ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಥಳೀಯ ಸಂಸ್ಥೆಗಳ ಚುನಾವಣೆ: ಗೆದ್ದು ಬೀಗಿದ ಕಾಂಗ್ರೆಸ್‌

|
Google Oneindia Kannada News

ಬೆಂಗಳೂರು, ಮೇ 31: ರಾಜ್ಯ ಮಿನಿ ಮಹಾ ಸಮರ ಎಂದೇ ಬಿಂಬಿಸಲಾಗಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಅಂತಿಮವಾಗಿದ್ದು ಕಾಂಗ್ರೆಸ್ ಅತಿ ಹೆಚ್ಚು ಸ್ಥಾನಗಳಲ್ಲಿ ಗೆದ್ದು ಬೀಗಿದೆ.

ಪಟ್ಟಣ ಪಂಚಾಯಿತಿ ಹೊರತು ಪಡಿಸಿ, ಪುರಸಭೆ, ನಗರಸಭೆಗಳಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸಿದೆ. ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಿದೆ.

ನಗರ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಪ್ರಕಟ: ಕಾಂಗ್ರೆಸ್ ಮೇಲುಗೈನಗರ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಪ್ರಕಟ: ಕಾಂಗ್ರೆಸ್ ಮೇಲುಗೈ

ಲೋಕಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದ ಕಾಂಗ್ರೆಸ್‌ಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಮರಳುಗಾಡಿನಲ್ಲಿ ಸಣ್ಣ ನೀರಿನ ಸೆಲೆ ಸಿಕ್ಕಂತಾಗಿದೆ.

ಏಳು ನಗರಸಭೆಯ 217 ಕ್ಷೇತ್ರಗಳ ಪೈಕಿ, ಕಾಂಗ್ರೆಸ್‌ 90 ಸ್ಥಾನಗಳನ್ನು ಗೆದ್ದಿದೆ, ಬಿಜೆಪಿಯು 56 ಸ್ಥಾನಗಳನ್ನು ಗೆದ್ದಿದೆ. ಜೆಡಿಎಸ್ 30 ಗೆದ್ದಿದ್ದರೆ ಇತರೆ 33 ಸ್ಥಾನಗಳಲ್ಲಿ ಜಯ ಸಾಧಿಸಿದೆ.

ಸ್ಥಳೀಯ ಸಂಸ್ಥೆ ಚುನಾವಣೆ : ಅತ್ತೆಗೆ ಸೋಲಿನ ರುಚಿ ತೋರಿಸಿದ ಸೊಸೆ!ಸ್ಥಳೀಯ ಸಂಸ್ಥೆ ಚುನಾವಣೆ : ಅತ್ತೆಗೆ ಸೋಲಿನ ರುಚಿ ತೋರಿಸಿದ ಸೊಸೆ!

30 ಪುರಸಭೆಯ 714 ಸ್ಥಾನಗಳಲ್ಲಿ ಕಾಂಗ್ರೆಸ್‌ ಅತಿ ಹೆಚ್ಚು 322 ಸ್ಥಾನಗಳಲ್ಲಿ ಗೆದ್ದು ಬೀಗಿದೆ. ಬಿಜೆಪಿಯು 184 ಸ್ಥಾನಗಳನ್ನು ಗೆದ್ದಿದೆ. ಜೆಡಿಎಸ್‌ 102 ಸ್ಥಾನಗಳನ್ನು ಗೆದ್ದಿದೆ. ಇತರೆ 106 ಸ್ಥಾನಗಳಲ್ಲಿ ಜಯ ಸಾಧಿಸಿದೆ.

ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಮುನ್ನಡೆ

ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಮುನ್ನಡೆ

19 ಪಟ್ಟಣ ಪಂಚಾಯಿತಿಗಳ 290 ಸೀಟುಗಳ ಪೈಕಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳಲ್ಲಿ ಜಯ ಸಾಧಿಸಿದೆ. ಬಿಜೆಪಿಯು ಒಟ್ಟು 126 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು 97 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ಜೆಡಿಎಸ್‌ನ 34 ಅಭ್ಯರ್ಥಿ ಗೆದ್ದಿದ್ದರೆ, ಇತರೆ 33 ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

ಪ್ರವರ್ಧಮಾನಕ್ಕೆ ಬಂದಿದೆ ಬಿಜೆಪಿ

ಪ್ರವರ್ಧಮಾನಕ್ಕೆ ಬಂದಿದೆ ಬಿಜೆಪಿ

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ಹಿಂದಿನಿಂದಲೂ ಅತಿಯಾದ ಹಿಡಿತವಿತ್ತು. ಬಿಜೆಪಿ ಬಹುತೇಕ ಇಲ್ಲ ಎನ್ನುವೆಂಬುವ ಸನ್ನಿವೇಶವಿತ್ತು. ಆದರೆ ನಿಧಾನಕ್ಕೆ ಚಿತ್ರಣ ಬದಲಾಗುತ್ತಿರುವುದು ಗೋಚರವಾಗುತ್ತಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆ 2019 : ಸಂಪೂರ್ಣ ಫಲಿತಾಂಶ ಸ್ಥಳೀಯ ಸಂಸ್ಥೆಗಳ ಚುನಾವಣೆ 2019 : ಸಂಪೂರ್ಣ ಫಲಿತಾಂಶ

ಮಂಕಾಗುತ್ತಿದೆಯಾ ಜೆಡಿಎಸ್?

ಮಂಕಾಗುತ್ತಿದೆಯಾ ಜೆಡಿಎಸ್?

ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಜೆಡಿಎಸ್ ತನ್ನ ಹಿಡಿತವನ್ನು ನಿಧಾನಕ್ಕೆ ಕಳೆದುಕೊಳ್ಳುತ್ತಿದೆ. ಐದು ವರ್ಷದ ಹಿಂದೆ ಕಾಂಗ್ರೆಸ್‌ಗೆ ಭಾರಿ ಪೈಪೋಟಿ ನೀಡುತ್ತಿದ್ದ ಜೆಡಿಎಸ್‌ ಈ ಬಾರಿ ಇತರೆಗಿಂತಲೂ ಕಡಿಮೆ ಆಗಿದೆ. ಜೆಡಿಎಸ್‌ ತನ್ನ ಹಿಂದಿನ ಹೊಳಪನ್ನು ಕಳೆದುಕೊಳ್ಳುತ್ತಿರುವುದು ಸ್ಪಷ್ಟ.

ಸ್ಥಳೀಯ ಚುನಾವಣೆಯಲ್ಲಿ ಮೈತ್ರಿ ಇಲ್ಲ

ಸ್ಥಳೀಯ ಚುನಾವಣೆಯಲ್ಲಿ ಮೈತ್ರಿ ಇಲ್ಲ

ಕಾಂಗ್ರೆಸ್-ಜೆಡಿಎಸ್ ಪಕ್ಷವು ಸ್ಥಳೀಯ ಚುನಾವಣೆಯಲ್ಲಿ ಮೈತ್ರಿಯ ಆಯ್ಕೆಯನ್ನು ಸ್ಥಳೀಯ ಮುಖಂಡರಿಗೆ ಬಿಟ್ಟಿದ್ದರು. ಅವಶ್ಯಕತೆ ಇದ್ದಲ್ಲಿ ಮೈತ್ರಿ ಮಾಡಿಕೊಳ್ಳಿ ಅಥವಾ ಸ್ನೇಹಯುತವಾಗಿ ಚುನಾವಣೆ ಎದುರಿಸಿ ಎಂದಿದ್ದರು. ಬಹುತೇಕ ಕಡೆ ಕಾಂಗ್ರೆಸ್-ಜೆಡಿಎಸ್ ಎದುರಾಳಿಯಾಗಿಯೇ ಸ್ಪರ್ಧಿಸಿದವು.

English summary
Congress won in maximum number of seats in local body elections Karnataka. BJP is in second place, and third place goes to JDS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X