ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಜಾಬ್: ಜಮೀರ್ ಪರ ಸಿದ್ದರಾಮಯ್ಯ ವಕಾಲತ್ತಿಗೆ ಮಣಿಯದ ಕಾಂಗ್ರೆಸ್ ಶಾಸಕರು?

|
Google Oneindia Kannada News

ಬೆಂಗಳೂರು, ಫೆ 15: 'ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು' ಎನ್ನುವಂತೆ ಹಿಜಾಬ್ ವಿಚಾರದಲ್ಲಿ ಏನೇನೋ ಹೇಳಿ ಮತ್ತೆ ಅದನ್ನು ಸಮರ್ಥಿಸಿಕೊಳ್ಳಲು ಹೋಗಿ ಮತ್ತಿನ್ನೇನೋ ಹೇಳಿ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಸ್ವಪಕ್ಷೀಯರಿಂದಲೇ ಟೀಕೆಗೆ ಒಳಗಾಗಿದ್ದಾರೆ.

ವಿಧಾನ ಮಂಡಲದ ಅಧಿವೇಶನ ಆರಂಭವಾಗಿರುವ ಹಿನ್ನಲೆಯಲ್ಲಿ ಜಮೀರ್ ಅಹ್ಮದ್ ಖಾನ್ ಹೇಳಿಕೆಗೆ ಕಾಂಗ್ರೆಸ್ ಹೈಕಮಾಂಡ್ ಕೂಡಾ ತೀರಾ ಆಕ್ರೋಶ ವ್ಯಕ್ತ ಪಡಿಸಿದೆ. ಬಿಜೆಪಿಗೆ ಸುಮ್ಮನೆ ಅಸ್ತ್ರವನ್ನು ಕೊಡಬೇಡಿ ಎನ್ನುವ ಎಚ್ಚರಿಕೆಯನ್ನು ಕಾಂಗ್ರೆಸ್ ವರಿಷ್ಠರು ರವಾನಿಸಿದ್ದಾರೆ.

ಹಿಜಾಬ್ ಕುರಿತ ವಿವಾದಾತ್ಮಕ ಹೇಳಿಕೆಗೆ ಕ್ಷಮೆಯಾಚಿಸಿದ ಜಮೀರ್ ಅಹ್ಮದ್‌ಹಿಜಾಬ್ ಕುರಿತ ವಿವಾದಾತ್ಮಕ ಹೇಳಿಕೆಗೆ ಕ್ಷಮೆಯಾಚಿಸಿದ ಜಮೀರ್ ಅಹ್ಮದ್‌

ಸೋಮವಾರ (ಫೆ 14) ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲೂ ಜಮೀರ್ ಹೇಳಿಕೆಯೇ ಪ್ರಮುಖವಾಗಿ ಚರ್ಚೆಗೆ ಬಂತು. ಒಕ್ಕೊರಲಿನಿಂದ ಎಲ್ಲರೂ ಜಮೀರ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿ, ಶಿಸ್ತು ತಪ್ಪಬಾರದು ಎನ್ನುವ ಎಚ್ಚರಿಕೆಯನ್ನು ನೀಡಬೇಕು ಎಂದು ಶಾಸಕರು ಆಗ್ರಹಿಸಿದರು ಎಂದು ಹೇಳಲಾಗುತ್ತಿದೆ.

ಸಿಎಲ್‌ಪಿ ನಾಯಕ ಸಿದ್ದರಾಮಯ್ಯನವರು, ಶಾಸಕರ ಎಲ್ಲಾ ಮಾತನ್ನು ಮೌನವಾಗಿ ಆಲಿಸಿ, ಪಕ್ಷ ಏನು ನಿರ್ಧಾರ ತೆಗೆದುಕೊಳ್ಳುತ್ತೋ ತೆಗೆದುಕೊಳ್ಳಲಿ ಎಂದು ಹೇಳಿದ್ದಾರೆ. ಅದಕ್ಕೂ ಮೊದಲು ಜಮೀರ್ ಅವರ ಪರ ವಕಾಲತ್ತು ವಹಿಸಿದ್ದರು ಎನ್ನುವ ಮಾತು ಕೇಳಿ ಬರುತ್ತಿದೆ.

ಸಿದ್ದರಾಮಯ್ಯಗಾಗಿ ತ್ಯಾಗಕ್ಕೆ ಮುಂದಾದ ಜಮೀರ್ ಅಹ್ಮದ್ ಖಾನ್! ಸಿದ್ದರಾಮಯ್ಯಗಾಗಿ ತ್ಯಾಗಕ್ಕೆ ಮುಂದಾದ ಜಮೀರ್ ಅಹ್ಮದ್ ಖಾನ್!

