ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಸ್ಲಂ ಅಭಿವೃದ್ಧಿ' ಹೆಸರಿನಲ್ಲಿ ಕಾಂಗ್ರೆಸ್ಸಿನಿಂದ ಮೋಸ : ಶೆಟ್ಟರ್

By ಅನುಷಾ ರವಿ
|
Google Oneindia Kannada News

ಬೆಂಗಳೂರು, ಜನವರಿ 24: ಮಲೇಷಿಯಾದ ಮರಳು ಭಾಗ್ಯದ ಬಗ್ಗೆ ಆರೋಪ ಮಾಡಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಇಂದು ಕರ್ನಾಟಕ ಸರ್ಕಾರದ ವಸತಿ ಯೋಜನೆಯ ಅವ್ಯಹಾರಗಳ ಬಗ್ಗೆ ಪ್ರತಿಕಾಗೋಷ್ಠಿ ನಡೆಸಿದರು.

ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಕೊಳಗೇರಿ ಅಭಿವೃದ್ಧಿ ಮಾಡಲು ಸ್ಲಂ ಅಭಿವೃದ್ದಿ ಮಂಡಳಿಯು ಕರೆದ ಟೆಂಡರ್ ಎಲ್ಲವೂ ಬೋಗಸ್, ಕಮಿಷನ್ ಹಗರಣದಲ್ಲಿ 2,500 ಕೋಟಿ ರು ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದಾರೆ.

ಮಲೇಷಿಯಾದಿಂದ ಮರಳು ಆಮದಾಗಿ ಬಿಡದಿಗೆ ಬಂದು ಸೇರಿದೆ. ಮೊದಲ ದಿನವೆ ಭರ್ಜರಿ ಮಾರಾಟವೂ ಆಗಿದೆ. ಆದರೆ, ಮಲೇಷಿಯಾದಿಂದ ಮರಳು ಭಾಗ್ಯದ ಹಿಂದೆ ಕೋಟ್ಯಂತರ ರೂಪಾಯಿ ಲೂಟಿ ಹೊಡೆಯುವ ಜಾಲವಿದೆ ಎಂದು ಶೆಟ್ಟರ್ ಗಂಭೀರ ಆರೋಪ ಮಾಡಿದ್ದರು.

ಸಿಎಂ ಸಿದ್ದರಾಮಯ್ಯ ಹಾಗೂ ಮಾರಾಟದ ಹೊಣೆ ಹೊತ್ತಿರುವ ಎಂಎಸ್​ಐಎಲ್ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಮಂಗಳವಾರ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

ಮಲೇಷ್ಯಾದಿಂದ ವರ್ಷಕ್ಕೆ 36 ಲಕ್ಷ ಟನ್​ನಂತೆ 5 ವರ್ಷಕ್ಕೆ 180 ಲಕ್ಷ ಟನ್ ಮರಳು ಖರೀದಿಗೆ ಎಂಎಸ್​ಐಎಲ್ ಮುಂದಾಗಿದೆ. ಯಾವುದೇ ಅನುಭವ ಇಲ್ಲದ ನಕಲಿ ಕಂಪನಿ ದುಬೈನ ಪೊಸಿಡಾನ್ ಗೆ ಬ್ಯಾಂಕ್ ಶ್ಯೂರಿಟಿ ನೀಡಿರುವ ಸಿಂಗಪುರದಲ್ಲಿದೆ ಎನ್ನಲಾದ ಎಕ್ಸಿಸ್ ಕ್ರೆಡಿಟ್ ಬ್ಯಾಂಕ್ ಕೂಡಾ ನಕಲಿ ಎಂದು ಆರೋಪಿಸಿದ್ದಾರೆ.

ಮಲೇಷಿಯಾ ಮರಳು ಮೋಸ

ಮಲೇಷಿಯಾ ಮರಳು ಮೋಸ

ಮಲೇಷಿಯಾದಿಂದ ವಾರ್ಷಿಕವಾಗಿ 36 ಲಕ್ಷ ಟನ್​ನಂತೆ 5 ವರ್ಷಕ್ಕೆ 180 ಲಕ್ಷ ಟನ್ ಮರಳು ಖರೀದಿಗೆ ಎಂಎಸ್​ಐಎಲ್ ಮುಂದಾಗಿದೆ. ಯಾವುದೇ ಅನುಭವ ಇಲ್ಲದ ನಕಲಿ ಕಂಪನಿ ದುಬೈನ ಪೊಸಿಡಾನ್ ಗೆ ಬ್ಯಾಂಕ್ ಶ್ಯೂರಿಟಿ ನೀಡಿರುವ ಸಿಂಗಪುರದಲ್ಲಿದೆ ಎನ್ನಲಾದ ಎಕ್ಸಿಸ್ ಕ್ರೆಡಿಟ್ ಬ್ಯಾಂಕ್ ಕೂಡಾ ನಕಲಿ ಎಂದು ಆರೋಪಿಸಿದ್ದಾರೆ.

