ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನ ಪರಿಷತ್‌ ಕಲಾಪದಲ್ಲಿ ನೀಲಿ ಚಿತ್ರ ವೀಕ್ಷಣೆ ಮಾಡಿದ ಶಾಸಕ?

|
Google Oneindia Kannada News

ಬೆಂಗಳೂರು, ಜ. 29: ವಿಧಾನ ಪರಿಷತ್‌ ಕಲಾಪದಲ್ಲಿ ಸದಸ್ಯರೊಬ್ಬರು ನೀಲಿ ಚಿತ್ರ ನೋಡಿದ್ದಾರೆಂಬ ಆರೋಪ ಎದುರಾಗಿದೆ. ಕನ್ನಡ ಸುದ್ದಿವಾಹಿನಿ ಪವರ್ ಟಿವಿ ಈ ಕುರಿತು ಪ್ರಸಾರ ಮಾಡುತ್ತಿದ್ದು, ಜಂಟಿ ಅಧಿವೇಶನದ ಬಳಿಕ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಠೋಡ್ ಅವರು ಮೊಬೈಲ್‌ನಲ್ಲಿ ನೀಲಿ ಚಿತ್ರ ವೀಕ್ಷಣೆ ಮಾಡಿದ್ದಾರೆಂದು ಪವರ್ ಟಿವಿ ವಾಹಿನಿ ಪ್ರಸಾರ ಮಾಡುತ್ತಿದೆ.

ಈ ಕುರಿತು ತನ್ನಲ್ಲಿ Exclusive Footage ಇದೆ ಎಂದಿರುವ ಪವರ್ ಟಿವಿ, ಬ್ಲರ್ ಮಾಡಿರುವ ವಿಸೂವಲ್ಸ್‌ನಲ್ಲಿ ಪ್ರಸಾರ ಮಾಡುತ್ತಿದೆ. ವಿಧಾನ ಸಭೆಯಲ್ಲಿಯೂ ನೀಲಿ ಚಲನಚಿತ್ರ (ಬ್ಲ್ಯೂ ಫಿಲ್ಮ್‌) ನೋಡಿದ ಆರೋಪ ಹಿಂದೆ ಬಿಜೆಪಿ ಸರ್ಕಾರದಲ್ಲಿ ನಡೆದಿತ್ತು. ಹಿಂದೆ ವಿಧಾನಸಭೆಯಲ್ಲಿ ರಾಜ್ಯದಲ್ಲಿ ಬರ ಪರಿಸ್ಥಿತಿ ಮೇಲೆ ವಿಶೇಷ ಚರ್ಚೆ ನಡೆದಿರುವಾದ ಆಗ ಸಚಿವರಾಗಿದ್ದ ಬಿಜೆಪಿಯ ಮೂವರು ನೀಲಿ ಚಲನಚಿತ್ರ ವೀಕ್ಷಣೆ ಮಾಡಿದ್ದರು. ಬಹುತೇಕ ಟಿವಿ ಮಾಧ್ಯಮಗಳಲ್ಲಿ ಸಚಿವರು ನೀಲಿ ಚಲನಚಿತ್ರ ನೋಡುತ್ತಿದ್ದ ವಿಡಿಯೋ ಪ್ರಸಾರ ಮಾಡಲಾಗುತ್ತು. ಮುಂದೆ ಆ ಮೂವರಿಂದಲೂ ಬಿಜೆಪಿ ಸಚಿವಸ್ಥಾನಕ್ಕೆ ರಾಜೀನಾಮೆ ಪಡೆದುಕೊಂಡಿದ್ದು ಇತಿಹಾಸ.

 Congress MLC caught watching porn in Karnataka Legislative Council ?

ಇದೀಗ ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯರು ನೀಲಿ ಚಿತ್ರ ವೀಕ್ಷಣೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ಹಿಂದೆ ಬಿಜೆಪಿ ಮೇಲೆ ವಾಗ್ದಾಳಿ ಮಾಡಿದ್ದ ಕಾಂಗ್ರೆಸ್ ಈಗ ತನ್ನ ಶಾಸಕರ ಮೇಲೆ ಏನು ಕ್ರಮಕೈಗೊಳ್ಳುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಒಂದಾದ ನಂತರ ಮತ್ತೊಂದು ಅಹಿತಕರ ಘಟನೆಗಳು ವಿಧಾನ ಪರಿಷತ್‌ನಲ್ಲಿ ನಡೆಯುತ್ತಿರುವುದು ರಾಜ್ಯಕ್ಕೆ ಕಪ್ಪುಚುಕ್ಕೆಯಾದಂತಾಗಿದೆ.

English summary
Congress MLC Prakash Rathod caught watching porn in karnataka legislative council ? Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X