ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದರಾಮಯ್ಯ ತಂತ್ರದಿಂದಾಗಿ ರಮೇಶ್ ಜಾರಕಿಹೊಳಿ ಏಕಾಂಗಿ!

|
Google Oneindia Kannada News

Recommended Video

ಏಕಾಂಗಿಯಾದ ರಮೇಶ್ ಜಾಋಕಿಹೊಳಿ ಮುಂದೇನು ಮಾಡ್ತಾರೆ? | Oneindia Kannada

ಬೆಂಗಳೂರು, ಮೇ 27 : ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಅವರನ್ನು ಏಕಾಂಗಿಯಾಗಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯೂಹ ರಚನೆ ಮಾಡಿದ್ದಾರೆ. ಪಕ್ಷದ ನಾಯಕರ ವಿರುದ್ಧ ಅಸಮಾಧಾನಗೊಂಡಿರುವ ಅವರಿಗೆ ತಕ್ಕ ಪಾಠ ಕಲಿಸಲಾಗುತ್ತದೆ.

ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಮೈತ್ರಿ ಸರ್ಕಾರವನ್ನು ಗಟ್ಟಿಗೊಳಿಸಲು ಕಾಂಗ್ರೆಸ್-ಜೆಡಿಎಸ್ ಹಲವು ತಂತ್ರಗಳನ್ನು ರೂಪಿಸಿವೆ. ಮೇ 29ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಸಿದ್ದರಾಮಯ್ಯ ಅವರು ಕರೆದಿದ್ದಾರೆ.

ರಮೇಶ್ ಜಾರಕಿಹೊಳಿ ಭೇಟಿಯಾದ ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ!ರಮೇಶ್ ಜಾರಕಿಹೊಳಿ ಭೇಟಿಯಾದ ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ!

ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಪಕ್ಷಕ್ಕೆ ತಲೆನೋವಾಗಿದ್ದಾರೆ. ಸಿದ್ದರಾಮಯ್ಯ ಅವರ ಮಾತನ್ನು ಸಹ ಅವರು ಕೇಳುತ್ತಿಲ್ಲ. ಆದ್ದರಿಂದ, ಅವರಿಗೆ ಹಿನ್ನಡೆ ಉಂಟು ಮಾಡಲು ಸಿದ್ದರಾಮಯ್ಯ ಬಯಸಿದ್ದು, ರಮೇಶ್ ಜಾರಕಿಹೊಳಿ ಬೆಂಬಲಿಗರ ಜೊತೆ ಮಾತುಕತೆಗೆ ಮುಂದಾಗಿದ್ದಾರೆ.

ಕುತೂಹಲ ಮೂಡಿಸಿದ ಎಸ್‌.ಎಂ.ಕೃಷ್ಣ, ರಮೇಶ್ ಜಾರಕಿಹೊಳಿ ಭೇಟಿಕುತೂಹಲ ಮೂಡಿಸಿದ ಎಸ್‌.ಎಂ.ಕೃಷ್ಣ, ರಮೇಶ್ ಜಾರಕಿಹೊಳಿ ಭೇಟಿ

ಈಗಾಗಲೇ ಸಚಿವ ಸಂಪುಟ ಪುನಾರಚನೆ ಬಗ್ಗೆ ಕಾಂಗ್ರೆಸ್-ಜೆಡಿಎಸ್‌ನಲ್ಲಿ ಮಾತಕತೆ ನಡೆಯುತ್ತಿದ್ದು. ರಮೇಶ್ ಜಾರಕಿಹೊಳಿ ಅವರನ್ನು ಪರಿಗಣನೆ ಮಾಡದಿರಲು ನಿರ್ಧರಿಸಲಾಗಿದೆ. ಬಿಜೆಪಿ ಸೇರುವ ತಯಾರಿಯಲ್ಲಿರುವ ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಚಟುವಟಿಕೆಗಳಿಂದ ದೂರವಾಗಿದ್ದಾರೆ.

ಬೆಳಗಾವಿ ರಾಜಕೀಯ : ಬಿಜೆಪಿ ನಾಯಕರ ಜೊತೆ ರಮೇಶ್ ಜಾರಕಿಹೊಳಿ ಸಭೆಬೆಳಗಾವಿ ರಾಜಕೀಯ : ಬಿಜೆಪಿ ನಾಯಕರ ಜೊತೆ ರಮೇಶ್ ಜಾರಕಿಹೊಳಿ ಸಭೆ

