ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್‌ ಸಂಸದರ ಸಭೆ ಕರೆಯಲು ಸಿಎಂ, ಡಿಸಿಎಂಗೆ ಒತ್ತಾಯ

By Manjunatha
|
Google Oneindia Kannada News

ಬೆಂಗಳೂರು, ಜೂನ್ 21: ಬೆಂಗಳೂರಿನ ಸಂಸದ ಹಾಗೂ ಶಾಸಕರ ಸಭೆ ಕರೆದಂತೆ ರಾಜ್ಯದ ಎಲ್ಲ ಕಾಂಗ್ರೆಸ್ ಹಾಗೂ ಜೆಡಿಎಸ್ ಸಂಸದರ ಸಭೆ ಕರೆಯುವಂತೆ ಕೈ ಸಂಸದರು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.

ಸಂಸದರಾದ ಬಿಕೆ ಹರಿಪ್ರಸಾದ್ ಮತ್ತು ಚಂದ್ರಶೇಖರ್ ಅವರು ನಿನ್ನೆ ಕುಮಾರ ಕೃಪಾದಲ್ಲಿ ನಡೆದ ಶಾಸಕ ಹಾಗೂ ಸಂಸದರ ಸಭೆಯಲ್ಲಿ ಈ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ.

ರೈತರ ಸಾಲ ಮನ್ನಾ ಮಾಡಲು ಇಷ್ಟೆಲ್ಲಾ ತಯಾರಿ ನಡೆದಿದೆರೈತರ ಸಾಲ ಮನ್ನಾ ಮಾಡಲು ಇಷ್ಟೆಲ್ಲಾ ತಯಾರಿ ನಡೆದಿದೆ

ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಕಾರಣ ಕೂಡಲೇ ಸಂಸದರ ಸಭೆ ಕರೆದು ಆಯಾ ಕ್ಷೇತ್ರಗಳಲ್ಲಿ ನೆನೆಗುದಿಗೆ ಬಿದ್ದಿರುವ ಕಾರ್ಯಗಳನ್ನು ಶೀಘ್ರವೇ ಪೂರ್ಣಗೊಳಿಸುವಂತೆ ಮಾಡಬೇಕು ಎಂಬುದು ಅವರ ಒತ್ತಾಯ.

congress MPs demanding to conduct meeting of MPs

ಅಲ್ಲದೆ ಚುನಾವಣೆ ಹತ್ತರಿವಿರುವ ಕಾರಣ ಮುಂದಿನ ಬಜೆಟ್‌ನಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಂಸದರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡಬೇಕು ಹಾಗೂ ಸಂಸದರು ತಮ್ಮ ಅನುದಾನ ಖರ್ಚು ಮಾಡುವಲ್ಲಿ ರಾಜ್ಯ ಸರ್ಕಾರ ನೆರವು ನೀಡಬೇಕು ಎಂಬ ಒತ್ತಾಯವನ್ನೂ ಕಾಂಗ್ರೆಸ್ ಸಂಸದರು ಮಾಡಿದ್ದಾರೆ.

ಯೋಗ ನನ್ನ ಅತ್ಯಂತ ಪ್ರಿಯ ಸಂಗತಿಗಳಲ್ಲೊಂದು: ಎಚ್ ಡಿ ಕುಮಾರಸ್ವಾಮಿಯೋಗ ನನ್ನ ಅತ್ಯಂತ ಪ್ರಿಯ ಸಂಗತಿಗಳಲ್ಲೊಂದು: ಎಚ್ ಡಿ ಕುಮಾರಸ್ವಾಮಿ

ಲೋಕಸಭಾ ಚುನಾವಣೆ ಮುಗಿದು ಈಗಾಗಲೇ 4 ವರ್ಷ ದಾಟಿದ್ದು, ಈ ವರ್ಷಾಂತ್ಯಕ್ಕೆ ಕೇಂದ್ರ ಸರ್ಕಾರವು ಲೋಕಸಭೆಯನ್ನು ವಿಸರ್ಜಿಸಿ ಚುನಾವಣೆಗೆ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗಾಗಿ ಸಂಸದರು ಚುರುಕುಗೊಂಡಿದ್ದು ತಮ್ಮ-ತಮ್ಮ ಕ್ಷೇತ್ರಗಳಲ್ಲಿ ನೆನೆಗುದಿಗೆ ಬಿದ್ದಿದ್ದ ಕಾರ್ಯಗಳನ್ನು ಪೂರೈಸಲು ರಾಜ್ಯ ಸರ್ಕಾರದ ನೆರವು ಬಯಸುತ್ತಿದ್ದಾರೆ.

English summary
Congress MPs demanding to CM and DCM to conduct a meeting of congress and JDS MPs. Lokasabha elections were near so state government should release more grants to MP constituencies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X