ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಸದಸ್ಯತ್ವಕ್ಕೆ ಹಲವು ಷರತ್ತುಗಳು: ಬಿಜೆಪಿಗೆ ಕಾಡಿದ ಪ್ರಶ್ನೆಗಳು

|
Google Oneindia Kannada News

ಕಾಂಗ್ರೆಸ್ಸಿಗೆ ಪೂರ್ಣಾವಧಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಬೇಕೆಂದು ಜಿ - 23 ಗುಂಪಿನ ನಾಯಕರ ಒತ್ತಡ ಹೆಚ್ಚಾದಾಗ, ಜಾಣ ನಡೆಯಿಟ್ಟ ಸೋನಿಯಾ ಗಾಂಧಿ, ಪೂರ್ಣಾವಧಿಗೆ ನಾನೇ ಅಧ್ಯಕ್ಷೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ, ನೂತನ ಅಧ್ಯಕ್ಷರ ಆಯ್ಕೆಯ ಚುನಾವಣೆಯ ವರ್ಷದ ವೇಳಾಪಟ್ಟಿಯನ್ನು ಪ್ರಕಟಿಸಿದ್ದರು.

ಈಗ, ಅದರ ಭಾಗವಾಗಿ ಕಾಂಗ್ರೆಸ್ ಸದಸ್ಯತ್ವ ಅಭಿಯಾನವನ್ನು ನವೆಂಬರ್ ಒಂದರಿಂದ ಆರಂಭಿಸಲಿದೆ. ಮುಂದಿನ ವರ್ಷದ ಆಗಸ್ಟ್ - ಸೆಪ್ಟಂಬರ್ ತಿಂಗಳಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಸದಸ್ಯತ್ವ ಪಡೆಯಲು ಬಯಸುವವರು ಕೆಲವೊಂದು ಷರತ್ತಿಗಳಿಗೆ ಬದ್ದರಾಗಬೇಕಿದೆ.

"ಮುಂದಿನ ವರ್ಷದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಅದಕ್ಕೆ ಪೂರ್ವಭಾವಿಯಾಗಿ ಸದಸ್ಯತ್ವ ಅಭಿಯಾನವನ್ನು ಆರಂಭಿಸುತ್ತಿದ್ದೇವೆ. ಸದಸ್ಯತ್ವವನ್ನು ಪಡೆಯಲು ಬಯಸುವವರು ಪಕ್ಷದ ಸಂವಿಧಾನವನ್ನು ಒಪ್ಪಿಕೊಳ್ಳಬೇಕು" ಎಂದು ಕೇಂದ್ರೀಯ ಚುನಾವಣಾ ಸಮಿತಿಯ ಅಧ್ಯಕ್ಷ ಮಧುಸೂಧನ ಮಿಸ್ತ್ರಿ ಹೇಳಿದ್ದಾರೆ.

ಕಾಂಗ್ರೆಸ್ ಹಾಕಿರುವ ಷರತ್ತುಗಳನ್ನು ಬಿಜೆಪಿ ಲೇವಡಿ ಮಾಡಿದೆ. ಈ ಬಗ್ಗೆ ಸಾಲುಸಾಲು ಟ್ವೀಟ್ ಮಾಡಿರುವ ಬಿಜೆಪಿ, ಕೆಲವೊಂದು ಪ್ರಶ್ನೆಗಳನ್ನು ಎತ್ತಿದೆ. ಅಕ್ರಮ ಆಸ್ತಿಯನ್ನು ಹೊಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಜೆ.ಜಾರ್ಜ್, ಜಮೀರ್ ಅಹ್ಮದ್ ಖಾನ್ ಮುಂತಾದವರ ಸದಸ್ಯತ್ವವನ್ನು ರದ್ದು ಮಾಡುವಿರಾ ಎಂದು ಪ್ರಶ್ನಿಸಿದೆ. ಸದಸ್ಯತ್ವನ್ನು ಹೊಂದಲು ಕಾಂಗ್ರೆಸ್ ಹಾಕಿರುವ ಕೆಲವೊಂದು ಷರತ್ತುಗಳು ಹೀಗಿದೆ:

