ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪುಟದಲ್ಲಿ ಯಾವ್ಯಾವ ಜಾತಿಗೆ ಪ್ರತಿನಿಧಿತ್ವ ನೀಡಿದೆ ಕಾಂಗ್ರೆಸ್?

By Manjunatha
|
Google Oneindia Kannada News

ಬೆಂಗಳೂರು, ಜೂನ್ 06: ಇಂದು ಸಂಪುಟ ಸೇರಲಿರುವ ಕಾಂಗ್ರೆಸ್ ಪಕ್ಷದ ಶಾಸಕರ ನಿಕಟ ಸಂಭಾವ್ಯ ಪಟ್ಟಿ ಇಲ್ಲಿದೆ. ಜಾತಿವಾರು ಹಾಗೂ ಪ್ರಾಂತವಾರು ಪ್ರಾತಿನಿಧ್ಯ ನೀಡಿ ಶಾಸಕರನ್ನು ಆಯ್ಕೆ ಮಾಡಿರುವುದು ಸ್ಪಷ್ಟ.

ಸಿಕ್ಕಿರುವ 22 ಸ್ಥಾನಗಳಲ್ಲಿ ಪ್ರಸ್ತುತ 15 ಸ್ಥಾನಗಳನ್ನು ತುಂಬಲು ಮಾತ್ರವೇ ಹೈಕಮಾಂಡ್ ನಿರ್ಧರಿಸಿದ್ದು ಉಳಿದ ಸ್ಥಾನಗಳನ್ನು ಮುಂದಿನ ದಿನಗಳಲ್ಲಿ ತುಂಬಲಾಗುವುದು.

ಸಂಪುಟ ಸೇರಲಿರುವ ಕಾಂಗ್ರೆಸ್ ಶಾಸಕರು ಯಾರು? ಇಲ್ಲಿದೆ ಸಂಭಾವ್ಯ ಪಟ್ಟಿಸಂಪುಟ ಸೇರಲಿರುವ ಕಾಂಗ್ರೆಸ್ ಶಾಸಕರು ಯಾರು? ಇಲ್ಲಿದೆ ಸಂಭಾವ್ಯ ಪಟ್ಟಿ

ಉತ್ತರ ಕರ್ನಾಟಕ, ಕರಾವಳಿ, ಹಳೆ ಮೈಸೂರು ಮತ್ತು ಬೆಂಗಳೂರು ಪ್ರಾಂತಗಳಿಗೆ ಆದ್ಯತೆ ನೀಡಿರುವ ಜೊತೆಗೆ. ಎಲ್ಲ ಸಮುದಾಯದವರನ್ನು ತೃಪ್ತಿ ಪಡಿಸಲೆಂದು ಜಾತಿವಾರು ಶಾಸಕರನ್ನು ಸಚಿವ ಸ್ಥಾನಕ್ಕೆ ಆಯ್ಕೆ ಮಾಡಿರುವುದು ಕಾಣುತ್ತಿದೆ.

congress possible ministers list and their caste detail

ಲಿಂಗಾಯತ ಸಮುದಾಯಕ್ಕೆ ಎರಡು ಸ್ಥಾನ, ಮುಸ್ಲಿಂಗೆ ಎರಡು ಸ್ಥಾನ, ಒಕ್ಕಲಿಗ ಸಮುದಾಯಕ್ಕೆ ಎರಡು ಸ್ಥಾನ ನೀಡಲಾಗಿದೆ. ದಲಿತ ಸಮುದಾಯಕ್ಕೆ ನಾಲ್ಕು ಸ್ಥಾನಗಳನ್ನು ನೀಡಲಾಗಿದೆ. ಇಲ್ಲಿ ಎಡಗೈ-ಬಲಗೈ ಸಮುದಾಯದ ಲೆಕ್ಕಾಚಾರವೂ ಹಾಕಲಾಗಿದೆ.

ಕುರುಬ, ಉಪ್ಪಾರ, ಈಡಿಗ ಸಮುದಾಯಗಳಿಗೆ ತಲಾ ಒಂದು ಸ್ಥಾನವನ್ನು ನೀಡಲಾಗಿದೆ. ಪ್ರಾಂತವಾರು ವಿಶ್ಲೇಷಣೆ ಮಾಡಿದಲ್ಲಿ ಬೆಂಗಳೂರಿಗೆ ಅತಿ ಹೆಚ್ಚು, 3 ಸ್ಥಾನಗಳನ್ನು ನೀಡಲಾಗಿದೆ.