ವಸತಿ ಸಚಿವ ಕೃಷ್ಣಪ್ಪ ಅವರಿಗೆ ಕಿಕ್ ಬ್ಯಾಕ್

ವಸತಿ ಸಚಿವ ಕೃಷ್ಣಪ್ಪ ಅವರಿಗೆ ಕಿಕ್ ಬ್ಯಾಕ್

ಪಾರದರ್ಶಕ ಸರ್ಕಾರ ಎನ್ನುತ್ತಾ ಚುನಾವಣಾ ಪ್ರಚಾರ ಮಾಡುತ್ತಿರುವ ಸಿದ್ದರಾಮಯ್ಯ ಅವರಿಗೆ ಈ ಆರೋಪಗಳ ಬಗ್ಗೆ ಮೊದಲು ಉತ್ತರಿಸಲಿ ಎಂದು ಶೆಟ್ಟರ್ ಪ್ರಶ್ನಿಸಿದ್ದಾರೆ. ಒಟ್ಟಾರೆ, ಸಿಕ್ಕಿರುವ ಅನುದಾನ ಮೊತ್ತದ ಶೇ10ರಷ್ಟು 250 ಕೋಟಿ ರು ಬಳಸಿ 50,000 ಮಂದಿಗೆ ಮನೆ ನಿರ್ಮಾಣಕ್ಕೆ ಮುಂದಾಗಲಾಗಿದೆ. ಈ ಮೊತ್ತ ವಸತಿ ಸಚಿವ ಕೃಷ್ಣಪ್ಪ, ಅವರ ಮಗ ಪ್ರಿಯಾಕೃಷ್ಣ ಹಾಗೂ ಶಾಸಕ ಆರ್ ವಿ ದೇವರಾಜ್ ಅವರಿಗೆ ಕಿಕ್ ಬ್ಯಾಕ್ ರೂಪದಲ್ಲಿ ಸೇರಿದೆ.

ಸ್ಲಂ ಅಭಿವೃದ್ಧಿ ನಿಗಮದಿಂದ ಟೆಂಡರ್

ಸ್ಲಂ ಅಭಿವೃದ್ಧಿ ನಿಗಮದಿಂದ ಟೆಂಡರ್

ಪ್ರಧಾನ ಮಂತ್ರಿಗಳ ಆವಾಸ್ ಯೋಜನೆಯಡಿಯಲ್ಲಿ ನಗರ ಪ್ರದೇಶದಲ್ಲಿ 50 ಸಾವಿರ ಮಂದಿಗೆ ಮನೆ ನಿರ್ಮಾಣಕ್ಕಾಗಿ ಸೆಪ್ಟೆಂಬರ್ 12, 2017 ಹಾಗೂ ಜನವರಿ 05,2018ರಂದು ಸ್ಲಂ ಅಭಿವೃದ್ಧಿ ನಿಗಮದಿಂದ ಟೆಂಡರ್ ಕರೆಯಲಾಗಿತ್ತು. ವಸತಿ ಸಚಿವರು ತಮಗೆ ಬೇಕಾದವರಿಗೆ ಕಡಿಮೆ ಮೊತ್ತಕ್ಕೆ ಟೆಂಡರ್ ಪಾಸ್ ಮಾಡಿಕೊಂಡಿದ್ದಾರೆ.

ಸಿಬಿಐ ತನಿಖೆ ನಡೆಯಬೇಕು

ಸಿಬಿಐ ತನಿಖೆ ನಡೆಯಬೇಕು

99 ಪ್ಯಾಕೇಜ್ ಮಂಜೂರಾಗಿದ್ದರೂ 43 ಪ್ಯಾಕೇಜಿಗೆ ಇಳಿಸಲಾಗಿದೆ. ಆದರೆ, 2,500 ಕೋಟಿ ರು ಯೋಜನಾ ವೆಚ್ಚವನ್ನು ತಗ್ಗಿಸಲಿಲ್ಲ. ಡಿಸೆಂಬರ್ 22, 2017ರಂದು ಟೆಂಡರ್ ಗೆ ತಡೆ ನೀಡಿ, ತನಿಖೆಗೆ ಸ್ಲಂ ಬೋರ್ಡ್ ಚೇರ್ಮನ್ ಆದೇಶಿಸಿದ್ದಾರೆ. ಆದರೆ, ಗುತ್ತಿಗೆದಾರರು, ಸಚಿವರಿಗೆ ಕಿಕ್ ಬ್ಯಾಕ್ ತಲುಪುವುದು ನಿಂತಿಲ್ಲ. ಈ ಬಗ್ಗೆ ಸಿಬಿಐ ತನಿಖೆ ನಡೆಯಬೇಕು ಎಂದು ಶೆಟ್ಟರ್ ಆಗ್ರಹಿಸಿದ್ದಾರೆ.

English summary
The Bharatiya Janata Party (BJP) has alleged that the Congress in Karnataka has indulged in a Rs 2,500 crore "commission scam". Former Chief Minister Jagadish Shettar on Wednesday claimed that tenders from slum development board for projects under Pradhana Mantri Awaz Yojana (PMAY) were fraudulently given to corrupt contractors for a kickback of Rs 250 crores.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X