ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆ 6ರಿಂದ 'ಕನ್ನಡ'ದಲ್ಲಿ ಹೊಸ ಪತ್ರಿಕೆ ಆರಂಭ: ಕೃಪೆ, ಕಾಂಗ್ರೆಸ್

|
Google Oneindia Kannada News

ಬೆಂಗಳೂರು, ಫೆ 1: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಕಾಂಗ್ರೆಸ್, 'ಕನ್ನಡ'ದಲ್ಲಿ ಹೊಸ ಪತ್ರಿಕೆ ಹೊರತರಲು ನಿರ್ಧರಿಸಿದೆ. 'ನಮ್ಮ ಕಾಂಗ್ರೆಸ್' ಎನ್ನುವ ಹೆಸರಿನಲ್ಲಿ ಈ ಪತ್ರಿಕೆ ಸದ್ಯದಲ್ಲೇ ಆರಂಭವಾಗಲಿದೆ.

ಚುನಾವಣೆಗೆ ಇನ್ನು ಮೂರು ತಿಂಗಳು ಬಾಕಿರುವ ಈ ಹೊತ್ತಿನಲ್ಲಿ, ತಮ್ಮ ಪಕ್ಷದ ಸಾಧನೆ ಮತ್ತು ಮೋದಿ ಸರಕಾರದ ವೈಫಲ್ಯತೆಯನ್ನು ಜನರಿಗೆ ತಲುಪಿಸುವಲ್ಲಿ ಈ ಪತ್ರಿಕೆ ಕೆಲಸ ಮಾಡಲಿದ್ದು, ಇದೇ ಬರುವ ಬುಧವಾರ (ಫೆ 6) ಮೊದಲ ಸಂಚಿಕೆ ಹೊರಬರಲಿದೆ.

ಲೋಕಸಭೆ ಚುನಾವಣೆಗೆ ತಯಾರಿ, ಪತ್ರಿಕೆ ಪ್ರಾರಂಭಿಸಲು ರಾಜ್ಯ ಕಾಂಗ್ರೆಸ್ ಚಿಂತನೆಲೋಕಸಭೆ ಚುನಾವಣೆಗೆ ತಯಾರಿ, ಪತ್ರಿಕೆ ಪ್ರಾರಂಭಿಸಲು ರಾಜ್ಯ ಕಾಂಗ್ರೆಸ್ ಚಿಂತನೆ

ಕನ್ನಡದ ಕೆಲವು ಮಾಧ್ಯಮಗಳು ಬಿಜೆಪಿ ಪರ ನಿಲುವನ್ನು ಹೊಂದಿರುವುದರಿಂದ, ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಹಿನ್ನಡೆಯಾಗಬಾರದು ಎನ್ನುವ ನಿಟ್ಟಿನಲ್ಲಿ, ಪಕ್ಷದ ಒಡೆತನದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ರೀತಿಯಲ್ಲಿ, ಇದು ಕೆಲಸ ನಿರ್ವಹಿಸಲಿದೆ.

Congress to start new fortnight Kannada News Paper shortly

'ನಮ್ಮ ಕಾಂಗ್ರೆಸ್' ಪಾಕ್ಷಿಕವಾಗಿ (15 ದಿನಕ್ಕೊಮ್ಮೆ) ಹೊರಬರಲಿದ್ದು, ಪ್ರತೀ ಸಂಚಿಕೆಯಲ್ಲಿ ರಾಜ್ಯದ ಪ್ರಮುಖ ಕಾಂಗ್ರೆಸ್ ಮುಖಂಡರ ಅಭಿಪ್ರಾಯವನ್ನೂ ಹೊತ್ತು ತರಲಿದೆ. ಮೋದಿ ಸರಕಾರದ ವೈಫಲ್ಯವನ್ನು ಎತ್ತಿ ತೋರಿಸುವುದೇ ಪತ್ರಿಕೆಯ ಮೂಲ ಉದ್ದೇಶ.

ನಮ್ಮ ಕಾಂಗ್ರೆಸ್ ಪಾಕ್ಷಿಕವನ್ನು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು ಎನ್ನುವ ಫರ್ಮಾನನ್ನು ಕೆಪಿಸಿಸಿ ಅಧ್ಯಕ್ಷರು ಹೊರಡಿಸುವ ಸಾಧ್ಯತೆಯಿದೆ.

ಕರ್ನಾಟಕ ಕಾಂಗ್ರೆಸ್ ಪ್ರಚಾರ ಸಮಿತಿ ದೀರ್ಘ ಪಟ್ಟಿಗೆ ರಾಹುಲ್ ಒಪ್ಪಿಗೆಕರ್ನಾಟಕ ಕಾಂಗ್ರೆಸ್ ಪ್ರಚಾರ ಸಮಿತಿ ದೀರ್ಘ ಪಟ್ಟಿಗೆ ರಾಹುಲ್ ಒಪ್ಪಿಗೆ

ಕಳೆದ ಏಳು ದಶಕಗಳಲ್ಲಿ ದೇಶಕ್ಕೆ ಮತ್ತು ರಾಜ್ಯಕ್ಕೆ ಕಾಂಗ್ರೆಸ್ ಸರಕಾರದ ಕೊಡುಗೆ, ಪಕ್ಷಕ್ಕಾಗಿ ದುಡಿದವರು, ರಾಜಕೀಯ ವಿಶ್ಲೇಷಣೆ, ವಿರೋಧ ಪಕ್ಷಗಳ ವೈಫಲ್ಯತೆ ಮುಂತಾದವುಗಳು, ಕಾಂಗ್ರೆಸ್ಸಿನ ಹೊಸ ಪಾಕ್ಷಿಕ ಪತ್ರಿಕೆಯಲ್ಲಿ ಇರಲಿದೆ.

English summary
Karnataka Congress all set to introduce new fortnight Kannada Newspaper shortly. As per sources, first edition will come on Feb 6.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X