 ಕಾರ್ಯಕಾರಿ ಸಮಿತಿ ನಿರ್ಧರಿಸುವ ಮತ್ತು ರೂಪಿಸುವ ಯಾವುದೇ ನಿರ್ಧಾರಕ್ಕೆ ನಾನು ಬದ್ದ

ಕಾರ್ಯಕಾರಿ ಸಮಿತಿ ನಿರ್ಧರಿಸುವ ಮತ್ತು ರೂಪಿಸುವ ಯಾವುದೇ ನಿರ್ಧಾರಕ್ಕೆ ನಾನು ಬದ್ದ

ಕಾರ್ಯಕಾರಿ ಸಮಿತಿ ನಿರ್ಧರಿಸುವ ಮತ್ತು ರೂಪಿಸುವ ಯಾವುದೇ ನಿರ್ಧಾರಕ್ಕೆ ನಾನು ಬದ್ದ. ಜಾತಿ, ಧರ್ಮದ ಬೇಧವಿಲ್ಲದೇ ಸಾಮಾಜಿಕ ಏಕತೆಯಲ್ಲಿ ನಂಬಿಕೆ. ಕಾನೂನು ಮೀರಿ ಹೆಚ್ಚಿನ ಆಸ್ತಿಪಾಸ್ತಿಯನ್ನು ಹೊಂದಿಲ್ಲ. ಮಧ್ಯಪಾನ ಮತ್ತು ಮಾದಕ ದ್ರವ್ಯಗಳ ಚಟವಿಲ್ಲ. ಸಾಮಾಜಿಕ ಅಸಮಾನತೆಯ ಮೇಲೆ ನಂಬಿಕೆಯಿಲ್ಲ. ಹೀಗೆ ಹಲವು ಷರತ್ತುಗಳನ್ನು ಕಾಂಗ್ರೆಸ್ ಪಕ್ಷ ಸದಸ್ಯತ್ವಕ್ಕೆ ಹಾಕಿದೆ. ಈ ಷರತ್ತುಗಳನ್ನು ಅರ್ಜಿಯಲ್ಲೇ ಹಾಕಲಾಗಿದೆ.

 ನಕಲಿ ಗಾಂಧಿಗಳ ಸದಸ್ಯತ್ವ ರದ್ಧತಿಗೆ ಏನಾದರೂ ಯೋಜನೆ ರೂಪಿಸಿದ್ದೀರಾ?

ನಕಲಿ ಗಾಂಧಿಗಳ ಸದಸ್ಯತ್ವ ರದ್ಧತಿಗೆ ಏನಾದರೂ ಯೋಜನೆ ರೂಪಿಸಿದ್ದೀರಾ?

ಕಾಂಗ್ರೆಸ್ಸಿನ ಈ ಷರತ್ತುಗಳಿಗೆ ವ್ಯಂಗ್ಯವಾಡಿರುವ ಬಿಜೆಪಿ ಕೇಳಿರುವ ಕೆಲವು ಪ್ರಶ್ನೆಗಳು ಹೀಗಿವೆ: "ಕಾಂಗ್ರೆಸ್ ಸದಸ್ಯತ್ವ ಬೇಕಿದ್ದರೆ ಕಾನೂನು ಮೀರಿ ಹೆಚ್ಚಿನ ಆಸ್ತಿ ಸಂಪಾದಿಸಿರಬಾರದಂತೆ. ಅಕ್ರಮ ಸಂಪತ್ತಿನ ಮೂಲಕ ಕುಬೇರರಾದ ಡಿಕೆಶಿ, ಮಲ್ಲಿಕಾರ್ಜುನ ಖರ್ಗೆ, ಕೆಜೆ ಜಾರ್ಜ್, ಜಮೀರ್ ಅಹ್ಮದ್ ಖಾನ್ ಹಾಗೂ ನಕಲಿ ಗಾಂಧಿಗಳ ಸದಸ್ಯತ್ವ ರದ್ಧತಿಗೆ ಏನಾದರೂ ಯೋಜನೆ ರೂಪಿಸಿದ್ದೀರಾ?" ಎಂದು ಟ್ವೀಟ್ ಮೂಲಕ ಬಿಜೆಪಿ ಪ್ರಶ್ನಿಸಿದೆ.

