆಯೊಂದಿಗೆ ಸಮಗ್ರ ವಿಕಾಸಕ್ಕೆ ಆದ್ಯತೆ ನೀಡಬೇಕಿದೆ. ಶೇ.90ರಷ್ಟು ಜನರ ಪ್ರಯಾಣ ಹಾಗೂ ಶೇ.70 ರಷ್ಟು ಸರಕುಗಳ ಸಂಚಾರ, ವಿನಿಯಮವು ರಸ್ತೆ ಮಾರ್ಗಗಳ ಮೂಲಕ ಆಗುತ್ತದೆ. ಹೀಗಾಗಿ ಜಲಮಾರ್ಗಗಳು, ರೈಲ್ವೇಗಳು ಮತ್ತು ವಿಮಾನ ನಿಲ್ದಾಣಗಳು ಪರಸ್ಪರ ಸಂಬಂಧ ಹೊಂದುವ ಅವಶ್ಯಕತೆಯಿದೆ ಎಂಬುದನ್ನು ಅವರು ವಿವರಿಸಿದರು.

ನವದೆಹಲಿಯ ಕರ್ತವ್ಯ ಪಥವನ್ನು ಉದ್ಘಾಟಿಸಿದ ಪ್ರಧಾನಿ ಮೋದಿನವದೆಹಲಿಯ ಕರ್ತವ್ಯ ಪಥವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ

ಮುಂಬೈನಲ್ಲಿ ಸಿಮೆಂಟ್ ರಸ್ತೆ: ನಿರ್ವಹಣೆ ಮುಕ್ತ

ಮುಂಬೈನಲ್ಲಿ ಸಿಮೆಂಟ್ ರಸ್ತೆ: ನಿರ್ವಹಣೆ ಮುಕ್ತ

ಡಾಂಬರು ಮತ್ತು ಸಿಮೆಂಟ್ ವೈಟ್ ಟಾಪಿಂಗ್ ಮಾರ್ಗ ನಿರ್ಮಾಣದಿಂದಾಗಿ ದೇಶದ ರಸ್ತೆಗಳು ದೀರ್ಘಾಯುಷ್ಯ ಪಡೆದಿವೆ. ಈ ಪೈಕಿ ದೇಶದ 750 ಕಿ.ಮೀ ರಸ್ತೆಗಳು ರಸ್ತೆ ಗುಂಡಿಗಳಿಂದ ಮುಕ್ತವಾಗಿದೆ. ಮುಂಬೈ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಪೂರ್ಣ ಸಿಮೆಂಟ್ ರಸ್ತೆಗಳು ಇವೆ. ಸುಮಾರು 6,000 ಕೋಟಿ ರೂ. ಆರಂಭಿಕ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಇದು 25 ವರ್ಷಗಳವರೆಗೆ ನಿರ್ವಹಣೆಯಿಂದ ಮುಕ್ತವಾಗಿದೆ. ಇನ್ನೂ 14.2 ಕಿ.ಮೀ ಉದ್ದದ ಸುರಂಗದ ವೆಚ್ಚ ಸುಮಾರು 5000 ಕೋಟಿ ರೂ.ಗಳಷ್ಟು ಕಡಿಮೆ ಮಾಡಲಾಗಿದೆ ಎಂದು ಗಡ್ಕರಿ ತಿಳಿಸಿದರು.

ದೇಶಕ್ಕಾಗಿ ಹೊಸ ದೃಷ್ಟಿಯತ್ತ ಗಮನಹರಿಸಿ

ದೇಶಕ್ಕಾಗಿ ಹೊಸ ದೃಷ್ಟಿಯತ್ತ ಗಮನಹರಿಸಿ

ನಾವು ಭಿನ್ನಾಭಿಪ್ರಾಯಗಳನ್ನು ಮೆಟ್ಟಿ ನಿಲ್ಲಬೇಕೇ ವಿನಃ ಬೇರೇನನ್ನೂ ಆಲೋಚಿಸಬಾರದು. ಎಲ್ಲರೂ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಭವಿಷ್ಯದ ನೀತಿಗಳನ್ನು ರೂಪಿಸುವ ಬಗ್ಗೆ ಪರಸ್ಪರ ಸಹಕರಿಸಿ ಒಪ್ಪಿಗೆ ಸೂಚಿಸಬೇಕು. ದೇಶದ ಸಾರಿಗೆ ವ್ಯವಸ್ಥೆ ಭಾರತದಲ್ಲಿ ತಯಾರಿಸಿದ ಇಂಧನದಿಂದಲೇ ಮುನ್ನಡೆಯುವಂತೆ ಮಾಡಬೇಕು. ದೇಶವನ್ನು ಅಗ್ರಗಣ್ಯ ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ಹೊಸ ದೃಷ್ಟಿಯತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕ 80 ಲಕ್ಷ ಮರ

ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕ 80 ಲಕ್ಷ ಮರ

ಪರಿಸರ ಮತ್ತು ಅರಣ್ಯ ಸಚಿವಾಲಯದ ಜೊತೆಗೆ ಹೆದ್ದಾರಿ ಸಚಿವಾಲಯವು 'ಟ್ರೀ ಬ್ಯಾಂಕ್' ಯೋಜನೆಯೊಂದಿಗೆ ಕಾರ್ಯ ನಿರ್ವಹಿಸಲಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಹೆದ್ದಾರಿಗಳ ಉದ್ದಕ್ಕೂ ಮರಗಳನ್ನು ನೆಡಲಿದೆ. ಹಸಿರು ವ್ಯಾಪ್ತಿಯನ್ನು ವಿಸ್ತರಿಸುವುದು ಯೋಜನೆಯ ಉದ್ದೇಶವಾಗಿದೆ. ಸಚಿವಾಲಯ ಈಗಾಗಲೇ 80 ಲಕ್ಷ ಮರಗಳನ್ನು ಖರೀದಿಸಿದೆ. ಈ ಮರಗಳು ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಳ್ಳುವ ಮೂಲಕ ಪರಿಸರಕ್ಕೆ ಸಹಾಯ ಮಾಡುತ್ತದೆ. ಪರಿಣಾಮ ಹಸಿರೀಕರಣದಲ್ಲಿ ಭಾರತದ ಶ್ರೇಯಾಂಕ ಈಗಾಗಲೇ ಹೆಚ್ಚಾಗುತ್ತಿದೆ ಎಂದರು.

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ರಾಜ್ಯ ಸಚಿವ ಡಾ. ವಿ. ಕೆ. ಸಿಂಗ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಲೋಕೋಪಯೋಗಿ ಅಭಿವೃದ್ಧಿ ಸಚಿವ ಸಿ.ಸಿ.ಪಾಟೀಲ್, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಅಧ್ಯಕ್ಷೆ ಅಲ್ಕಾ ಉಪಾಧ್ಯಾಯ, ಗಿರಿಧರ್ ಅರಮನೆ ಮತ್ತಿತರರು ಪಾಲ್ಗೊಂಡಿದ್ದರು.

English summary
Arrangement for construction of logistics park if land is given says Union Land Transport and Highways Minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X