ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಖನ್ V/S ರಮೇಶ್: ಗೋಕಾಕ್ ಚುನಾವಣೆ ಕುತೂಹಲದ ಕಣ

|
Google Oneindia Kannada News

ಬೆಂಗಳೂರು, ನವೆಂಬರ್ 17: ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಗೋಕಾಕ್‌ನಲ್ಲಿ ಸಹೋದರರ ಮಧ್ಯೆ ಸ್ಪರ್ಧೆ ಏರ್ಪಟ್ಟಿರುವುದು ಸ್ಪಷ್ಟವಾಗಿದೆ.

ಬಿಜೆಪಿಗಿಂತ ಮೊದಲೇ ಉಪಚುನಾವಣೆಯ ತಯಾರಿ ನಡೆಸಿದ್ದ ಕಾಂಗ್ರೆಸ್ ಅಭ್ಯರ್ಥಿಗಳ ಸದ್ಯ 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 7 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮ ಮಾಡಿದೆ.

ಅನರ್ಹರಿಗೆ ಅಗ್ನಿಪರೀಕ್ಷೆ; ಉಪಚುನಾವಣೆಯಲ್ಲಿ ರಾಜಕೀಯ ನಾಯಕರ ಆಟ ಬಲ್ಲೋರಾರು?ಅನರ್ಹರಿಗೆ ಅಗ್ನಿಪರೀಕ್ಷೆ; ಉಪಚುನಾವಣೆಯಲ್ಲಿ ರಾಜಕೀಯ ನಾಯಕರ ಆಟ ಬಲ್ಲೋರಾರು?

ಉಪ ಚುನಾವಣೆ ಮುಗಿಯುವವರೆಗೂ ಲಖನ್ ಜಾರಕಿಹೊಳಿ ತನ್ನ ತಮ್ಮ ಅಲ್ಲ ತನ್ನ ಎದುರಾಳಿ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದರು. ಅದರಂತೆಯೇ ಗೋಕಾಕ್‌ನಲ್ಲಿ ಕಾಂಗ್ರಸ್‌ನಿಂದ ಲಖನ್ ಜಾರಿಕಿಹೊಳಿ ಕಣಕ್ಕಿಳಿಯಲಿದ್ದು, ಇತ್ತ ಬಿಜೆಪಿಯಿಂದ ರಮೇಶ್ ಜಾರಕಿಹೊಳಿ ಚುನಾವಣಾ ಕಣಕ್ಕಿಳಿಯಲಿದ್ದಾರೆ.
ಈ ಬಾರಿ ಗೋಕಾಕ್ ಚುನಾವಣೆ ಬಾರಿ ಕುತೂಹಲವನ್ನು ಮೂಡಿಸಿದೆ.

ಕಾಂಗ್ರೆಸ್ ಎರಡನೇ ಪಟ್ಟಿಯಲ್ಲಿ ಯಾರ್ಯಾರ ಹೆಸರು?

ಕಾಂಗ್ರೆಸ್ ಎರಡನೇ ಪಟ್ಟಿಯಲ್ಲಿ ಯಾರ್ಯಾರ ಹೆಸರು?

ಗಜಾನನ ಬಾಲಚಂದ್ರ ಮಂಗಸೂಳಿ-ಅಥಣಿ, ರಾಜುಕಾಗೆ-ಕಾಗವಾಡ, ಲಖನ್ ಜಾರಕಿಹೊಳಿ-ಗೋಕಾಕ್, ವೆಂಕಟರಾವ್ ಘೋರ್ಪಡೆ-ವಿಜಯನಗರ, ರಿಜ್ವಾನ್ ಅರ್ಷದ್-ಶಿವಾಜಿನಗರ ಹಾಗೂ ಕೆ.ಬಿ.ಚಂದ್ರ ಶೇಖರ್-ಕೆ.ಆರ್.ಪೇಟೆಯಲ್ಲಿ ಟಿಕೆಟ್ ನೀಡಲಾಗಿದೆ.

ಉಪ ಚುನಾವಣೆ ನಂತರ ಕೋಳಿವಾಡ ರಾಜಕೀಯ ನಿವೃತ್ತಿಉಪ ಚುನಾವಣೆ ನಂತರ ಕೋಳಿವಾಡ ರಾಜಕೀಯ ನಿವೃತ್ತಿ

ಯಶವಂತಪುರ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆಯಾಗಿಲ್ಲ

ಯಶವಂತಪುರ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆಯಾಗಿಲ್ಲ

ಸದ್ಯ ಕಾಂಗ್ರೆಸ್ ಪಕ್ಷದ ನಾಯಕರು ಯಶವಂತಪುರ ಕ್ಷೇತ್ರದ ಟಿಕೆಟ್ ಘೋಷಿಸದೆ ಉಳಿಸಿಕೊಂಡಿದ್ದು, ಕೊನೆ ಗಳಿಗೆಯಲ್ಲಿ ನನಗೆ ಟಿಕೆಟ್ ಬೇಡ ಎಂದು ಯಶವಂತಪುರದ ಸಂಭಾವ್ಯ ಅಭ್ಯರ್ಥಿಯಾಗಿದ್ದ ರಾಜಕುಮಾರ್ ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೇರೆ ಅಭ್ಯರ್ಥಿಯ ಹುಡುಕಾಟದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ.