ಕುಡಿತ, ಡ್ರಗ್ಸ್ ಚಟ ಹೊಂದಿರಬಾರದು ಎಂಬ ಷರತ್ತು ವಿಧಿಸಿದೆ

"ಕಾಂಗ್ರೆಸ್ ಸದಸ್ಯತ್ವ ಬೇಕಿದ್ದರೆ ಹಲವು ಷರತ್ತುಗಳಂತೆ!!! ಕುಡಿತ, ಡ್ರಗ್ಸ್ ಚಟ ಹೊಂದಿರಬಾರದು ಎಂಬ ಷರತ್ತು ವಿಧಿಸಿದೆ. ವಿದೇಶಿ ವಿಮಾನ ನಿಲ್ದಾಣದಲ್ಲಿ ಯಾರೂ ಸಿಕ್ಕಿಬೀಳಬಾರದು ಎಂಬ ಕಾಳಜಿಯಿಂದ ಈ‌ ನಿಯಮ ರೂಪಿಸಿರಬಹುದೇ? ಸಿದ್ದರಾಮಯ್ಯ ಅವರ ಮೊದಲ ದೆಹಲಿ ಭೇಟಿ ಡಿಕೆಶಿ ಮಾಡಿದ ಪದಾಧಿಕಾರಿಗಳ ಪಟ್ಟಿಯನ್ನು ನಿರ್ಲಕ್ಷ್ಯ ಮಾಡುವಂತೆ ಮಾಡಿತು. ಎರಡನೇ ಭೇಟಿ ಪದಾಧಿಕಾರಿಗಳ ಪಟ್ಟಿಯನ್ನೇ ತಿರಸ್ಕರಿಸುವಂತೆ ಮಾಡಿತು. ಸಿದ್ದರಾಮಯ್ಯ ಅವರ ಮೂರನೇ ಭೇಟಿ ಡಿಕೆಶಿ ಅಧ್ಯಕ್ಷ ಪದವಿಗೆ ಕುತ್ತು ತರಲಿದೆಯೇ?" ಎಂದು ಬಿಜೆಪಿ ಪ್ರಶ್ನಿಸಿದೆ.

ಊರಿನ ಕಟ್ಟೆ, ಕೊಳಾಯಿಗೆ ಒಂದು‌ ಕುಟುಂಬದ ಹೆಸರಿಡಬೇಕು

ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ಇನ್ನಷ್ಟು ಮಾನದಂಡಗಳು:
ಊರಿನ ಕಟ್ಟೆ, ಕೊಳಾಯಿಗೆ ಒಂದು‌ ಕುಟುಂಬದ ಹೆಸರಿಡಬೇಕು.
ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗುವ ಛಲ ಬೇಕು.
ಹಿರಿಯ ನಾಯಕರನ್ನು ಅವಮಾನಿಸುವ ಗುಣವಿರಬೇಕು.
ಕಾಂಗ್ರೆಸ್ ಮುಕ್ತ ಭಾರತಕ್ಕೆ ಅವಿರತ ಪ್ರಯತ್ನಿಸಬೇಕು.
ಮನೆಯ ಆಸ್ತಿಯನ್ನೇ ದೋಚುವ ಕಲೆ ಇರಬೇಕು.
ದೇಶವನ್ನು ಲೂಟಿ ಮಾಡುವುದಕ್ಕೆ ಹೊಸ ಯೋಚನೆಗಳಿರಬೇಕು.
ಸಾಧ್ಯವಾದರೆ ಬೋಸ್ಟನ್ ವಿಮಾನ ನಿಲ್ದಾಣದಲ್ಲಿ ಡ್ರಗ್ಸ್ ಸಮೇತ ಸಿಕ್ಕಿ ಬೀಳಬೇಕು.
ಗಾಂಧಿ ಹೆಸರನ್ನು ಕದಿಯುವ ಕಲೆ ಹೊಂದಿರಬೇಕು.

English summary
Congress Working Committee has set some conditions for those who wish to join party, here is what BJP questions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X