
2023ರ ಚುನಾವಣೆ ಸಿದ್ಧತೆ; ಎಬಿಸಿ ಪ್ಲಾನ್ನಂತೆ ಟಿಕೆಟ್ ಹಂಚಿಕೆ ಯೋಜನೆ?
ಬೆಂಗಳೂರು, ಜೂನ್04: ದೇಶದ ರಾಜಕಾರಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಶಾದಾಯಕವಾಗಿರುವ ರಾಜ್ಯವೆಂದರೆ ಕರ್ನಾಟಕ ಮಾತ್ರವೇ. ರಾಜ್ಯ ರಾಜಕೀಯದಲ್ಲಿ ಬಿಜೆಪಿ ಅಧಿಕಾರಕ್ಕೆ ಏರಿದೆ. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬಾರದಿದ್ದರಿಂದ ಕಾಂಗ್ರೆಸ್, ಜೆಡಿಎಸ್ ಕೈ ಜೋಡಿಸಿ ಸರ್ಕಾರ ರಚನೆ ಮಾಡಿತ್ತು. ಆ ಬಳಿಕ ನಡೆದ ಆಪರೇಷನ್ ಕಮಲದ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂದಿತ್ತು.
ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ಅಧಿಕಾರವನ್ನು ಅನುಭವಿಬೇಕಾದರೆ 2023ರ ಚುನಾವಣೆಯಲ್ಲಿ ಪೂರ್ಣ ಬಹುಮತ ಮೂಲಕವೇ ಅಧಿಕಾರಕ್ಕೆ ಬರಬೇಕು ಎಂಬುದು ಕಾಂಗ್ರೆಸ್ ಲೆಕ್ಕಚಾರವಾಗಿದೆ. ಕಾಂಗ್ರೆಸ್ ಆಂತರಿಕ ಸಮೀಕ್ಷೆಯು ಪಕ್ಷದ ಎನರ್ಜಿಯನ್ನು ಮತ್ತಷ್ಟು ಹೆಚ್ಚಿಸಿದೆ. ಇದರಿಂದಾಗಿ ಕಾಂಗ್ರೆಸ್ ಪಕ್ಷದಲ್ಲೀಗ ರಣೋತ್ಸಾಹ ಕಂಡು ಬರುತ್ತಿದೆ. ಎಬಿಸಿ ಆಧಾರದಲ್ಲಿ ಅಭ್ಯರ್ಥಿಗಳಿಗೆ ಪಕ್ಷ ಟಿಕೆಟ್ ನೀಡಲಿದೆ.
ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಯಾವ ರೀತಿ ಕಾರ್ಯೋನ್ಮುಕವಾಗಿ ಕೆಲಸವನ್ನು ಮಾಡಬೇಕು. ಕಾಂಗ್ರೆಸ್ ಸ್ಥಿರ ಸರ್ಕಾರವನ್ನು ರಚಿಸಬೇಕಾದರೆ ಹೆಚ್ಚಿನ ಸ್ಥಾನವನ್ನು ಪಡೆದು ಅಧಿಕಾರವನ್ನು ಪಡೆಯಬೇಕು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಹೊಸ ಕಾರ್ಯತಂತ್ರವನ್ನು ರೂಪಿಸಲು ಸಜ್ಜಾಗಿದೆ. 2018ರ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋತ ಕ್ಷೇತ್ರಗಳು ಮತ್ತು ಈವರೆಗೂ ಕಾಂಗ್ರೆಸ್ ಪಕ್ಷ ಗೆಲ್ಲದಿರುವ ಕ್ಷೇತ್ರಕ್ಕಾಗಿ ವಿಶೇಷಗಮನವನ್ನು ಕೇಂದ್ರಿಕರಿಸಲಾಗುತ್ತಿದೆ.

