ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಡಳಿತ ನನ್ನ ಕೈಯಲಿಲ್ಲ, ಕಾಂಗ್ರೆಸ್‌ ಕೈಯಲ್ಲಿದೆ: ಕುಮಾರಸ್ವಾಮಿ ಅಸಮಾಧಾನ

|
Google Oneindia Kannada News

Recommended Video

Lok Sabha Election 2019: ಆಡಳಿತ ನನ್ನ ಕೈಯಲಿಲ್ಲ, ಕಾಂಗ್ರೆಸ್‌ ಕೈಯಲ್ಲಿದೆ: ಕುಮಾರಸ್ವಾಮಿ ಅಸಮಾಧಾನ

ಬೆಂಗಳೂರು, ಜನವರಿ 09: ಮಿತ್ರ ಪಕ್ಷ ಕಾಂಗ್ರೆಸ್‌ ಮೇಲೆ ಮತ್ತೆ ಅಸಮಾಧಾನ ಹೊರಹಾಕಿರುವ ಸಿಎಂ ಕುಮಾರಸ್ವಾಮಿ, 'ಕಾಂಗ್ರೆಸ್ ನನ್ನ ಕೈ ಕಟ್ಟಿಹಾಕಿದೆ' ಎಂದು ಅಳಲು ತೋಡಿಕೊಂಡಿದ್ದಾರೆ.

ನಿನ್ನೆ ರಾತ್ರಿ ನಡೆದ ಜೆಡಿಎಸ್ ಮುಖಂಡರ ಸಭೆಯಲ್ಲಿ ಮಾತನಾಡಿರುವ ಕುಮಾರಸ್ವಾಮಿ, ಈ ಮೈತ್ರಿ ಸರ್ಕಾರ ನನ್ನ ನಿಯಂತ್ರಣದಲ್ಲಿಲ್ಲ ಎಲ್ಲವೂ ಕಾಂಗ್ರೆಸ್‌ ಹಿಡಿತದಲ್ಲಿದೆ ಎಂದು ಬೇಸರ ಹೊರಹಾಕಿದ್ದಾರೆ.

ಲೋಕಸಭಾ ಚುನಾವಣೆ : ಜೆಡಿಎಸ್ ಬೇಡಿಕೆ ಇಟ್ಟಿರುವ ಕ್ಷೇತ್ರಗಳ ಪಟ್ಟಿ ಲೋಕಸಭಾ ಚುನಾವಣೆ : ಜೆಡಿಎಸ್ ಬೇಡಿಕೆ ಇಟ್ಟಿರುವ ಕ್ಷೇತ್ರಗಳ ಪಟ್ಟಿ

ಸಿಎಂ ಪಟ್ಟ ನನಗೆ ಬಿಸಿ ತುಪ್ಪವಾಗಿದೆ, ನುಂಗಲೂ ಆಗದೆ ಉಗಿಯಲು ಆಗದೆ ಒದ್ದಾಡುತ್ತಿದ್ದೇನೆ ಎಂದಿರುವ ಕುಮಾರಸ್ವಾಮಿ, ಲೋಕಸಭೆ ಚುನಾವಣೆ ವರೆಗೂ ಹಲ್ಲುಕಚ್ಚಿಕೊಂಡು ಸರ್ಕಾರ ನಡೆಸುತ್ತೇನೆ ಎನ್ನುವ ಮೂಲಕ ಚುನಾವಣೆ ನಂತರ ಸರ್ಕಾರ ಉರುಳುವ ಮುನ್ಸೂಚನೆ ನೀಡಿದ್ದಾರೆ.

ನಾನು ಕಾಂಗ್ರೆಸ್‌ನ ತಾಳಕ್ಕೆ ಕುಣಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ನಾನು ಅನುಭವಿಸುತ್ತಿರುವ ನನಗೆ ಮಾತ್ರವೇ ಗೊತ್ತು ಎಂದು ಕುಮಾರಸ್ವಾಮಿ ಅವರು ಜೆಡಿಎಸ್ ಶಾಸಕರು ಮತ್ತು ಮುಖಂಡರ ಮುಂದೆ ಅಳಲು ತೋಡಿಕೊಂಡಿದ್ದಾರೆ.

'ಯಾರ ವಿರುದ್ಧವೂ ಟೀಕೆ ಮಾಡುವುದಿಲ್ಲ'

'ಯಾರ ವಿರುದ್ಧವೂ ಟೀಕೆ ಮಾಡುವುದಿಲ್ಲ'

ಯಾರ ವಿರುದ್ಧವೂ ಟೀಕೆ ಮಾಡಬೇಡ ಎಂದು ದೇವೇಗೌಡ ಅವರು ಹೇಳಿದ್ದಾರೆ ಅದರಂತೆ ನಡೆದುಕೊಳ್ಳುತ್ತಿದ್ದೇನೆ. ಡಿಸಿಪಿ ವರ್ಗಾವಣೆಗಳಿರಲಿ, ಪಿಡಿಓ ವರ್ಗಾವಣೆ ಸಹ ಕಾಂಗ್ರೆಸ್ ಹೇಳಿದಂತೆ ಆಗುತ್ತಿದೆ, ನಾನು ನಿಮಿತ್ತ ಮಾತ್ರ ಎಂದು ಕುಮಾರಸ್ವಾಮಿ ಗುರುತರ ಆರೋಪವನ್ನೇ ಕಾಂಗ್ರೆಸ್‌ ಮೇಲೆ ಹೊರಿಸಿದ್ದಾರೆ.

ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ?

ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ?

ಕುಮಾರಸ್ವಾಮಿ ಅವರ ಈ ಹೇಳಿಕೆಯಿಂದ ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಮೈತ್ರಿಯ ಮುಖ್ಯ ನಾಯಕರೇ ಮಿತ್ರ ಪಕ್ಷದ ವಿರುದ್ಧ ಮಾತನಾಡಿರುವುದು ಸರ್ಕಾರದ ಪತನದ ಮುನ್ಸೂಚನೆಯಂತೂ ಕಾಣುತ್ತಿದೆ.

ಭಿನ್ನಮತ ಶಮನವಾಗುತ್ತಿಲ್ಲ, ಕುಮಾರಸ್ವಾಮಿಯವರ ಸಮ್ಮಿಶ್ರ ಸರಕಾರ 6ಕ್ಕೇರುತ್ತಿಲ್ಲಭಿನ್ನಮತ ಶಮನವಾಗುತ್ತಿಲ್ಲ, ಕುಮಾರಸ್ವಾಮಿಯವರ ಸಮ್ಮಿಶ್ರ ಸರಕಾರ 6ಕ್ಕೇರುತ್ತಿಲ್ಲ

ಈ ಹಿಂದೆಯೂ ಹೇಳಿಕೆ ನೀಡಿದ್ದರು ಎಚ್‌ಡಿಕೆ

ಈ ಹಿಂದೆಯೂ ಹೇಳಿಕೆ ನೀಡಿದ್ದರು ಎಚ್‌ಡಿಕೆ

ಕುಮಾರಸ್ವಾಮಿ ಈ ಹಿಂದೆಯೂ ಈ ರೀತಿಯ ಬಹಿರಂಗ ಹೇಳಿಕೆಗಳನ್ನು ಕಾಂಗ್ರೆಸ್‌ ವಿರುದ್ಧ ನೀಡಿದ್ದರು. 'ಸಾಂಧರ್ಬಿಕ ಶಿಶು', ಕಷ್ಟಪಟ್ಟು ಸರ್ಕಾರ ನಡೆಸುತ್ತಿದ್ದೇನೆ ಎಂದೆಲ್ಲಾ ಹೇಳಿದ್ದರು ಕಣ್ಣೀರು ಸಹ ಹಾಕಿದ್ದರು. ಆಗೆಲ್ಲಾ ಅವರ ಹೇಳಿಕೆಗಳು ಭಾರಿ ವಿವಾದ ಸೃಷ್ಠಿಸಿದ್ದವು.

ನಿಗಮ-ಮಂಡಳಿ ನೇಮಕಕ್ಕೆ ತಡೆ, ಸಿಎಂ ಕುಮಾರಸ್ವಾಮಿ ಹೇಳಿದ್ದೇನು? ನಿಗಮ-ಮಂಡಳಿ ನೇಮಕಕ್ಕೆ ತಡೆ, ಸಿಎಂ ಕುಮಾರಸ್ವಾಮಿ ಹೇಳಿದ್ದೇನು?

ಟೀಕಾಪ್ರಹಾರ ನಡೆಸಲಿದೆ ಬಿಜೆಪಿ

ಟೀಕಾಪ್ರಹಾರ ನಡೆಸಲಿದೆ ಬಿಜೆಪಿ

ಕುಮಾರಸ್ವಾಮಿ ಅವರ ಈ ಹೇಳಿಕೆ ಬಿಜೆಪಿಗೆ ಅಸ್ತ್ರವಾಗಿ ದೊರೆತಿದ್ದು, ಮೈತ್ರಿ ಸರ್ಕಾರದ ಮೇಲೆ ಯಡಿಯೂರಪ್ಪ ಮತ್ತು ತಂಡ ಹರಿಹಾಯುವ, ಟೀಕಾಪ್ರಹಾರ ಹರಿಸುವ ಸರ್ವ ಮುನ್ಸೂಚನೆಯೂ ಇದೆ. ಸರ್ಕಾರ ಬೀಳಿಸಲು ಅವಕಾಶಕ್ಕಾಗಿ ಬಿಜೆಪಿ ಕಾಯುತ್ತಿದ್ದು, ಮಿತ್ರ ಪಕ್ಷದ ವಿರುದ್ಧ ಕುಮಾರಸ್ವಾಮಿ ಅವರ ಅಸಮಾಧಾನವನ್ನು ತನ್ನ ಲಾಭಕ್ಕೆ ಹೇಗೆ ಬಿಜೆಪಿ ಬಳಸಿಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು.

ಕುಮಾರಸ್ವಾಮಿ 'ಕೃಪೆ'ಯಿಂದ ನಿಗಮ ಮಂಡಳಿ ಕೈತಪ್ಪಿದ ಶಾಸಕರಿಗೆ ಸಿದ್ದರಾಮಯ್ಯ ಅಭಯಕುಮಾರಸ್ವಾಮಿ 'ಕೃಪೆ'ಯಿಂದ ನಿಗಮ ಮಂಡಳಿ ಕೈತಪ್ಪಿದ ಶಾಸಕರಿಗೆ ಸಿದ್ದರಾಮಯ್ಯ ಅಭಯ

English summary
CM Kumaraswamy yesterday told that congress not letting him to run government. He accused that 'congress is in the driving seat of government not me'. He said he will continue to administrate till Lok Sabha elections 2019 without complaining any congress leaders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X