• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಮ್ಮಿಶ್ರ ಸರ್ಕಾರ ಉಳಿಸಲು ಕಾಂಗ್ರೆಸ್‌ನ 5 ತಂತ್ರಗಳು!

|
   ಸಮ್ಮಿಶ್ರ ಸರ್ಕಾರವನ್ನ ಉಳಿಸಲು 5 ತಂತ್ರಗಳನ್ನ ರೂಪಿಸಿದ ಕರ್ನಾಟಕ ಕಾಂಗ್ರೆಸ್ | Oneindia Kannada

   ಬೆಂಗಳೂರು, ಜನವರಿ 16 : ಕರ್ನಾಟಕದ ಕಾಂಗ್ರೆಸ್‌-ಜೆಡಿಎಸ್ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಬೇಕು ಎಂಬುದು ಎರಡೂ ಪಕ್ಷಗಳ ಗುರಿಯಾಗಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರವನ್ನು ಉಳಿಸಲು ತಂತ್ರ ರೂಪಿಸಿದ್ದಾರೆ.

   ಬಿಜೆಪಿ ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಪ್ರಯತ್ನ ಮಾಡುತ್ತಿದೆ. ಈ ತಂತ್ರವನ್ನು ವಿಫಲಗೊಳಿಸಲು ಕಾಂಗ್ರೆಸ್-ಜೆಡಿಎಸ್ ಜಂಟಿಯಾಗಿ ತಂತ್ರ ರೂಪಿಸಿವೆ. ಆಪರೇಷನ್ ಕಮಲವನ್ನು ವಿಫಲಗೊಳಿಸಲು ಸಿದ್ಧವಾಗಿದೆ.

   ಯಡಿಯೂರಪ್ಪಗೆ ಸಿಎಂ ಆಗೋ ಆಸೆ ಇನ್ನೂ ಹೋಗಿಲ್ಲ : ಸಿದ್ದರಾಮಯ್ಯ

   ಬಿಜೆಪಿಯ ಶಾಸಕರು ಗುರುಗ್ರಾಮದ ರೆಸಾರ್ಟ್‌ನಲ್ಲಿದ್ದಾರೆ. ಕಾಂಗ್ರೆಸ್‌ನ ಕೆಲವು ಅತೃಪ್ತ ಶಾಸಕರು ಮುಂಬೈನಲ್ಲಿದ್ದಾರೆ. ಕರ್ನಾಟಕ ರಾಜಕೀಯದಲ್ಲಿ ಕ್ಷಣಕ್ಕೊಂದು ಬದಲಾವಣೆ ನಡೆಯುತ್ತಿದ್ದು, ಆಪರೇಷನ್ ಕಮಲ ಫಲ ಕೊಟ್ಟಿದೆಯೇ? ಎಂಬ ಬಗ್ಗೆ ಅಂತಿಮ ಚಿತ್ರಣ ಸಿಕ್ಕಿಲ್ಲ.

   ಸ್ಪೀಕರ್ ರಮೇಶ್ ಕುಮಾರ್ ಅವರ ಮುಂದಿರುವ ಆಯ್ಕೆಗಳೇನು?

   ಕಾಂಗ್ರೆಸ್ ಸರ್ಕಾರವನ್ನು ಉಳಿಸಲು ಹಲವು ತಂತ್ರಗಳನ್ನು ರೂಪಿಸಿದೆ. ಶಾಸಕರು ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗದಂತೆ ತಡೆಯಲು 5 ತಂತ್ರಗಳನ್ನು ರೂಪಿಸಿದೆ. ಅವುಗಳೇನು ಎಂಬ ವಿವರ ಚಿತ್ರಗಳಲ್ಲಿದೆ ನೋಡಿ....

   ನಾಲ್ವರು ಸಚಿವರ ರಾಜೀನಾಮೆಗೆ ರಾಹುಲ್ ಗಾಂಧಿ ಸೂಚನೆ?

   ತಂತ್ರ - 1 : ಶಾಸಕರ ಜೊತೆ ಮಾತಕತೆ

   ತಂತ್ರ - 1 : ಶಾಸಕರ ಜೊತೆ ಮಾತಕತೆ

   ಕಾಂಗ್ರೆಸ್‌ನಲ್ಲಿ 5 ರಿಂದ 6 ಶಾಸಕರು ಅಸಮಾಧಾನಗೊಂಡಿದ್ದಾರೆ ಎಂಬ ಮಾಹಿತಿ ಇದೆ. ಶಾಸಕರ ವಾದವನ್ನು ಆಲಿಸಲು ಜನವರಿ 18ರಂದು ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಈಗ ಪಕ್ಷದ ನಾಯಕರ ವಿರುದ್ಧ ಅತೃಪ್ತಿಗೊಂಡು ರೆಸಾರ್ಟ್ ಸೇರಿರುವ ಶಾಸಕರು ಸಹ ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇದು ಸರ್ಕಾರವನ್ನು ಉಳಿಸಿಕೊಳ್ಳು ಮಾಡಿರುವ ಮೊದಲ ತಂತ್ರ

