ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಐಸಿಸಿ ಪುನಾರಚನೆ: ಮಲ್ಲಿಕಾರ್ಜುನ್ ಖರ್ಗೆರಿಗೆ ನಿಜವಾಗಿಯೂ ಹಿನ್ನಡೆ ಆಯ್ತಾ?

|
Google Oneindia Kannada News

ಬೆಂಗಳೂರು, ಸೆ. 12: ಎಐಸಿಸಿ ಅಧ್ಯಕ್ಷರ ಬದಲಾವಣೆಗೆ ಆಗ್ರಹಿಸಿ ಪತ್ರ ಬರೆದಿದ್ದ ಬಹುತೇಕ ಕಾಂಗ್ರೆಸ್ ಹಿರಿಯ ನಾಯಕರಿಗೆ ಪ್ರಮುಖ ಹುದ್ದೆಗಳಿಂದ ಕೋಕ್ ಕೊಡಲಾಗಿದೆ. ವಿಪರ್ಯಾಸ ಎಂದರೆ ಯಾವಾಗಲೂ ಹೈಕಮಾಂಡ್ ಬೆಂಬಲಕ್ಕೆ ನಿಲ್ಲುವ ರಾಜ್ಯದ ಹಿರಿಯ ಕಾಂಗ್ರೆಸ್ಸಿಗ, ಮಾಜಿ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರಿಗೂ ಎಐಸಿಸಿ ಪುನಾರಚನೆಯಲ್ಲಿ ಹಿನ್ನಡೆಯಾಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಅವರನ್ನು ಸಿಡಬ್ಲ್ಯೂಸಿ (ಕಾಂಗ್ರೆಸ್ ಕಾರ್ಯಕಾರಿ ಸಮಿತಿ) ಖಾಯಂ ಆಹ್ವಾನಿತರು ಹಾಗೂ ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗಳಿಂದ ಬಿಡುಗಡೆ ಮಾಡಲಾಗಿದೆ.

ಕರ್ನಾಟಕ ಕಾಂಗ್ರೆಸ್ ಮಟ್ಟಿಗೆ ಹೇಳುವುದಾದರೆ ಮೊದಲ ಬಾರಿ ಎಐಸಿಸಿಯಲ್ಲಿ ರಾಜ್ಯದ ಹೆಚ್ಚು ಕಾಂಗ್ರೆಸ್ ನಾಯಕರಿಗೆ ಅವಕಾಶ ಸಿಕ್ಕಿದೆ. ಮುಂದಿನ ಕಾಂಗ್ರೆಸ್ ಪಕ್ಷದ ಭವಿಷ್ಯದ ದೃಷ್ಟಿಯಿಂದ ಎಐಸಿಸಿ ಪುನಾರಚನೆ ಮಾಡಲಾಗಿದ್ದರೂ, ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಸಿಡಬ್ಲ್ಯೂಸಿ ಖಾಯಂ ಆಹ್ವಾನಿತರ ಜವಾಬ್ದಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದಲೂ ಅವರನ್ನು ಕೈಬಿಡಲಾಗಿದೆ. ಆದರೆ ಇದು ಖರ್ಗೆ ಅವರಿಗೆ ಆಗಿರುವ ಹಿನ್ನಡೆ ಎಂದೆ ಹೇಳಲಾಗುತ್ತಿದೆ. ಆದರೆ ಅದು ನಿಜವಲ್ಲ ಎಂದು ಅವರ ಆಪ್ತರು ಹೇಳುತ್ತಿದ್ದಾರೆ. ಯಾವುದು ನಿಜ? ಇಲ್ಲಿದೆ ಮಾಹಿತಿ!

ಪಕ್ಷದ ಜವಾಬ್ದಾರಿಗಳಿಂದ ಬಿಡುಗಡೆ

ಪಕ್ಷದ ಜವಾಬ್ದಾರಿಗಳಿಂದ ಬಿಡುಗಡೆ

ಮಾಜಿ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರ ಬದಲಿಗೆ ಸಿಡಬ್ಲ್ಯೂಸಿ ಖಾಯಂ ಆಹ್ವಾನಿತರನ್ನಾಗಿ ರಾಜ್ಯದಿಂದ ಮಾಜಿ ಸಚಿವ ಎಚ್.ಕೆ. ಪಾಟೀಲ್ ಹಾಗೂ ಮಾಜಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಅವರನ್ನು ನೇಮಕ ಮಾಡಲಾಗಿದೆ.