ಸಮೀಕ್ಷೆ ಆಧರಿಸಿ ಹಲವು ಚರ್ಚೆ ಕಾರ್ಯತಂತ್ರ
2023ರ ಚುನಾವಣೆಯನ್ನು ನಡೆಸಲು ಕಾಂಗ್ರೆಸ್ ರಣತಂತ್ರವನ್ನು ರಚನೆ ಮಾಡಲು ಪ್ರಾರಂಭಿಸಿದೆ. ಕಾಂಗ್ರೆಸ್ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಕಾಂಗ್ರೆಸ್ 130 ಕ್ಷೇತ್ರಗಳನ್ನು ಗೆಲ್ಲಲಿದೆ ಎಂದ ತಿಳಿಸಿದೆ. ಈ ಸಮೀಕ್ಷಾ ವರದಿ ಆಧರಿಸಿ ಕಾರ್ಯತಂತ್ರ ರೂಪಿಸುತ್ತಿರುವ ಕಾಂಗ್ರೆಸ್ ದೆಹಲಿ ಸೇರಿದಂತೆ ರಾಜ್ಯದಲ್ಲೂ ನಿರಂತರ ಚರ್ಚೆಗಳನ್ನು ನಡೆಸುತ್ತಿದೆ. ಪಕ್ಷವನ್ನು ಅಧಿಕಾರಕ್ಕೆ ತರಲು ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಟಾರ್ಗೆಟ್ ನೊಂದಿಗೆ ಮಹತ್ವದ ಚರ್ಚೆಯು ನಡೆಯುತ್ತಿವೆ.

ಶತಾಯಗತಾಯ 'ಕೈ' ಗೆಲ್ಲಿಸಲು ಕಸರತ್ತು
ಕಾಂಗ್ರೆಸ್ ಪಕ್ಷ 20-25 ವರ್ಷಗಳಿಂದ ಸತತವಾಗಿ ಸೋಲುತ್ತಿರುವ ಕ್ಷೇತ್ರಗಳ ಗೆಲುವಿಗೆ ಈಗಿನಿಂದಲೇ ಗಮನಹರಿಸುತ್ತಿದೆ. ಕೊಡಗು, ಶಿಗ್ಗಾವಿ, ಚಿತ್ರದುರ್ಗ, ಸುಳ್ಯ, ರಾಜಾಜಿನಗರ ಸೇರಿದಂತೆ ಹಲವು ಕ್ಷೇತ್ರಗಳು ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಈಗಿನಿಂದಲೇ ಆದ್ಯತೆ ನೀಡಲಾಗುತ್ತಿದೆ. ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಬರಬೇಕೆಂದರೆ ಹಳೆಯ ತಂತ್ರಗಳನ್ನು ಬದಿಗಿಟ್ಟು ಹೊಸ ಕಾರ್ಯತಂತ್ರ ರೂಪಿಸಿವುದು ಅನಿವಾರ್ಯವಾಗಿದೆ.

ಟಿಕೆಟ್ ನೀಡುವ ಭರವಸೆಯೊಂದಿಗೆ ಕೆಲಸ ಮಾಡಲು ಸೂಚನೆ
ಕಾಂಗ್ರೆಸ್ ಪಕ್ಷ ಸೂಕ್ತ ಅಭ್ಯರ್ಥಿಗಳನ್ನು ಹುಡುಕಾಡಿ ಕೆಲವು ಯುವಕರು ಮತ್ತು ಮಾಜಿ ಶಾಸಕರು, ಸಚಿವರ ಜೊತೆ ಸಂಪರ್ಕದಲ್ಲಿದ್ದಾರೆ. 2023ರ ಚುನಾವಣೆ ಘೋಷಣೆಗೂ ಮುನ್ನವೇ ಕೆಲವು ಕ್ಷೇತ್ರಗಳಿಗೆ ಟಿಕೆಟ್ ಅನೌನ್ಸ್ ಮಾಡಲಿದ್ದಾರೆ. ಆ ಮೂಲಕ ಅಭ್ಯರ್ಥಿ ಬಗ್ಗೆ ಇರುವ ಗೊಂದ ನಿವಾರಿಸುವುದು ಕ್ಷೇತ್ರದಲ್ಲಿ ಹೆಚ್ಚು ಸಕ್ರಿಯವಾಗಿ ಗುರುತಿಸಿಕೊಳ್ಳಲು ಸಹಾಯವಾಗಲಿದೆ. ಮೊದಲು ಯಾವ ಜಾತಿ ಕ್ಷೇತ್ರದಲ್ಲಿ ನಿರ್ಣಾಯಕವಾಗಿದೆ ಎಂಬುದನ್ನ ಅರಿಯುವುದು, ಯಾವ ಆಕಾಂಕ್ಷಿ ಮೇಲೆ ಕ್ಷೇತ್ರದ ಜನರ ಒಲವು ಇದೆ ಎಂಬುದರ ಮೇಲೆ ಟಿಕೆಟ್ ನೀಡುವುದು. ಈಗಿನಿಂದಲೇ ಅಭ್ಯರ್ಥಿ ಅಖೈರುಗೊಳಿಸಿ ಪಕ್ಷ ಸಂಘಟನೆ ಜವಾಬ್ದಾರಿಯನ್ನು ನೀಡುವುದು. ಕಾಂಗ್ರೆಸ್ ಪಕ್ಷದ ಪ್ಲಾನ್ ಆಗಿದೆ.