ಕಾಂಗ್ರೆಸ್ ಸಂಪುಟ ವಿಸ್ತರಣೆ ಕಸರತ್ತು ಬುಧವಾರ ಬೆಳಿಗ್ಗೆಗೆ ಮುಂದೂಡಿಕೆ ಕಾಂಗ್ರೆಸ್ ಸಂಪುಟ ವಿಸ್ತರಣೆ ಕಸರತ್ತು ಬುಧವಾರ ಬೆಳಿಗ್ಗೆಗೆ ಮುಂದೂಡಿಕೆ

ಮುಂಬೈ ಮತ್ತು ಹೈದರಾಬಾದ್ ಕರ್ನಾಟಕಕ್ಕೆ ಹಲವು ಸ್ಥಾನಗಳನ್ನು ನೀಡಲಾಗಿರುವುದು ವಿಶೇಷ. ಇಲ್ಲಿ ಕಳೆದು ಹೋಗಿರುವ ಕಾಂಗ್ರೆಸ್ ಪ್ರಭಾವವನ್ನು ಮರಳಿ ಪಡೆಯುವ ಪ್ರಯತ್ನವಾಗಿಯೂ ಇದನ್ನು ಪರಿಗಣಿಸಬಹುದಾಗಿದೆ.

ಯಾರಿಗೆ ಯಾವ ಖಾತೆ ನೀಡಲಾಗುತ್ತಿದೆ ಎಂಬುದು ಸ್ಪಷ್ಟವಾಗಿಲ್ಲ. ಇಂದು ಪ್ರಮಾಣ ವಚನ ಸ್ವೀಕರಿಸಿದ ಸಚಿವರು ಪ್ರತಿನಿಧಿಸುವ ಜಾತಿಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ...

ಹುಮನಾಬಾದ್ - ರಾಜಶೇಖರ್ ಪಾಟೀಲ್- ಲಿಂಗಾಯತ

ಬ್ಯಾಟರಾಯನಪುರ -ಕೃಷ್ಣಬೈರೇಗೌಡ- ಒಕ್ಕಲಿಗ

ವಿಜಯಪುರ-ಶಿವಾನಂದ ಪಾಟೀಲ್-ಲಿಂಗಾಯತ

ಚಾಮರಾಜಪೇಟೆ - ಜಮೀರ್ ಅಹ್ಮದ್- ಮುಸ್ಲಿಂ

ಮಂಗಳೂರು - ಯು.ಟಿ.ಖಾದರ್- ಮುಸ್ಲಿಂ

ಗೌರಿಬಿದನೂರು - ಶಿವಶಂಕರ್ ರೆಡ್ಡಿ, -ರೆಡ್ಡಿ

ಹಾವೇರಿ - ಶಂಕರ್- ಕುರುಬ

ಕೆ.ಜೆ. ಜಾರ್ಜ್ - ಕ್ರೈಸ್ತ

ಕನಕಪುರ-ಡಿ.ಕೆ.ಶಿವಕುಮಾರ್ - ಒಕ್ಕಲಿಗ

ಹಳಿಯಾಳ -ಆರ್ .ವಿ.ದೇಶಪಾಂಡೆ- ಬ್ರಾಹ್ಮಣ

ಚಾಮರಾಜನಗರ - ಪುಟ್ಟರಂಗಶೆಟ್ಟಿ - ಉಪ್ಪಾರ

ವಿಧಾನಪರಿಷತ್ತು -ಜಯಮಾಲ - (ಈಡಿಗ)

ಚಿತ್ತಾಪೂರ- ಪ್ರಿಯಾಂಕ್ ಖರ್ಗೆ- ದಲಿತ

ಯಮಕನ ಮರಡಿ- ರಮೇಶ್ ಜಾರಕೀಹೊಳಿ- ನಾಯಕ (ಎಸ್ಟಿ)

ಪಾವಗಡ -ವೆಂಕಟರಮಣಪ್ಪ - ದಲಿತ(ಭೋವಿ)

English summary
Congress going to give ministery post on the basis of caste and region. congress trying to satisfie all communities. 18 MLA's expected to swore in as ministers today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X