ರಾಜ್ಯ ಉಸ್ತುವಾರಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೂ ಜಮೀರ್ ಅಹ್ಮದ್ ಖಾನ್ ಡೋಂಟ್ ಕೇರ್ ಎಂದು ಹಿಜಾಬ್ ಬಗ್ಗೆ ನಾನು ಮಾತನಾಡುತ್ತೇನೆ, ಕ್ಷಮೆಯಾಚಿಸುವುದಿಲ್ಲ ಎಂದು ಹೇಳಿದ್ದರು. ಇದಕ್ಕೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ, ಏನು ಕ್ರಮ ತೆಗೆದುಕೊಳ್ಲಬೇಕು ಎನ್ನುವುದು ನಮಗೆ ಗೊತ್ತಿದೆ ಎಂದು ಡಿಕೆಶಿ ತಿರುಗೇಟು ನೀಡಿದ್ದರು. ಇದರ ಬೆನ್ನಲ್ಲೇ, ರಾಜ್ಯ ಉಸ್ತುವಾರಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಟ್ವೀಟ್ ಮಾಡಿ, ಜಮೀರ್ ಹೇಳಿಕೆಯನ್ನು ಕಾಂಗ್ರೆಸ್ ಸಮರ್ಥಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟನೆಯನ್ನು ನೀಡಿದ್ದರು.

ನನ್ನ ಹೇಳಿಕೆ ತಿರುಚಲಾಗಿದೆ ಎನ್ನುವ ಸ್ಟ್ಯಾಂಡರ್ಡ್ ಮಾತಿನೊಂದಿಗೆ ಜಮೀರ್ ಸರಣಿ ಟ್ವೀಟ್

ಇದರ ಬೆನ್ನಲ್ಲೇ ಸಿದ್ದರಾಮಯ್ಯನವರೂ ಜಮೀರ್ ಅವರಿಗೆ ಕರೆಮಾಡಿ ತರಾಟೆಗೆ ತೆಗೆದುಕೊಂಡರು ಎಂದು ಹೇಳಲಾಗುತ್ತಿದೆ. ಇದೆಲ್ಲಾ ಬೆಳವಣಿಗೆಯ ನಂತರ ಜಮೀರ್ ಅಹ್ಮದ್ ಖಾನ್ ಟ್ವೀಟ್ ಮೂಲಕ ಕ್ಷಮೆಯಾಚಿಸಿದರು. ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎನ್ನುವ ಸ್ಟ್ಯಾಂಡರ್ಡ್ ಮಾತಿನೊಂದಿಗೆ ಸರಣಿ ಟ್ವೀಟ್ ಅನ್ನು ಜಮೀರ್ ಮಾಡಿದರು. ಆದರೆ, ಅಷ್ಟೊತ್ತಿಗಾಗಲೇ ಜಮೀರ್ ಅವರ ಹೇಳಿಕೆ ವೈರಲ್ ಆಗಿ, ಭಾರೀ ಟೀಕೆಗೆ ಒಳಗಾಗಿತ್ತು. ಸ್ವಪಕ್ಷೀಯರಿಗೆ ಇದು ಮುಜುಗರವನ್ನು ತಂದೊಡ್ಡಿದ್ದು ಒಂದು ಕಡೆಯಾದರೆ, ಬಿಜೆಪಿಯು ಅಧಿವೇಶನದಲ್ಲಿ ಇದನ್ನೇ ಅಸ್ತ್ರವಾಗಿ ಬಳಸಿಕೊಂಡರೆ ಎನ್ನುವ ಪೂರ್ವ ತಯಾರಿ ಆರಂಭವಾಯಿತು.