ಸಿದ್ದರಾಮಯ್ಯ ನೇರ ಮಾತುಕತೆ

ಸಿದ್ದರಾಮಯ್ಯ ನೇರ ಮಾತುಕತೆ

ತಮ್ಮ ಮಾತನ್ನು ಮೀರುತ್ತಿರುವ ರಮೇಶ್ ಜಾರಕಿಹೊಳಿ ಅವರಿಗೆ ಸರಿಯಾ ಪಾಠ ಕಲಿಸಲು ಸಿದ್ದರಾಮಯ್ಯ ಅವರು ಅಖಾಡಕ್ಕೆ ಇಳಿದಿದ್ದಾರೆ. ರಮೇಶ್ ಜಾರಕಿಹೊಳಿ ಜೊತೆಗಿರುವ ಶಾಸಕರ ಜೊತೆ ಸಿದ್ದರಾಮಯ್ಯ ಅವರು ನೇರವಾಗಿ ಮಾತಕತೆ ನಡೆಸಲಿದ್ದು, ಸಚಿವ ಸ್ಥಾನ ಸೇರಿದಂತೆ ಹಲವು ಆಶ್ವಾಸನೆ ನೀಡಿ ರಮೇಶ್ ಅವರ ಜೊತೆ ಹೋಗದಂತೆ ತಡೆಯಲಿದ್ದಾರೆ.

ನಾಯಕನಂತೆ ಬಿಂಬಿಸದಿರುವುದು

ನಾಯಕನಂತೆ ಬಿಂಬಿಸದಿರುವುದು

ರಮೇಶ್ ಜಾರಕಿಹೊಳಿ ಈಗಾಗಲೇ ಕಾಂಗ್ರೆಸ್ ಚಟುವಟಿಕೆಗಳಿಂದ ದೂರವಾಗಿದ್ದಾರೆ. ಅವರನ್ನು ದೊದ್ದ ನಾಯಕನಂತೆ ಬಿಂಬಿಸದೇ ಇರಲು ಕಾಂಗ್ರೆಸ್ ತೀರ್ಮಾನಿಸಿದೆ. ಕಾಂಗ್ರೆಸ್ ಬಿಡುವ ಕುರಿತು ಅವರು ತೆಗೆದುಕೊಳ್ಳುವ ನಿರ್ಧಾರವನ್ನು ಕಾದು ನೋಡಲು ಪಕ್ಷ ತೀರ್ಮಾನಿಸಿದೆ.

ಪಕ್ಷದಲ್ಲಿ ಸ್ಥಾನಮಾನ

ಪಕ್ಷದಲ್ಲಿ ಸ್ಥಾನಮಾನ

ರಮೇಶ್ ಜಾರಕಿಹೊಳಿ ಬೆಂಬಲಿಸುವ ಶಾಸಕರು ಮಾತ್ರವಲ್ಲ ಗೋಕಾಕ್‌ ಮತ್ತು ಇತರ ಜಿಲ್ಲೆಯಲ್ಲಿ ಅವರನ್ನು ಬೆಂಬಲಿಸುವ ನಾಯಕರಿಗೆ ಪಕ್ಷದಲ್ಲಿ ಹೊಸ ಜವಾಬ್ದಾರಿಗಳನ್ನು ಕೊಟ್ಟು ಅವರ ಮನವೊಲಿಸಲಾಗುತ್ತದೆ. ಈ ಮೂಲಕ ರಮೇಶ್ ಜಾರಕಿಹೊಳಿ ಅವರನ್ನು ಏಕಾಂಗಿಯಾಗಿಸಲು ಯೋಜನೆ ರೂಪಿಸಲಾಗಿದೆ.

ರಮೇಶ್ ಜಾರಕಿಹೊಳಿ ಚಿತ್ತ ಎತ್ತ?

ರಮೇಶ್ ಜಾರಕಿಹೊಳಿ ಚಿತ್ತ ಎತ್ತ?

ರಮೇಶ್ ಜಾರಕಿಹೊಳಿ ಅವರು ಬೆಂಗಳೂರಿನಲ್ಲಿಯೇ ಇದ್ದಾರೆ. ಭಾನುವಾರ ಅವರು ಕೇಂದ್ರದ ಮಾಜಿ ಸಚಿವ ಎಸ್.ಎಂ.ಕೃಷ್ಣ ಭೇಟಿ ಮಾಡಿದ್ದು ಕುತೂಹಲಕ್ಕೆ ಕಾರಣವಾಗಿತ್ತು. ಸದ್ಯ, ಯಾವುದೇ ಶಾಸಕರು ರಮೇಶ್ ಜಾರಕಿಹೊಳಿ ಅವರ ಜೊತೆ ಮಾತುಕತೆ ನಡೆಸಿಲ್ಲ.

English summary
Karnataka Congress all set for sideline Gokak MLA Ramesh Jarakiholi who upset with party leaders. Party may induct Ramesh Jarakiholi supporters to H.D.Kumaraswamy cabinet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X