ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಪಾಲರ ನಿರ್ಣಯದ ವಿರುದ್ಧ ಮಧ್ಯರಾತ್ರಿ ಸುಪ್ರೀಂ ಬಾಗಿಲು ಬಡಿದ ಕಾಂಗ್ರೆಸ್‌

|
Google Oneindia Kannada News

ನವ ದೆಹಲಿ, ಮೇ 16: ಬಹುಮತ ಇಲ್ಲದಿದ್ದರೂ ಬಿಜೆಪಿಯನ್ನು ಸರ್ಕಾರ ರಚನೆಗೆ ಆಹ್ವಾನ ನೀಡಿ ಬಹುಮತ ಸಾಬೀತಿಗೆ 15 ದಿನಗಳ ಕಾಲಾವಕಾಶ ನೀಡಿರುವ ನಿರ್ಣಯದ ವಿರುದ್ಧ ಕಾಂಗ್ರೆಸ್‌ ಪಕ್ಷ ತಡ ರಾತ್ರಿ ಸುಪ್ರಿಂ ಕೋರ್ಟ್‌ ಬಾಗಿಲು ಬಡಿದಿದೆ.

ಬುಧವಾರ ರಾತ್ರಿಯೇ ಮುಖ್ಯ ನ್ಯಾಯಮೂರ್ತಿ ಅವರನ್ನು ಭೇಟಿ ಮಾಡಿರುವ ದೆಹಲಿ ಕಾಂಗ್ರೆಸ್ ನಿಯೋಗ ಕರ್ನಾಟಕ ರಾಜ್ಯದ ರಾಜ್ಯಪಾಲರ ನಿರ್ಣಯದ ವಿರುದ್ಧ ದೂರು ನೀಡಿದೆ. ರಾಜ್ಯಪಾಲರ ನಿರ್ಣಯ ಸಂವಿಧಾನಕ್ಕೆ ವಿರೋಧವಾದದ್ದು ಎಂದು ಕಾಂಗ್ರೆಸ್ ನಿಯೋಗ ಹೇಳಿದೆ.

Congress moved to Supreme court against governor decision

ಸುಪ್ರಿಂ ಕೋರ್ಟ್‌ ರಿಜಿಸ್ಟ್ರಾರ್‌ಗೆ ಅರ್ಜಿ ಸಲ್ಲಿಸಿರುವ ಕಾಂಗ್ರೆಸ್‌ ಪರ ವಕೀಲ ಅಭಿಮನ್ಯು, ಈ ಮುಂಚಿನ ಸುಪ್ರಿಂ ತೀರ್ಪನ್ನು ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದು, ತುರ್ತಾಗಿ ಅರ್ಜಿಯನ್ನು ವಿಚಾರಣೆ ಮಾಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಗುರುವಾರ ಬೆಳಿಗ್ಗೆ 9ಕ್ಕೆ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ ಪಕ್ಕಾಗುರುವಾರ ಬೆಳಿಗ್ಗೆ 9ಕ್ಕೆ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ ಪಕ್ಕಾ

ರಾಜ್ಯಪಾಲರ ನಿರ್ಣಯ ಸುಪ್ರಿಂ ಕೋರ್ಟ್ ತೀರ್ಪಿನ ಉಲ್ಲಂಘನೆ, ಸಂವಿಧಾನ ಉಲ್ಲಂಘನೆ, ಕಾನೂನು ಉಲ್ಲಂಘನೆ ಆಗಿದ್ದು, ಈ ಕೂಡಲೇ ವಿಚಾರಣೆ ನಡೆಸಿ ನಾಳಿನ ಪ್ರಮಾಣ ವಚನ ಕಾರ್ಯಕ್ರಮಕ್ಕೆ ತಡೆ ನೀಡಬೇಕು ಎಂದು ಕಾಂಗ್ರೆಸ್ ಕೋರಿದೆ.

'ಸಿಎಂ ಆಗಿ ಬಿಎಸ್ವೈ ಅಲ್ಲ, ಎಚ್ಡಿಕೆ ಪ್ರಮಾಣ ವಚನ' : ರಮ್ಯಾ ಟ್ವೀಟ್'ಸಿಎಂ ಆಗಿ ಬಿಎಸ್ವೈ ಅಲ್ಲ, ಎಚ್ಡಿಕೆ ಪ್ರಮಾಣ ವಚನ' : ರಮ್ಯಾ ಟ್ವೀಟ್

ಕೆಲವೇ ಗಂಟೆಗಳ ಮುಂಚೆ ಸುದ್ದಿಗೋಷ್ಠಿ ನಡೆಸಿದ್ದ ಕಾಂಗ್ರೆಸ್ ಹಿರಿಯ ಮುಖಂಡರಾದ ಪಿ.ಚಿದಂಬರಂ, ಕಪಿಲ್ ಸಿಬಲ್, ಸುರ್ಜೇವಾಲಾ ಅವರು ಕಾನೂನು ಮೊರೆ ಹೋಗುವ ನಿರ್ಣಯ ಪ್ರಕಟಿಸಿದ್ದರು ಆದರೆ ಅದು ನಾಳೆ (ಗುರುವಾರ) ಎಂದು ಹೇಳಲಾಗಿತ್ತು ಆದರೆ ಆಗಿನ್ನೂ ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕರಿಸುವ ಬಗ್ಗೆ ನಿರ್ಣಯ ಆಗಿರಲಿಲ್ಲ.

English summary
AICC moved to Supreme court on Wednesday late night against Karnataka Governor Decision of inviting BJP to form government and giving more time to prove majority.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X