ಮೊದಲ ಹಂತದಲ್ಲಿ ಘೋಷಿಸಿದ್ದ ಅಭ್ಯರ್ಥಿಗಳು

ಮೊದಲ ಹಂತದಲ್ಲಿ ಘೋಷಿಸಿದ್ದ ಅಭ್ಯರ್ಥಿಗಳು

ಹುಣಸೂರು - ಹೆಚ್. ಪಿ ಮಂಜುನಾಥ್, ಚಿಕ್ಕಬಳ್ಳಾಪುರ - ಎಂ.ಆಂಜಿನಪ್ಪ, ಹಿರೇಕೆರೂರು - ಬಿ.ಹೆಚ್.ಬನ್ನಿಕೋಡ್, ಕೆ.ಆರ್.ಪುರಂ - ಎಂ.ನಾರಾಯಣಸ್ವಾಮಿ, ಮಹಾಲಕ್ಷ್ಮಿ ಲೇಔಟ್- ಶಿವರಾಜ್, ಹೊಸಕೋಟೆ - ಪದ್ಮಾವತಿ ಸುರೇಶ್, ಯಲ್ಲಾಪುರ - ಭೀಮಣ್ಣ ನಾಯ್ಕ್, ರಾಣೆಬೆನ್ನೂರು - ಕೆಬಿ ಕೋಳಿವಾಡ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿತ್ತು.-

ರಾಣೇಬೆನ್ನೂರು ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಘೋಷಿಸಿದ ಸಿಎಂ ಬಿಎಸ್ವೈರಾಣೇಬೆನ್ನೂರು ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಘೋಷಿಸಿದ ಸಿಎಂ ಬಿಎಸ್ವೈ

15 ಕ್ಷೇತ್ರಗಳಿಗೆ ಕಾಂಗ್ರೆಸ್ ವೀಕ್ಷಕರ ನೇಮಕ

15 ಕ್ಷೇತ್ರಗಳಿಗೆ ಕಾಂಗ್ರೆಸ್ ವೀಕ್ಷಕರ ನೇಮಕ

ಡಿಸೆಂಬರ್ 5ರಂದು ನಡೆಯಲಿರುವ 15 ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ವೀಕ್ಷಕರನ್ನು ನೇಮಕ ಮಾಡಲಾಗಿದೆ. ಅಥಣಿ ಕ್ಷೇತ್ರಕ್ಕೆ ಎಂಬಿ ಪಾಟೀಲ್, ಕಾಗವಾಡಕ್ಕೆ ಈಶ್ವರ್ ಖಂಡ್ರೆ, ಗೋಕಾಕ್‌ಗೆ ಸತೀಶ್ ಜಾರಕಿಹೊಳಿ, ಯಲ್ಲಾಪುರ-ಆರ್‌ವಿ ದೇಶಪಾಂಡೆ, ಹಿರೇಕೆರೂರು-ಎಚ್‌ಕೆ ಪಾಟೀಲ್, ರಾಣೆಬೆನ್ನೂರು-ಎಸ್‌ಆರ್‌ಪಾಟೀಲ್, ವಿಜಯನಗರ-ಬಸವರಾಜ ರಾಯರೆಡ್ಡಿ, ಚಿಕ್ಕಬಳ್ಳಾಪುರ-ಶಿವಶಂಕರ್‌ ರೆಡ್ಡಿ, ಕೆಆರ್‌ಪುರ-ಕೆಜೆ ಜಾರ್ಜ್ ಮತ್ತು ರಾಮಲಿಂಗಾರೆಡ್ಡಿ, ಯಶವಂತಪುರಕ್ಕೆ ಮಾಜಿ ಸಚಿವ ಎಂ ಕೃಷ್ಣಪ್ಪ, ಹೊಸಕೋಟೆಗೆ ಕೃಷ್ಣಬೈರೇಗೌಡ, ಶಿವಾಜಿನಗರ-ಯುಟು ಖಾದರ್, ಮಹಾಲಕ್ಷ್ಮೀ ಲೇಔಟ್‌-ಎಚ್‌ಎಂ ರೇವಣ್ಣ, ಕೆಆರ್ ಪೇಟೆ-ಚೆಲುವರಾಯಸ್ವಾಮಿ, ಹುಣಸೂರಿಗೆ ಎಚ್‌ಸಿ ಮಹಾದೇವಪ್ಪ ಅವರನ್ನು ನೇಮಕ ಮಾಡಲಾಗಿದೆ.

English summary
Congress Released Its Second list of 6 candidates for the Karnataka Assembly By Elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X