ಹೆಚ್ಚು ಆಕಾಂಕ್ಷಿಗಳು ಇರುವ ಕಡೆ ಹೈಕಮಾಂಡ್ ತೀರ್ಮಾನ
ಕಾಂಗ್ರೆಸ್ನಲ್ಲಿ ಹಾಲಿ ಶಾಸಕರಲ್ಲಿ 2023 ಚುನಾವಣೆಯಲ್ಲಿ ಗೆಲ್ಲವು ಅಭ್ಯರ್ಥಿಗೆ ಮಣೆ ಹಾಕಲು ಸಜ್ಜಾಗಿದ್ದಾರೆ. ಹಾಲಿ 70 ಶಾಸಕರ ಪೈಕಿ ಎಷ್ಟು ಅಭ್ಯರ್ಥಿಗಳು ಗೆಲುವನ್ನು ಪಡೆಯಲಿದ್ದಾರೆ ಅವರಿಗೆ 'ಎ' ಕ್ಯಾಟಗರಿಯಲ್ಲಿ ಟಿಕೆಟ್ ಪಕ್ಕಾ ಆಗಲಿದೆ. 2018ರ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋತ ಅಭ್ಯರ್ಥಿಗಳಲ್ಲಿ ಈ ಸಲ ಗೆಲುವು ಖಚಿತ ಎಂಬುವವರಿಗೆ 'ಬಿ' ಕ್ಯಾಟಗರಿಯಲ್ಲಿ ಟಿಕೆಟ್ ನೀಡಲು ಯೋಜನೆ. ಇನ್ನು ಗೆಲುವನ್ನೇ ಕಾಣದ ಮತ್ತು ಬಿಜೆಪಿ , ಜೆಡಿಎಸ್ಗೆ ಪ್ರಬಲ ಪೈಪೋಟಿ ನೀಡುವ ಅಭ್ಯರ್ಥಿಗಳನ್ನು 'ಸಿ' ಕ್ಯಾಟಗರಿ ಲಿಸ್ಟ್ ಮಾಡಲಾಗಿದೆ. ಈ ಸಮಯದಲ್ಲಿ ಜಾತಿ, ಜನಪ್ರಿಯತೆ, ಎದುರಾಳಿಯ ಏಟಿಗೆ ಎದುರೇಟು ನೀಡುವ ಚಾಕಚಕ್ಯತೆ, ಹಣ ಬಲವನ್ನು ಗಮನಿಸಿ ಟಿಕೆಟ್ ನೀಡಲಾಗುತ್ತದೆ.
ಕಾಂಗ್ರೆಸ್ ಹೈಕಮಾಂಡ್ ಮತ್ತು ಡಿಕೆ ಶಿವಕುಮಾರ್ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎಂದಿರುವ ಕಾರಣ ಜಾತಿ ಆಧಾರದಲ್ಲಿ ಮತಗಳ ಕ್ರೋಢಿಕರಣಕ್ಕೂ ವೇದಿಕೆಯನ್ನು ಸಿದ್ದಪಡಿಸಲಾಗುತ್ತಿದೆ. ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್ ಸೇರಿ ಕಾಂಗ್ರೆಸ್ ಮೊದಲ ಪಂಕ್ತಿ ನಾಯಕರು ಕಿತ್ತಾಡದೇ ಪಕ್ಷವನ್ನು ಸಾಮೂಹಿಕ ಒಗ್ಗಟ್ಟಿನಿಂದ ತೆಗೆದುಕೊಂಡು ಹೋದರೆ ಕರ್ನಾಟದಲ್ಲಿ ಕಾಂಗ್ರೆಸ್ ಸರ್ಕಾರ ಬರುವ ಸಾಧ್ಯತೆಯಿದೆ ಎಂದು ರಾಜಕೀಯ ವಿಶ್ಲೇಷಕರು ವಿಶ್ಲೇಷಿಸುತ್ತಿದ್ದಾರೆ.