ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ 25 ದೇವಾಲಯಗಳಲ್ಲಿ ಸರ್ಕಾರದಿಂದ ಗೋಶಾಲೆ ನಿರ್ಮಾಣ

|
Google Oneindia Kannada News

ಬೆಂಗಳೂರು, ಫೆಬ್ರವರಿ 26: ರಾಜ್ಯದ 25 ದೇವಸ್ಥಾನಗಳಲ್ಲಿ ಸರ್ಕಾರ ಗೋಶಾಲೆ ನಿರ್ಮಾಣ ಮಾಡಲು ಮುಂದಾಗಿದೆ.

ನಶಿಸುತ್ತಿರುವ ದೇಸಿ ತಳಿ ಹಸುಗಳನ್ನು ರಕ್ಷಿಸುವ ದೃಷ್ಟಿಯಿಂದ ರಾಜ್ಯದ ಪ್ರಮುಖ 25 ದೇವಾಲಯಗಳ ಮೂಲಕ ಪ್ರತ್ಯೇಕ ಗೋ ಶಾಲೆಗಳನ್ನು ಆರಂಭಿಸಿ ನಿರ್ವಹಿಸಲು ಮುಜರಾಯಿ ಇಲಾಖೆ ಮುಂದಾಗಿದೆ.

ಒಟ್ಟು 25 ಎಕರೆ ಗೋಮಾಳ ಜಮೀನು ಬಳಕೆ ಮಾಡಲಾಗುತ್ತಿದೆ. ಪ್ರತಿ ದೇವಾಲಯದ ಸಮೀಪವಿರುವ ಗೋಮಾಳ ಜಮೀನು ಬಳಸಿ ಗೋ ಶಾಲೆ ನಿರ್ಮಿಸಲಾಗುತ್ತಿದೆ.

ಗೋಶಾಲೆ ನಿರ್ಮಾಣವಾಗಲಿರುವ ಪ್ರಮುಖ ದೇವಾಲಯಗಳು

ಗೋಶಾಲೆ ನಿರ್ಮಾಣವಾಗಲಿರುವ ಪ್ರಮುಖ ದೇವಾಲಯಗಳು

ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ, ಉಡುಪಿಯ ಕೊಲ್ಲೂರು ಮೂಕಾಂಬಿಕೆ, ಕಟೀಲು ದುರ್ಗಾಪರಮೇಶ್ವರಿ, ಬೆಳಗಾವಿಯ ಸವದತ್ತಿ ಯಲ್ಲಮ್ಮ ದೇವಾಲಯ ಸೇರಿದಂತೆ ಒಟ್ಟು 25 ದೇವಾಲಯಗಳಲ್ಲಿ ಗೋ ಶಾಲೆ ನಿರ್ಮಾಣವಾಗಲಿದೆ.

ಗೋಮಾಳ ಜಮೀನು ಬಳಸಿ ಗೋ ಶಾಲೆ ನಿರ್ಮಾಣ

ಗೋಮಾಳ ಜಮೀನು ಬಳಸಿ ಗೋ ಶಾಲೆ ನಿರ್ಮಾಣ

ದೇವಸ್ಥಾನದ ಸುತ್ತಮುತ್ತಲಿರುವ ಗೋಮಾಳ ಜಮೀನು ಬಳಸಿ ಗೋ ಶಾಲೆ ನಿರ್ಮಾಣ ಮಾಡಲಾಗುತ್ತಿದೆ. ಪ್ರತಿ ಗೋಶಾಲೆಗೆ ಕನಿಷ್ಠ 25 ಎಕರೆ ಗೋಮಾಳ ಜಮೀನು ಬಳಸಿಕೊಳ್ಳಲು ಯೋಜಿಸಿದೆ.

ಯಾವ್ಯಾವ ಹಸುವಿನ ತಳಿಗಳು ಅಲ್ಲಿರಲಿವೆ

ಯಾವ್ಯಾವ ಹಸುವಿನ ತಳಿಗಳು ಅಲ್ಲಿರಲಿವೆ

ಗೀರ್, ಹಲ್ಳಿಕಾರ್ ಸೇರಿ ನಶಿಸುತ್ತಿರುವ ದೇಶಿ ಹಸುಗಳನ್ನು ಸಂರಕ್ಷಿಸಿ ಅವುಗಳ ಸಂತತಿ ವೃದ್ಧಿಸುವ ಕಾರ್ಯ ಮಾಡಲಿದೆ. ಯೋಜನೆಗೆ ಈಗಾಗಲೇ ಕೆಲವು ದೇವಾಲಯಗಳನ್ನು ಗುರುತಿಸಲಾಗಿದೆ.

ಮೊದಲ ಪ್ರಯತ್ನ

ಮೊದಲ ಪ್ರಯತ್ನ

ಇದೇ ಮೊದಲ ಬಾರಿಗೆ ಸರ್ಕಾರ ದೇವಾಲಯಗಳಲ್ಲಿ ಗೋಶಾಲೆ ನಿರ್ಮಿಸುವ ಪ್ರಯತ್ನ ಮಾಡುತ್ತಿದೆ. ಇದಕ್ಕೂ ಮುನ್ನ ಕೆಲವು ಮಠ, ಸ್ವಾಮೀಜಿಗಳು ಸೇರಿ ಇಂತಹ ಒಂದು ಕಾರ್ಯಕ್ಕೆ ಕೈ ಹಾಕಿದ್ದರು. ಆದರೆ ಸರ್ಕಾರ ಇದೇ ಮೊದಲ ಬಾರಿಗೆ ದೇವಾಲಯಗಳಲ್ಲಿ ಗೋ ಶಾಲೆ ನಿರ್ಮಿಸಲಾಗುತ್ತಿದೆ.

ರಾಜ್ಯದ 25 ದೇವಸ್ಥಾನಗಳಲ್ಲಿ ಸರ್ಕಾರ ಗೋಶಾಲೆ ನಿರ್ಮಾಣ ಮಾಡಲು ಮುಂದಾಗಿದೆ

ರಾಜ್ಯದ 25 ದೇವಸ್ಥಾನಗಳಲ್ಲಿ ಸರ್ಕಾರ ಗೋಶಾಲೆ ನಿರ್ಮಾಣ ಮಾಡಲು ಮುಂದಾಗಿದೆ

ನಶಿಸುತ್ತಿರುವ ದೇಸಿ ತಳಿ ಹಸುಗಳನ್ನು ರಕ್ಷಿಸುವ ದೃಷ್ಟಿಯಿಂದ ರಾಜ್ಯದ ಪ್ರಮುಖ 25 ದೇವಾಲಯಗಳ ಮೂಲಕ ಪ್ರತ್ಯೇಕ ಗೋ ಶಾಲೆಗಳನ್ನು ಆರಂಭಿಸಿ ನಿರ್ವಹಿಸಲು ಮುಜರಾಯಿ ಇಲಾಖೆ ಮುಂದಾಗಿದೆ.

English summary
The government is planning to build 25 Goshala's Near temples in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X