ಮಲ್ಲಿಕಾರ್ಜುಜ್ ಖರ್ಗೆ ಅವರಿಂದ ತೆರವಾಗಿರುವ ಎರಡೂ ಹುದ್ದೆಗಳಿಗೆ, ಅಂದರೆ ಸಿಡಬ್ಲ್ಯೂಸಿ ಖಾಯಂ ಆಹ್ವನಿತರು ಹಾಗೂ ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿಯನ್ನಾಗಿ ಮಾಜಿ ಸಚಿವ ಎಚ್.ಕೆ. ಪಾಟೀಲ್ ಅವರನ್ನು ನೇಮಕ ಮಾಡಲಾಗಿದೆ. ಸೋನಿಯಾ ಗಾಂಧಿ ಅವರ ನಾಯಕತ್ವ ಪ್ರಶ್ನಿಸಿ ಪತ್ರ ಬರೆದಿದ್ದ 23 ಹಿರಿಯ ಕಾಂಗ್ರೆಸ್ಸಿಗರ ಒತ್ತಡದ ಹೊರತಾಗಿಯೂ ಮಲ್ಲಿಕಾರ್ಜುನ್ ಖರ್ಗೆ ಅವರು ಗಾಂಧಿ ಕುಟುಂಬದ ಪರವಾಗಿ ನಿಂತಿದ್ದರು. ಹೀಗಾಗಿ ಅವರಿಗೆ ಮಹತ್ವದ ಜವಾಬ್ದಾರಿ ಕೊಡಬಹುದು ಎಂಬ ನಿರೀಕ್ಷೆ ಇತ್ತು.

ಖರ್ಗೆ ಹಿರಿತನ ಕಡೆಗಣನೆ?

ಖರ್ಗೆ ಹಿರಿತನ ಕಡೆಗಣನೆ?

ಪ್ರಧಾನಿ ಮೋದಿ ಅವರು ಮೊದಲ ಸಲ ಪ್ರಧಾನಿಯಾದಾಗ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ನೆಲಕಚ್ಚಿತ್ತು. ಆ ಸಂದರ್ಭದಲ್ಲಿ ಸಂಸದೀಯ ನಾಯಕನಾಗಿ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಸರ್ಕಾರವನ್ನು ಸಮರ್ಥವಾಗಿ ಎದುರಿಸಿದ್ದರು. ಆದರೆ ಹೈಕಮಾಂಡ್ ಅವರ ಹಿರಿತನವನ್ನು ಪಕ್ಷ ಸಂಘಟನೆಯಲ್ಲಿ ಯಾಕೆ ಕಡೆಗಣಿಸಿದೆ ಎಂಬುದು ನಿಗೂಢವಾಗಿದೆ.

ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವುದರೊಂದಿಗೆ ಪ್ರಧಾನಿ ಮೋದಿ ಅವರ ಹಲವು ನೀತಿಗಳನ್ನು ಪ್ರಬಲವಾಗಿ ವಿರೋಧಿಸಿದ್ದರು. ಈ ಎಲ್ಲ ಕಾರಣಗಳಿಂದಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ತಂತ್ರಗಾರಿಕೆ ಮೂಲಕ ಸೋಲಿಲ್ಲದ ಸರದಾರ ಖರ್ಗೆ ಅವರು ಲೋಕಸಭೆ ಪ್ರವೇಶಿಸದಂತೆ ಬಿಜೆಪಿ ಹೈಕಮಾಂಡ್ ತಡೆಯುವಲ್ಲಿ ಸಫಲವಾಗಿತ್ತು. ಆದರೂ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ರಾಜ್ಯಸಭೆಗೆ ನೇಮಕ ಮಾಡುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಮಹತ್ವದ ಜವಾಬ್ದಾರಿ ಕೊಟ್ಟಿತ್ತು.

ರಾಜ್ಯಸಭಾ ಸದಸ್ಯ ಖರ್ಗೆ!

ರಾಜ್ಯಸಭಾ ಸದಸ್ಯ ಖರ್ಗೆ!

ಕರ್ನಾಟಕದಿಂದ ಕಾಂಗ್ರೆಸ್ ಪಕ್ಷದ ಹಲವು ಪ್ರಭಾವಿಗಳು ರಾಜ್ಯಸಭೆ ಪ್ರವೇಶಕ್ಕೆ ಯತ್ನಿಸಿದ್ದರು. ಅವರನ್ನೆಲ್ಲ ಹಿಂದಿಕ್ಕಿ ಕಾಂಗ್ರೆಸ್ ಟಿಕೆಟ್ ಪಡೆದು ರಾಜ್ಯಸಭೆಗೆ ಪ್ರವೇಶ ಪಡೆದಿರುವುದೂ ಎಐಸಿಸಿಯಲ್ಲಿ ಹಲವು ಹುದ್ದೆ ಕೈತಪ್ಪಲು ಕಾರಣವಾಗಿದೆ. ರಾಜ್ಯಸಭೆಗೆ ಮಲ್ಲಿಕಾರ್ಜುನ್ ಖರ್ಗೆ ಅವರು ಪ್ರವೇಶ ಪಡೆದಿದ್ದರಿಂದ ಅವರನ್ನು ಪಕ್ಷ ಸಂಘಟನೆಯಿಂದ ಕೈಬಿಡಲಾಗಿದೆ.

ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಸ್ವತಃ ಮಲ್ಲಿಕಾರ್ಜುನ್ ಖರ್ಗೆ ಅವರು ಅದನ್ನು ನಿರಾಕರಿಸಿದ್ದರು. ಪಕ್ಷದಲ್ಲಿ ಹಲವು ಜವಾಬ್ದಾರಿಗಳಿಂದ ಅವರನ್ನು ಕೈಬಿಡಲು ಕಾರಣವಾಗಿರುವುದು ನಾಯಕತ್ವದ ವಿರುದ್ಧ ಪತ್ರ ಬರೆದಿರುವ ಆ 23 ಹಿರಿಯ ಕಾಂಗ್ರೆಸ್ಸಿಗರು. ಅವರಲ್ಲಿಯೂ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಗುಲಾಂ ನಬೀ ಆಜಾದ್!

Recommended Video

HD kumaraswamy : ನಾವು ಬೇರೆಯವರ ತರ ಕದ್ದು ಮುಚ್ಚಿ ಕೊಲಂಬೊ ಹೋಗಿರ್ಲಿಲ್ಲ | Oneindia Kannada
ಕಾಯುತ್ತಿದೆ ಮಹತ್ವದ ಜವಾಬ್ದಾರಿ

ಕಾಯುತ್ತಿದೆ ಮಹತ್ವದ ಜವಾಬ್ದಾರಿ

ಎಐಸಿಸಿ ಖಾಯಂ ಆಹ್ವಾನಿತ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಮಹಾರಾಷ್ಟ್ರ ಉಸ್ತುವಾರಿ ಜವಾಬ್ದಾರಿಗಳಿಂದ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಬಿಟ್ಟಿರುವುದು ಮೇಲ್ನೋಟಕ್ಕೆ ಹಿನ್ನಡೆಯಂತೆ ಕಂಡು ಬರುತ್ತಿದೆ. ಆದರೆ ಅವೆಲ್ಲಕ್ಕಿಂತ ದೊಡ್ಡ ಹುದ್ದೆಯನ್ನು ಕಾಂಗ್ರೆಸ್ ಹೈಕಮಾಂಡ್ ಖರ್ಗೆ ಅವರಿಗೆ ಕೊಡಲಿದೆ ಎಂಬ ಖಚಿತವಾದ ಮಾಹಿತಿ 'ಒನ್‌ಇಂಡಿಯಾ'ಕ್ಕೆ ಸಿಕ್ಕಿದೆ.

ಹೌದು, ಸೋನಿಯಾ ಗಾಂಧಿ ಅವರ ನಾಯಕತ್ವ ಪ್ರಶ್ನಿಸಿರುವ ನಾಯಕರಲ್ಲಿ ಒಬ್ಬರಾಗಿರುವ ಗುಲಾಂ ನಬಿ ಆಜಾದ್ ಅವರು, ಸದ್ಯ ರಾಜ್ಯಸಭೆ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಅವರನ್ನು ರಾಜ್ಯಸಭಾ ನಾಯಕರ ಹುದ್ದೆಯಿಂದ ಬಿಡುಗಡೆಗೊಳಿಸಿ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ರಾಜ್ಯಸಭಾ ವಿರೋಧ ಪಕ್ಷದ ನಾಯಕರನ್ನಾಗಿ ಮಾಡುವ ಭರವಸೆಯನ್ನು ಹೈಕಮಾಂಡ್ ಕೊಟ್ಟಿದೆ.

ಹೀಗಾಗಿಯೇ ಮೂರು ಹುದ್ದೆಗಳಿಂದ ಮಲ್ಲಿಕಾರ್ಜುಕ್ ಖರ್ಗೆ ಅವರನ್ನು ಕೈಬಿಟ್ಟಿದ್ದರೂ, ಪ್ರಮುಖ ಹುದ್ದೆ ಅವರತ್ತ ಒಲಿದು ಬಂದಿದೆ. ಇನ್ನು ಕೆಲ ದಿನಗಳಲ್ಲಿ ಮಲ್ಲಿಕಾರ್ಜುನ್ ಖರ್ಗೆ ಅವರು ರಾಜ್ಯಸಭೆ ವಿರೋಧ ಪಕ್ಷದ ನಾಯಕರಾಗಿ ನೇಮಕವಾಗಲಿದ್ದಾರೆ. ಆ ಮೂಲಕ ಗಾಂಧಿ ಕುಟುಂಬದ ಪ್ರಬಲ ಬೆಂಬಲಿಗರನ್ನು ಕಾಂಗ್ರೆಸ್ ಹೈಕಮಾಂಡ್ ಕೈಬಿಡುವುದಿಲ್ಲ ಎಂಬುದೂ ಮತ್ತೊಮ್ಮೆ ಸಾಬೀತಾಗಲಿದೆ.

English summary
Mallikarjun Kharge has been released from three major posts from AICC. Yet it is being analyzed as a breakthrough for Mallikarjun Khare. Here's information on why.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X