• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಚಿವ ಸುಧಾಕರ್ ವಿರುದ್ಧ ಸದನದಲ್ಲಿ ಕಾಂಗ್ರೆಸ್‌ ಪ್ರತಿಭಟನೆ

|

ಬೆಂಗಳೂರು, ಮಾರ್ಚ್ 24: ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ರಾಜೀನಾಮೆಗೆ ಒತ್ತಾಯಿಸಿ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಪ್ರತಿಭಟನೆ ನಡೆಸುತ್ತಿದೆ. ಸಚಿವರ ಹೇಳಿಕೆಗೆ ವಿವಿಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.

   'ಎಲ್ಲಾ ನಾಯಕರ ತನಿಖೆಯಾಗಲಿ ಯಾರು ಏಕಪತ್ನಿವ್ರತಸ್ಥರು? ಯಾರಿಗೆಲ್ಲ ಅನೈತಿಕ ಸಂಬಂಧ ಇದೆ ಗೊತ್ತಾಗುತ್ತೆ' ಸಚಿವ ಸುಧಾಕರ್ ಹೇಳಿಕೆ | Oneindia Kannada

   ಬುಧವಾರ ಬೆಳಗ್ಗೆ ಡಾ. ಕೆ. ಸುಧಾಕರ್ ಅವರು "ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್, ರಮೇಶ್ ಕುಮಾರ್ ಸತ್ಯಹರಿಶ್ಚಂದ್ರರಾ?. ಇವರೆಲ್ಲರೂ ಏಕಪತ್ನಿ ವ್ರತ ಮಾಡುತ್ತಿದ್ದಾರಾ?" ಎಂದು ಹೇಳಿಕೆ ನೀಡಿದ್ದರು.

   ಸಿದ್ದರಾಮಯ್ಯ, ಡಿಕೆಶಿ ಸತ್ಯಹರಿಶ್ಚಂದ್ರರಾ?; ಸುಧಾಕರ್ ಸಿದ್ದರಾಮಯ್ಯ, ಡಿಕೆಶಿ ಸತ್ಯಹರಿಶ್ಚಂದ್ರರಾ?; ಸುಧಾಕರ್

   "ನಾನೂ ಸೇರಿದಂತೆ 224 ಶಾಸಕರ ಮೇಲೆಯೂ ತನಿಖೆಯಾಗಲಿ. ಎಲ್ಲರನ್ನು ತನಿಖೆ ಮಾಡಿದಾಗ ಬಂಡವಾಳ ಗೊತ್ತಾಗುತ್ತೆ. ಎಲ್ಲಾ ಮಂತ್ರಿಗಳದ್ದೂ, ಶಾಸಕರದ್ದೂ, ವಿರೋಧ ಪಕ್ಷದವರದ್ದು ಕೂಡ ತನಿಖೆಯಾಗಲಿ. ಯಾರಿಗೆ ಅನೈತಿಕ ಸಂಬಂಧವಿದೆ? ಎಂಬುದು ತಿಳಿಯಲಿ ಬಿಡಿ" ಎಂದು ಹೇಳಿದ್ದರು.

    ಸಚಿವ ಸುಧಾಕರ್ ಹೇಳಿದ 'ಅನೈತಿಕ ಸಂಬಂಧ': ಕುಮಾರಸ್ವಾಮಿ ಕೊಟ್ಟ ಮುತ್ತಿನಂತಹ ಪ್ರತಿಕ್ರಿಯೆ ಸಚಿವ ಸುಧಾಕರ್ ಹೇಳಿದ 'ಅನೈತಿಕ ಸಂಬಂಧ': ಕುಮಾರಸ್ವಾಮಿ ಕೊಟ್ಟ ಮುತ್ತಿನಂತಹ ಪ್ರತಿಕ್ರಿಯೆ

   ಮಧ್ಯಾಹ್ನ ಭೋಜನ ವಿರಾಮದ ಬಳಿಕ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಸಿದ್ದರಾಮಯ್ಯ ಅವರು ಸಚಿವ ಸುಧಾಕರ್ ಹೇಳಿಕೆಯನ್ನು ಪ್ರಸ್ತಾಪಿಸಿದರು. "224 ಶಾಸಕರು ವ್ಯಭಿಚಾರಿಗಳಾ?, ನಿಮಗೆ ಮಾನ, ಮರ್ಯಾದೆ ಇಲ್ವಾ?" ಎಂದು ಪ್ರಶ್ನಿಸಿದರು.

   ಸಿಡಿ ಕೇಸ್: ಕೋರ್ಟ್‌ಗೆ ಹೋಗುವುದೇ ಮಹಾಪರಾಧವೇ, ಡಾ. ಸುಧಾಕರ್ ಪ್ರಶ್ನೆ ಸಿಡಿ ಕೇಸ್: ಕೋರ್ಟ್‌ಗೆ ಹೋಗುವುದೇ ಮಹಾಪರಾಧವೇ, ಡಾ. ಸುಧಾಕರ್ ಪ್ರಶ್ನೆ

   "ನಿಮ್ಮ ಹೇಳಿಕೆಯನ್ನು ವಾಪಸ್ ಪಡೆಯಿರಿ. ಸಚಿವರ ರಾಜೀನಾಮೆ ಕೊಡಿಸಿ" ಎಂದು ಸಿದ್ದರಾಮಯ್ಯ ಆಗ್ರಹಿಸಿದರು. ಜೆಡಿಎಸ್ ಸದಸ್ಯರು ಸದ ಇದಕ್ಕೆ ಧ್ವನಿ ಗೂಡಿಸಿದರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಾಂಗ್ರೆಸ್ ಸದಸ್ಯರನ್ನು ಸಮಾಧಾನ ಪಡಿಸಿದರು.

   ಸಚಿವರ ಸ್ಪಷ್ಟನೆ; ತಮ್ಮ ಹೇಳಿಕೆ ಬಗ್ಗೆ ಸಚಿವ ಸುಧಾಕರ್ ಸ್ಪಷ್ಟನೆ ನೀಡಿ ಟ್ವೀಟ್ ಮಾಡಿದ್ದಾರೆ.

   English summary
   Congress protest in assembly session demanding resignation of Dr. K. Sudhakar. Minister statement sparked controversy.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X