   ತಂತ್ರ- 2 : ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ

   ತಂತ್ರ- 2 : ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ

   ಸಂಪುಟ ಪುನಾರಚನೆ ಬಳಿಕ ಸಚಿವ ಸ್ಥಾನ ಕಳೆದುಕೊಂಡಿರುವ ರಮೇಶ್ ಜಾರಕಿಹೊಳಿ ಅವರು ಅತೃಪ್ತ ಶಾಸಕರ ಗುಂಪಿನ ನಾಯಕ ಎಂಬುದು ಕಾಂಗ್ರೆಸ್ ಪಕ್ಷದ ಊಹೆ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ರಮೇಶ್ ಜಾರಕಿಹೊಳಿ ಅವರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಸಚಿವ ಸ್ಥಾನದ ಆಫರ್ ನೀಡಿದ್ದಾರೆ. ಮೊದಲು ಬೆಂಗಳೂರಿಗೆ ಬನ್ನಿ ಎಂದು ಹೇಳಿದ್ದಾರೆ. ಇದು ಕಾಂಗ್ರೆಸ್‌ನ 2ನೇ ತಂತ್ರವಾಗಿದೆ.

   ತಂತ್ರ - 3 : ನಾಲ್ವರು ಸಚಿವರ ರಾಜೀನಾಮೆ

   ತಂತ್ರ - 3 : ನಾಲ್ವರು ಸಚಿವರ ರಾಜೀನಾಮೆ

   ಕಾಂಗ್ರೆಸ್ ಅತೃಪ್ತಗೊಂಡ ಶಾಸಕರಿಗೆ ಸಚಿವ ಸ್ಥಾನದ ಆಫರ್ ನೀಡಿ ಅವರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳಲು ಮುಂದಾಗಿದೆ. ಹೊಸ ಶಾಸಕರಿಗೆ ಸಚಿವ ಸ್ಥಾನ ನೀಡಬೇಕಾದರೆ ಈಗಿರುವ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. 4 ರಿಂದ 5 ಸಚಿವರಿಂದ ರಾಜೀನಾಮೆ ಕೊಡಿಸಿ, ಹೊಸಬರಿಗೆ ಅವಕಾಶ ನೀಡಲು ಪಕ್ಷ ಚಿಂತನೆ ನಡೆಸುತ್ತಿದೆ. ರಾಜೀನಾಮೆ ನೀಡಲು ಐದು ಸಚಿವರು ಸಹ ಸಿದ್ಧರಾಗಿದ್ದಾರೆ.

   ತಂತ್ರ - 4 : ಶಾಸಕರನ್ನು ಉಳಿಸಿಕೊಳ್ಳಲು ಪ್ಲಾನ್

   ತಂತ್ರ - 4 : ಶಾಸಕರನ್ನು ಉಳಿಸಿಕೊಳ್ಳಲು ಪ್ಲಾನ್

   ಕಾಂಗ್ರೆಸ್ ಪಕ್ಷ ಸರ್ಕಾರವನ್ನು ಉಳಿಸಿಕೊಳ್ಳಬೇಕಾದರೆ ಮೊದಲು ಶಾಸಕರನ್ನು ಉಳಿಸಿಕೊಳ್ಳಬೇಕು. ಜನವರಿ 18ರಂದು ಶಾಸಕಾಂಗ ಪಕ್ಷದ ಸಭೆ ಬಳಿಕ ಅಗತ್ಯವಿದ್ದರೆ ಶಾಸಕರನ್ನು ರೆಸಾರ್ಟ್‌ಗೆ ಕರೆದುಕೊಂಡು ಹೋಗಲು ಪಕ್ಷ ನಿರ್ಧರಿಸಿದೆ. ಬಿಜೆಪಿಯ ತಂತ್ರಗಳು ಬಹುತೇಕ ವಿಫಲವಾಗಿದ್ದು, ಶಾಸಕರು ಪಕ್ಷದ ಜೊತೆಯಲ್ಲಿಯೇ ಇರುತ್ತಾರೆ ಎಂಬುದು ನಾಯಕರ ನಂಬಿಕೆಯಾಗಿದೆ.

   ತಂತ್ರ - 5 : ಕಾನೂನು ಹೋರಾಟ

   ತಂತ್ರ - 5 : ಕಾನೂನು ಹೋರಾಟ

   ಎಲ್ಲಾ ತಂತ್ರಗಳು 'ಕೈ' ಕೊಟ್ಟರೆ ಕಾಂಗ್ರೆಸ್ ಕಾನೂನು ಹೋರಾಟ ನಡೆಸಲಿದೆ. ಹೌದು ಅಂತಿಮವಾಗಿ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಲು ಮುಂದಾದರೆ ಸ್ಪೀಕರ್ ರಮೇಶ್ ಕುಮಾರ್ ಅವರು ಕಾನೂನು ಸಲಹೆ ಪಡೆಯುವ ನೆಪವನ್ನು ಹೇಳಿ ರಾಜೀನಾಮೆಯನ್ನು ಪಡೆದರೂ ಅಂಗೀಕರಿಸದೇ ಇಟ್ಟುಕೊಳ್ಳಲಿದ್ದಾರೆ. ಕಾನೂನಿನ ಮೂಲಕ ಹೇಗೆ ಅವರನ್ನು ಉಳಿಸಿಕೊಳ್ಳಬಹುದು ಎಂದು ಚಿಂತನೆ ನಡೆಸಲಿದೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Karnataka Congress strategy for save Congress and JD(S) alliance government in state. BJP trying to topple alliance government with operation kamala.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more