 ಎಲ್ಲವನ್ನೂ ಸಿದ್ದರಾಮಯ್ಯ ಮೌನವಾಗಿ ಆಲಿಸಿದ್ದಾರೆ ಎನ್ನುವ ಮಾಹಿತಿ

ಎಲ್ಲವನ್ನೂ ಸಿದ್ದರಾಮಯ್ಯ ಮೌನವಾಗಿ ಆಲಿಸಿದ್ದಾರೆ ಎನ್ನುವ ಮಾಹಿತಿ

ಶಾಸಕಾಂಗ ಪಕ್ಷದ ಸಭೆಯಲ್ಲಿ, ಪಕ್ಷದಲ್ಲಿ ಶಿಸ್ತು ಇಲ್ಲವಾಗುತ್ತಿದೆ ಎನ್ನುವ ಬೇಸರವನ್ನು ಹೆಚ್ಚಿನ ಶಾಸಕರು ವ್ಯಕ್ತಪಡಿಸಿದರು. ಅಧ್ಯಕ್ಷರ ಮಾತನ್ನೇ ಕೇಳದೇ, ಪ್ರತ್ಯುತ್ತರ ಕೊಡುತ್ತಾರೆ ಅಂದರೆ, ಜನರಿಗೆ ಏನು ಸಂದೇಶವನ್ನು ನೀಡಿದಂತಾಗುತ್ತದೆ, ಬಿಜೆಪಿಗೆ ನಾವೇ ನಮ್ಮ ವಿರೋಧ ಟೀಕೆ ಮಾಡಲು ಅವಕಾಶ ನೀಡಿದಂತಾಗುತ್ತಲ್ಲವೇ ಎನ್ನುವ ಅಳಲನ್ನು ಬಹುತೇಕ ಶಾಸಕರು ಸಿದ್ದರಾಮಯ್ಯನವರ ಮುಂದೆ ತೋಡಿಕೊಂಡಿದ್ದಾರೆ. ಎಲ್ಲವನ್ನೂ ಸಿದ್ದರಾಮಯ್ಯ ಮೌನವಾಗಿ ಆಲಿಸಿದ್ದಾರೆ ಎನ್ನುವ ಮಾಹಿತಿಯಿದೆ.

 ಸಿದ್ದರಾಮಯ್ಯನವರು ಜಮೀರ್ ಪರ ವಕಾಲತ್ತು ವಹಿಸಿದ್ದಾರೆ

ಸಿದ್ದರಾಮಯ್ಯನವರು ಜಮೀರ್ ಪರ ವಕಾಲತ್ತು ವಹಿಸಿದ್ದಾರೆ

ಶಿಸ್ತುಕ್ರಮ ತೆಗೆದುಕೊಳ್ಳಬೇಕು ಎನ್ನುವ ಒತ್ತಾಯ ಹೆಚ್ಚಾದಾಗ ಸಿದ್ದರಾಮಯ್ಯನವರು ಸಮಜಾಯಿಶಿ ನೀಡಲು ಆರಂಭಿಸಿದರು. ಏನೋ ಹೇಳಲು ಹೋಗಿ ಇನ್ನೇನೋ ಹೇಳಿ ಎಡವಟ್ಟು ಮಾಡಿಕೊಂಡಿದ್ದಾನೆ. ಅಧ್ಯಕ್ಷರ ಮಾತನ್ನು ಮೀರಿ ಹೇಳಿಕೆ ನೀಡಿದ್ದು ತಪ್ಪು, ಸರಣಿ ಟ್ವೀಟ್ ಮೂಲಕ ಕ್ಷಮೆಯಾಚಿಸಿದ್ದಾನೆ ಎಂದು ಸಿದ್ದರಾಮಯ್ಯನವರು ಜಮೀರ್ ಪರ ವಕಾಲತ್ತು ವಹಿಸಿದ್ದಾರೆ. ಆಗ, ಶಾಸಕರ ಒತ್ತಾಯ ಹೆಚ್ಚಾದಾಗ, ಪಕ್ಷದ ಶಿಸ್ತುಪಾಲನಾ ಸಮಿತಿ ಏನು ಕ್ರಮ ತೆಗೆದುಕೊಳ್ಳುತ್ತೋ ತೆಗೆದುಕೊಳ್ಳಲಿ. ಪಕ್ಷದ ತೀರ್ಮಾನ ಏನಿದೆಯೋ ಹಾಗೇ ಆಗಲಿ ಎಂದು ಶಾಸಕರ ಒತ್ತಾಯಕ್ಕೆ ಮಣಿದರು ಎಂದು ಹೇಳಲಾಗುತ್ತಿದೆ.

Recommended Video

RCB ಆಟಗಾರರ ಕಾಂಬಿನೇಷನ್ ನೋಡಿದ್ರೆ ಗ್ಯಾರೆಂಟಿ ಕಪ್ ನಮ್ದೇ | Oneindia Kannada

English summary
Congress MLAs Angry On Zameer Ahmed Khan In CLP Meeting Headed By Siddaramaiah. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X