ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಯವರು ರೆಸಾರ್ಟಿಗೆ ಹೋದಾಗ ಬರ, ಕಾಂಗ್ರೆಸ್ಸಿಗರು ಹೋದಾಗ ನಾಡು ಸುಭಿಕ್ಷನಾ?

|
Google Oneindia Kannada News

ಈ ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ತಾವೇ ಆಡಿರುವ ಮಾತನ್ನು ಹೇಗೆ ದೋಸೆ ತಿರುವಿ ಹಾಕಿದಂತೆ ತಿರುವಿ ಹಾಕುತ್ತಾರೆ ಎನ್ನುವುದಕ್ಕೆ ಎರಡ್ಮೂರು ದಿನಗಳಿಂದ ನಡೆಯುತ್ತಿರುವ ರಾಜ್ಯ ರಾಜಕೀಯದ ವಿದ್ಯಮಾನಗಳೇ ಸಾಕ್ಷಿ.

ಬಿಜೆಪಿಯ ಶಾಸಕರು ಹರ್ಯಾಣದ ಗುರುಗ್ರಾಮದ ಐಷಾರಾಮಿ ರೆಸಾರ್ಟಿನಲ್ಲಿ ಇದ್ದಾಗ, ನಾಡಿಗೆ ತೀವ್ರ ಬರ ಎಂದು ಎಚ್ಚರಿಸಿದ್ದ, ಕಾಂಗ್ರೆಸ್ಸಿಗರು ಈಗ ತಾವೇ ರೆಸಾರ್ಟ್ ಮೊರೆ ಹೋಗಿದ್ದಾರೆ. ಅಲ್ಲಿಗೆ, ಕರ್ನಾಟಕದ ಜನತೆಯನ್ನು ಮೂರ್ಖರನ್ನಾಗಿ ಮಾಡಲು ಮೂರೂ ಪಕ್ಷಗಳು ಹೊರಟಿವೆ. ಯಾರೂ ಸಾಚರಲ್ಲಾ.

ಮುಖ್ಯಮಂತ್ರಿಗಳು, ಅವರ ಸಚಿವ ಸಂಪುಟದ ಸಹದ್ಯೋಗಿಗಳು, ಕೆಪಿಸಿಸಿ ಮುಖಂಡರು ಸೇರಿದಂತೆ, ಎರಡೂ ಪಕ್ಷದ ನಾಯಕರು, ಬಿಜೆಪಿಗೆ ನಾಡಿನಲ್ಲಿರುವ ತೀವ್ರ ಬರಗಾಲದ ಬಗ್ಗೆ ಎಚ್ಚರಿಕೆ ನೀಡಿದ್ದೇ ನೀಡಿದ್ದು.. ಈಗ, ಕಾಂಗ್ರೆಸ್ ಶಾಸಕರೇ ಈಗಲ್ ಟನ್ ರೆಸಾರ್ಟಿಗೆ ಶುಕ್ರವಾರ ರಾತ್ರಿ ತೆರಳಿದ್ದಾರೆ.

ಕಾಂಗ್ರೆಸ್ ಜೊತೆ ಇರಲು ಸಾಧ್ಯವಾಗದಿದ್ದರೆ ಶಾಸಕರು ರಾಜೀನಾಮೆ ನೀಡಲಿ:ಡಿವಿಎಸ್ಕಾಂಗ್ರೆಸ್ ಜೊತೆ ಇರಲು ಸಾಧ್ಯವಾಗದಿದ್ದರೆ ಶಾಸಕರು ರಾಜೀನಾಮೆ ನೀಡಲಿ:ಡಿವಿಎಸ್

ಶಾಸಕಾಂಗ ಪಕ್ಷದ ಸಭೆಯನ್ನು ಕರೆದು, ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಬಹುತೇಕ ಯಶಸ್ವಿಯಾಗಿದ್ದ ಕಾಂಗ್ರೆಸ್, ಮತ್ತೆ ತಮ್ಮ ಶಾಸಕರನ್ನು ರೆಸಾರ್ಟ್ ಎನ್ನುವ ಐಷಾರಾಮಿ ತಾಣದಲ್ಲಿ ಕೂಡಿ ಹಾಕುವುದು ಯಾಕೆ ಎನ್ನುವ ಜನಸಾಮಾನ್ಯರ ಪ್ರಶ್ನೆಗೆ ಈಗ ಕಾಂಗ್ರೆಸ್ಸಿನ ಯಾವ ಮುಖಂಡರು ಉತ್ತರಿಸುತ್ತಾರೆ?

ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದು

ವೈಭವೋಪಿತ ರೆಸಾರ್ಟಿನಲ್ಲಿ ವಿಶ್ರಾಂತಿ ಪಡೆದು ಕರ್ನಾಟಕಕ್ಕೆ ಆಗಮಿಸುತ್ತಿರುವ ಬಿಜೆಪಿ ಶಾಸಕರಿಗೆ ಸ್ವಾಗತ. ಇನ್ನಾದರೂ, ಬರಪೀಡಿತ ತಮ್ಮ ತಮ್ಮ ಕ್ಷೇತ್ರಗಳಿಗೆ ತೆರಳಿ, ಜನರ ಸಮಸ್ಯೆಯನ್ನು ಆಲಿಸಲಿ ಎಂದು ವ್ಯಂಗ್ಯವಾಡಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಕಾಂಗ್ರೆಸ್ಸಿನ ಶಾಸಕರನ್ನು ಈಗಲ್ ಟನ್ ರೆಸಾರ್ಟಿನಿಂದ ಯಾವ ಕಲಾತಂಡದೊಂದಿಗೆ ಈಗ ಸ್ವಾಗತಿಸಬೇಕು ಎನ್ನುವುದಿಲ್ಲಿ ಪ್ರಶ್ನೆ.

ಯಡಿಯೂರಪ್ಪ ನುಡಿದಂತೆ ನಡೆಯಲಿ: ಸಿದ್ದರಾಮಯ್ಯ ಸಲಹೆ ಯಡಿಯೂರಪ್ಪ ನುಡಿದಂತೆ ನಡೆಯಲಿ: ಸಿದ್ದರಾಮಯ್ಯ ಸಲಹೆ

ಕಾಂಗ್ರೆಸ್ಸಿನ ಮಾನಮರ್ಯಾದೆಯನ್ನು ರೇವಣ್ಣ ಪ್ರಶ್ನಿಸುತ್ತಾರಾ?

ಕಾಂಗ್ರೆಸ್ಸಿನ ಮಾನಮರ್ಯಾದೆಯನ್ನು ರೇವಣ್ಣ ಪ್ರಶ್ನಿಸುತ್ತಾರಾ?

ಸಮ್ಮಿಶ್ರ ಸರಕಾರಕ್ಕೆ ತೊಡಕಾಗುವ ಬದಲು ಕೇಂದ್ರದಿಂದ ಬರಬೇಕಾಗಿರುವ ಅನುದಾನವನ್ನು ಕೊಡಿಸಲು ಯಡಿಯೂರಪ್ಪ ಶ್ರಮಿಸಲಿ. ಹಾಗೆಯೇ, ಶೋಭಾ ಕರಂದ್ಲಾಜೆಗೆ ಕೇಂದ್ರ ಸಚಿವ ಸ್ಥಾನ ನೀಡಲು ಪ್ರಯತ್ನಿಸಲಿ. ಇಷ್ಟೊಂದು ಜಿಲ್ಲೆಗಳು ಬರಪೀಡಿತಗೊಂಡಿದೆ. ಕ್ಷೇತ್ರಕ್ಕೆ ಹೋಗುವ ಬದಲು ರೆಸಾರ್ಟಿಗೆ ಹೋಗಿದ್ದಾರಲ್ಲಾ.. ಈ ಬಿಜೆಪಿಯವರಿಗೆ ಮಾನಮರ್ಯಾದೆ ಇದೆಯಾ ಎಂದು ಪ್ರಶ್ನಿಸಿದ್ದ ಲೋಕೋಪಯೋಗಿ ಸಚಿವ ರೇವಣ್ಣ ಅವರು ಈಗ, ಕಾಂಗ್ರೆಸ್ಸಿನ ಮಾನಮರ್ಯಾದೆಯನ್ನು ಪ್ರಶ್ನಿಸುತ್ತಾರಾ?

