ಮಲ್ಲಿಕಾರ್ಜುನ ಖರ್ಗೆಗೆ ಜೀವ ಬೆದರಿಕೆ ಕರೆ, ದೂರು

Written By:
Subscribe to Oneindia Kannada
   ಮಲ್ಲಿಕಾರ್ಜುನ ಖರ್ಗೆಗೆ ಬಂದಿತ್ತಂತೆ ಜೀವ ಬೆದರಿಕೆ ಕರೆ | Oneindia Kannada

   ಕಲಬುರಗಿ, ಮಾರ್ಚ್ 11: ಸಂಸದ, ಕಾಂಗ್ರೆಸ್‌ನ ಹಿರಿಯ ಮುಖಂಡ, ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆಯಂತೆ.

   ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ ಅವರೇ ಈ ವಿಷಯ ತಿಳಿಸಿದ್ದು, ಈ ಸಂಬಂಧ ದೆಹಲಿಯ ತುಘಲಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಜೊತೆಗೆ ಕೇಂದ್ರ ಗೃಹ ಮಂತ್ರಿ ರಾಜನಾಥ್ ಸಿಂಗ್ ಹಾಗೂ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೆ ವಿಷಯ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.

   congress-mp-malikarjun-kharge-getting-threat-calls

   ಕಳೆದ ಒಂದೂವರೆ ತಿಂಗಳಿನಿಂದ ಅನಾಮಿಕ ದೂರವಾಣಿ ಕರೆಗಳು ಪದೇ-ಪದೇ ಬರುತ್ತಿದ್ದು, ಜೀವ ಬೆದರಿಕೆ ಹಾಕಲಾಗುತ್ತಿದೆ ಎಂದರು.

   ಬೆದರಿಕೆ ಕರೆಗಳಿಂದ ಧೃತಿಗೆಟ್ಟಿಲ್ಲ ಎಂದ ಅವರು ನಾನು ಆರು‌ ವರ್ಷದವನಿದ್ದಾಗಲೇ‌ ಸಾಯಬೇಕಿತ್ತು. ಆದರೆ, 76 ವರ್ಷ ಬದುಕಿದ್ದೇನೆ. ಜನರ ಪ್ರೀತಿ‌,ವಿಶ್ವಾಸದಿಂದ ಇಷ್ಟು ದಿನ ಬದುಕಿದ್ದೇನೆ ಎಂದರು.

   ಯಾರನ್ನೂ ಕೇಳದೆ ಖೇಣಿಯನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ: ಖರ್ಗೆ

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Congress senior leader MP Malikarjun Kharge getting threat call from the past one and half months. Kharge gave complaint about this in Dehli Tuglak road police station.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