ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲಾ ಚೆನ್ನಾಗಿದೆಯಾ? ಮೋದಿಗೆ ಪ್ರಿಯಾಂಕ್ ಖರ್ಗೆ ಟ್ವೀಟ್ ಟಾಂಗ್

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 23: 'ಎಲ್ಲಾ ಚೆನ್ನಾಗಿದೆ'- ಹೀಗೆ ಅಮೆರಿಕದ ಹ್ಯೂಸ್ಟನ್‌ನಲ್ಲಿ ಭಾನುವಾರ ರಾತ್ರಿ ಕಿಕ್ಕಿರಿದು ಸೇರಿದ್ದ ಜನಸಮೂಹದ ಮುಂದೆ ಪ್ರಧಾನಿ ನರೇಂದ್ರ ಮೋದಿ 'ಹೌಡಿ ಮೋದಿ' ಕಾರ್ಯಕ್ರಮದಲ್ಲಿ ಕನ್ನಡ ಸೇರಿದಂತೆ ಹತ್ತು ಭಾಷೆಗಳಲ್ಲಿ ಉಲಿದಿದ್ದರು. ಅದಕ್ಕೆ ಅವರಿಗೆ ಜೈಕಾರ ಹಾಕುತ್ತಿದ್ದ ಜನಸಮೂಹ ಹರ್ಷೋದ್ಗಾರದೊಂದಿಗೆ ಬೆಂಬಲ ನೀಡಿತ್ತು.

ಆದರೆ ಮೋದಿ ಅವರ ಹೇಳಿಕೆಯನ್ನು ವಿರೋಧಪಕ್ಷಗಳು ಟೀಕೆಗೆ ಅಸ್ತ್ರವನ್ನಾಗಿ ಬಳಸಿಕೊಂಡಿವೆ. ಎಲ್ಲವೂ ಚೆನ್ನಾಗಿವೆ ಎನ್ನುವ ಮೋದಿ ದೇಶ ಎದುರಿಸುತ್ತಿರುವ ಆರ್ಥಿಕ ಸಮಸ್ಯೆಗಳು, ನಿರುದ್ಯೋಗದ ಆಘಾತ, ನೆರೆಪರಿಹಾರದ ಸಮಸ್ಯೆ, ಕೋಮು ಸಂಘರ್ಷ, ಗುಂಪು ಹತ್ಯೆ ಮುಂತಾದವುಗಳನ್ನು ಮರೆತಿದ್ದಾರೆ ಎಂದು ಟೀಕಿಸಿದ್ದಾರೆ.

ವಿಡಿಯೋ: 'ಹೌಡಿ ಮೋದಿ' ಯಲ್ಲಿ ಕನ್ನಡ ಸೇರಿ ಹತ್ತು ಭಾಷೆ ಉಲಿದ ಮೋದಿವಿಡಿಯೋ: 'ಹೌಡಿ ಮೋದಿ' ಯಲ್ಲಿ ಕನ್ನಡ ಸೇರಿ ಹತ್ತು ಭಾಷೆ ಉಲಿದ ಮೋದಿ

ಮಾಜಿ ಸಚಿವ ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ ಆರು ಅಂಶಗಳನ್ನು ಮುಂದಿಟ್ಟು ಮೋದಿ ಅವರ 'ಎಲ್ಲ ಚೆನ್ನಾಗಿದೆ' ಎಂಬ ಹೇಳಿಕೆಯನ್ನು ವ್ಯಂಗ್ಯವಾಡಿದ್ದಾರೆ. ರಾಜ್ಯದ ಪ್ರವಾಹದ ಸಂಕಷ್ಟಕ್ಕೆ ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡದೆಯೇ ಇರುವುದು, ಕನ್ನಡಿಗರಿಗೆ ಉದ್ಯೋಗ ಸಿಗದೆ ಇರುವುದು, ಕಲಬುರಗಿಯ ಅಭಿವೃದ್ಧಿ ಮರೀಚಿಕೆಯಾಗಿರುವ ಸಂಗತಿಗಳನ್ನು ಅವರು ಪ್ರಸ್ತಾಪಿಸಿದ್ದಾರೆ.

 Congress Priyank Kharge Slams Narendra Modi Everything Is Fine Howdy Modi

"ಎಲ್ಲಾ ಚೆನ್ನಾಗಿದೆ!" - ಅಮೇರಿಕಾದಲ್ಲಿ ಶ್ರೀ ಮೋದಿ

1) ಕರ್ನಾಟಕಕ್ಕೆ ಪ್ರವಾಹ ಪರಿಹಾರ ಧನ ಸಿಕ್ಕಿಲ್ಲ

2) ಆಪರೇಷನ್ ಕಮಲದಿಂದಾಗಿ ಸ್ಥಿರ ಸರ್ಕಾರವೇ ಇಲ್ಲ

3) ಕಲಬುರಗಿಗೆ ರೇಲ್ವೆ ವಿಭಾಗ ಇಲ್ಲ

ಪಾಕಿಸ್ತಾನದ ಹೆಸರೆತ್ತದೆ ಮಾತಿನಲ್ಲಿ ತಿವಿದ ಪ್ರಧಾನಿ ನರೇಂದ್ರ ಮೋದಿಪಾಕಿಸ್ತಾನದ ಹೆಸರೆತ್ತದೆ ಮಾತಿನಲ್ಲಿ ತಿವಿದ ಪ್ರಧಾನಿ ನರೇಂದ್ರ ಮೋದಿ

4) ಐ.ಬಿ.ಪಿ.ಎಸ್ ಪರೀಕ್ಷೆಗಳಲ್ಲಿನ ನಿಯಮ ಬದಲಾವಣೆಯಿಂದಾಗಿ ಕನ್ನಡಿಗರಿಗೆ ಉದ್ಯೋಗಾವಕಾಶ ಇಲ್ಲ

5) ಕಲಬುರಗಿಯ ರಾಷ್ಟ್ರೀಯ ಬಂಡವಾಳ ತಯಾರಿಕಾ ವಲಯದಲ್ಲಿ ಯಾವುದೇ ಪ್ರಗತಿ ಇಲ್ಲ

6) ಇಡೀ ಕಲ್ಯಾಣ ಕರ್ನಾಟಕ ಭಾಗದಿಂದ ಒಬ್ಬರೇ ಸಚಿವರಿರುವುದರಿಂದ ಅಗತ್ಯ ಪ್ರಾತಿನಿಧ್ಯವೇ ಇಲ್ಲ

"ಎಲ್ಲಾ ಚೆನ್ನಾಗಿದೆ" ಎಂದಿದ್ದಕ್ಕೆ ಧನ್ಯವಾದಗಳು! ಎಂದು ಪ್ರಿಮಾಂಕ್ ಖರ್ಗೆ, ಮೋದಿ ಅವರ ಹೇಳಿಕೆಗೆ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

English summary
Congress leader Priyank Kharge criticised PM Narendra Modi for his statement 'Everything Is Fine' in India at 'Howdy Modi' event in Houston.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X