ರಾಜ್ಯದ 155ಕ್ಕೂ ಹೆಚ್ಚು ತಾಲೂಕುಗಳು

ರಾಜ್ಯದ 155ಕ್ಕೂ ಹೆಚ್ಚು ತಾಲೂಕುಗಳು

ರಾಜ್ಯದ 155ಕ್ಕೂ ಹೆಚ್ಚು ತಾಲೂಕುಗಳು ಬರಪೀಡಿತಕ್ಕೆ ಒಳಗಾಗಿದೆ. ಬಿಜೆಪಿಯವರಿಗೆ ಜನಪರ ಕಾಳಜಿ ಅನ್ನೋದು ಇದೆಯಾ? ಇಂತಹ ಸಂದರ್ಭದಲ್ಲಿ ಜನರ ಸಮಸ್ಯೆಗೆ ಧ್ವನಿಯಾಗುವ ಬದಲು, ರೆಸಾರ್ಟಿನಲ್ಲಿ ಮಜಾ ಮಾಡುತ್ತಿದ್ದಾರಲ್ಲಾ ಎಂದು ಸಿದ್ದರಾಮಯ್ಯ ಆದಿಯಾಗಿ ಈಶ್ವರ ಖಂಡ್ರೆ, ಮಲ್ಲಿಕಾರ್ಜುನ ಖರ್ಗೆ, ಜಮೀರ್ ಅಹಮದ್ ಮುಂತಾದವರು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದರು.

ಬಿಜೆಪಿಯ ರೆಸಾರ್ಟ್ ರಾಜಕಾರಣ

ಬಿಜೆಪಿಯ ರೆಸಾರ್ಟ್ ರಾಜಕಾರಣ

ಬಿಜೆಪಿಯ ರೆಸಾರ್ಟ್ ರಾಜಕಾರಣವನ್ನು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಟೀಕಿಸಿದ್ದ ಕಾಂಗ್ರೆಸ್ ಮುಖಂಡರು, ರೆಸಾರ್ಟಿನಲ್ಲಿ ಹೇರ್ ಕಟ್ಟಿಂಗ್, ಲಾಂಡ್ರಿ, ಊಟೋಪಚಾರಕ್ಕೆ ತಗಲುವ ಖರ್ಚು ಎಷ್ಟು, ಈ ದುಡ್ಡು ಎಲ್ಲಿಂದ ಬಂತು ನರೇಂದ್ರ ಮೋದಿಯವರೇ ಎಂದು ಕಿಚಾಯಿಸಿದ್ದರು. ಕಾಂಗ್ರೆಸ್ಸಿನವರಿಗೆ ರೆಸಾರ್ಟಿನಲ್ಲಿ ಪುಕ್ಸಟೆ ಕೊಡುತ್ತಾರಾ ಎನ್ನುವ ಪ್ರಶ್ನೆ ಜನಸಾಮಾನ್ಯರಿಗೆ ಕಾಡದೇ ಇರುತ್ತಾ?

ಸಿದ್ದರಾಮಯ್ಯನವರೇ ಉತ್ತರಿಸಬೇಕಲ್ಲವೇ

ದೆಹಲಿಯಲ್ಲಿರುವ ನಮ್ಮ ರಾಜ್ಯದ ಶಾಸಕರು 'ಚೌಕಿದಾರ್' ಬಂಧನದಿಂದ ಆದಷ್ಟು ಶೀಘ್ರವಾಗಿ ಬಿಡುಗಡೆಗೊಂಡು ಬರಲಿ, ಆತಂಕದಲ್ಲಿರುವ ಅವರ ಕುಟುಂಬಸ್ತರ ಜತೆ ಸೇರಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು. ಈಗ, ರೆಸಾರ್ಟ್ ನಲ್ಲಿರುವ ಕಾಂಗ್ರೆಸ್ ಶಾಸಕರ ಕುಟುಂಬಸ್ಥರ ಕಥೆ?

English summary
Karnataka politics: Congress mocked BJP resort politics, now Congress MLAs in resort. BJP MLAs was in Gurugrama resort, now Congress MLAs in Eagleton resort, Begaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X