ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಕಪ್ಪದ ಡೈರಿ 'ನಕಲಿ': ಕಾಂಗ್ರೆಸ್ಸಿಗೆ ತೀವ್ರ ಮುಖಭಂಗ

ಹತ್ತು ವರ್ಷ ಹಿಂದಿನದ್ದು ಎನ್ನಲಾಗುತ್ತಿರುವ ಯಡಿಯೂರಪ್ಪನವರ 'ಕಪ್ಪದ ಡೈರಿ'ಯನ್ನು, ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಹೊರತಂದ ಕಾಂಗ್ರೆಸ್ಸಿಗೆ ತೀವ್ರ ಮುಜುಗರವಾಗುವ ಪತ್ರಿಕಾ ಹೇಳಿಕೆಯನ್ನು ಆದಾಯ ತೆರಿಗೆ (ಐಟಿ) ಇಲಾಖೆ ನೀಡಿದೆ.

|
Google Oneindia Kannada News

ಬೆಂಗಳೂರು, ಮಾರ್ಚ್ 23: ಹತ್ತು ವರ್ಷ ಹಿಂದಿನದ್ದು ಎನ್ನಲಾಗುತ್ತಿರುವ ಯಡಿಯೂರಪ್ಪನವರ 'ಕಪ್ಪದ ಡೈರಿ'ಯನ್ನು, ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಹೊರತಂದ ಕಾಂಗ್ರೆಸ್ಸಿಗೆ ತೀವ್ರ ಮುಜುಗರವಾಗುವ ಪತ್ರಿಕಾ ಹೇಳಿಕೆಯನ್ನು ಆದಾಯ ತೆರಿಗೆ (ಐಟಿ) ಇಲಾಖೆ ನೀಡಿದೆ.

ಶನಿವಾರ (ಮಾ 24) ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಕರ್ನಾಟಕ, ಗೋವಾ ವಲಯದ ಡಿಜಿ ಬಾಲಕೃಷ್ಣನ್, ಕಾಂಗ್ರೆಸ್ ಬಿಡುಗಡೆ ಮಾಡಿರುವ ಡೈರಿ, ಸತ್ಯಕ್ಕೆ ದೂರವಾದದ್ದು ಎಂದಿದ್ದಾರೆ.

ಡೈರಿ ವಿಚಾರ ಕೋರ್ಟ್ ನಲ್ಲಿ ನಿಲ್ಲೋದಿಲ್ಲಡೈರಿ ವಿಚಾರ ಕೋರ್ಟ್ ನಲ್ಲಿ ನಿಲ್ಲೋದಿಲ್ಲ

ಡೈರಿಯನ್ನು ಹೈದರಾಬಾದ್ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು, ಅದರ ವರದಿಯ ಪ್ರಕಾರ, ಅದೊಂದು ನಕಲಿ ದಾಖಲೆಗಳು ಎನ್ನುವ ಮೂಲಕ, ಬಾಲಕೃಷ್ಣನ್, ಬಿಜೆಪಿ ರಾಜ್ಯಾಧ್ಯಕ್ಷರಿಗೆ ಕ್ಲೀನ್ ಚಿಟ್ ನೀಡಿದ್ದಾರೆ.

Congress released Yeddyurappa diary is fake, IT department confirms

ಹಿಂದೆ ಐಟಿ ದಾಳಿ ನಡೆದ ಸಂದರ್ಭದಲ್ಲಿ ಕೆಲವೊಂದು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅದೆಲ್ಲವೂ ಜೆರಾಕ್ಸ್ ಪ್ರತಿಗಳಾಗಿದ್ದರಿಂದ, ಅದನ್ನು ಹೈದರಾಬಾದಿಗೆ ಕಳುಹಿಸಲಾಗಿತ್ತು. ಇದರಲ್ಲಿ ಸತ್ಯಾಂಶ ಇಲ್ಲ, ಅದೊಂದು ಸುಳ್ಳು ದಾಖಲೆ ಎಂದು ಬಾಲಕೃಷ್ಣನ್ ಹೇಳಿದ್ದಾರೆ.

ಶುಕ್ರವಾರ ಕಾಂಗ್ರೆಸ್ ಬಿಡುಗಡೆ ಮಾಡಿದ್ದ ದಾಖಲೆಯ ಮೊದಲ ಪುಟ ನಮಗೆ ಲಭ್ಯವಾಗಿರಲಿಲ್ಲ. ಸಚಿವ ಡಿ ಕೆ ಶಿವಕುಮಾರ್ ಅವರ ನಿವಾಸ/ಕಚೇರಿಯ ಮೇಲೆ ಐಟಿ ದಾಳಿ ನಡೆದಾಗ, ಕೆಲವೊಂದು ದಾಖಲೆಗಳು ಸಿಕ್ಕಿದ್ದವು. ಅದನ್ನೇ ಆಧಾರವಾಗಿ ಇಟ್ಟುಕೊಂಡು ಸಚಿವರು ತನಿಖೆಯಿಂದ ಮುಕ್ತವಾಗಲು ಬಯಸಿದ್ದರು ಎಂದು ಡಿಜಿ ಬಾಲಕೃಷ್ಣನ್ ಹೇಳಿದ್ದಾರೆ.

ಡಿಕೆಶಿ ಹೇಳೋದು ಏನುಡಿಕೆಶಿ ಹೇಳೋದು ಏನು

ಯಡಿಯೂರಪ್ಪ ಅವರು ಪಕ್ಷದ ವಿವಿಧ ನಾಯಕರಿಗೆ ಒಟ್ಟು 1,800 ಕೋಟಿ ರೂಪಾಯಿ ಹಣ ನೀಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ತಮ್ಮದೇ ರೀತಿಯಲ್ಲಿ ಕಥೆ ಹೇಳುತ್ತಿದ್ದಾರೆ ಎಂದು ಸಚಿವ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದರು.

English summary
Congress released former CM and Karnataka BJP President BS Yeddyurappa diary is fake, IT department confirms in Bengaluru on March 23.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X