ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಸಕ ಉಮೇಶ್ ಜಾಧವ್ ರಾಜೀನಾಮೆ ಸಾಧ್ಯತೆ, ಸರ್ಕಾರಕ್ಕೆ ಸಂಕಷ್ಟ

|
Google Oneindia Kannada News

Recommended Video

ಎಚ್ ಡಿ ಕುಮಾರಸ್ವಾಮಿ ಸರ್ಕಾರಕ್ಕೆ ಸಂಕಷ್ಟ | ಕಾಂಗ್ರೆಸ್ ಶಾಸಕ ರಾಜೀನಾಮೆ ಸಾಧ್ಯತೆ

ಬೆಂಗಳೂರು, ಫೆಬ್ರವರಿ 12: ಅತೃಪ್ತರ ಬಣದಲ್ಲಿ ಗುರುತಿಸಿಕೊಂಡಿರುವ ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ ಅವರು ಕೆಲವೇ ದಿನದಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ದಟ್ಟವಾಗಿದೆ.

ಈ ಬಗ್ಗೆ ಉಮೇಶ್ ಜಾಧವ್ ಅವರ ಸಹೋದರ ರಾಮಚಂದ್ರ ಜಾಧವ್ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಉಮೇಶ್ ಅವರು ಕಾನೂನು ತಜ್ಞರ ಸಲಹೆ ಪಡೆಯುತ್ತಿದ್ದು, ಎರಡು-ಮೂರು ದಿನಗಳಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದಿದ್ದಾರೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ಅವರು ಕಲಬುರ್ಗಿ ಲೋಕಸಭಾ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಅವರು ಸ್ಪರ್ಧಿಸಬಹುದು, ಒಂದೊಮ್ಮೆ ಅವರು ಸ್ಪರ್ಧಿಸಿದರೆ ಗೆಲುವು ಖಚಿತ ಎಂದು ರಾಮಚಂದ್ರ ಜಾಧವ್ ಅವರು ಹೇಳಿದ್ದಾರೆ.

ಆಡಿಯೋ ಟೇಪ್ : ಆಪರೇಷನ್ ಕಮಲಕ್ಕೆ ಬಿತ್ತು ತಾತ್ಕಾಲಿಕ ತಡೆ! ಆಡಿಯೋ ಟೇಪ್ : ಆಪರೇಷನ್ ಕಮಲಕ್ಕೆ ಬಿತ್ತು ತಾತ್ಕಾಲಿಕ ತಡೆ!

ಅವರು ಮುಂಬೈಗೆ ಹೋಗಿಲ್ಲ ಬೆಂಗಳೂರಿನಲ್ಲಿಯೇ ಇದ್ದಾರೆ, ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸುತ್ತಿದ್ದಾರೆ, ಎರಡು ಮೂರು ದಿನಗಳಲ್ಲಿ ಅವರು ರಾಜೀನಾಮೆ ನೀಡಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಕ್ಷೇತ್ರದಲ್ಲಿ ಅಭಿವೃದ್ಧಿ ಸ್ಥಗಿತ

ಕ್ಷೇತ್ರದಲ್ಲಿ ಅಭಿವೃದ್ಧಿ ಸ್ಥಗಿತ

ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿರುವುದಕ್ಕೆ ಅವರಿಗೆ ಬೇಸರವಾಗಿದೆ. ಸರ್ಕಾರ ಬೀಳಿಸುವುದಕ್ಕಾಗಿ ಅವರು ರಾಜೀನಾಮೆ ನೀಡುತ್ತಿಲ್ಲ, ಅದಕ್ಕೆ ಅವರದ್ದೇ ಆದ ಬೇರೆಯ ಕಾರಣಗಳಿವೆ ಎಂದು ರಾಮಚಂದ್ರ ಜಾಧವ್ ಹೇಳಿದ್ದಾರೆ.

ಜನ ನಮ್ಮನ್ನು ಕಳ್ಳ ಕಳ್ಳ ಕಳ್ಳಾ ಅಂತಾ ಕರೀತಾ ಇದ್ದಾರೆ : ಡಿಕೆ ಶಿವಕುಮಾರ್ ಜನ ನಮ್ಮನ್ನು ಕಳ್ಳ ಕಳ್ಳ ಕಳ್ಳಾ ಅಂತಾ ಕರೀತಾ ಇದ್ದಾರೆ : ಡಿಕೆ ಶಿವಕುಮಾರ್

ಉಮೇಶ್ ಜಾಧವ್ ವಿರುದ್ಧ ಕಾಂಗ್ರೆಸ್ ದೂರು

ಉಮೇಶ್ ಜಾಧವ್ ವಿರುದ್ಧ ಕಾಂಗ್ರೆಸ್ ದೂರು

ಕಾಂಗ್ರೆಸ್ ವಿರುದ್ಧ ಅಸಮಾಧಾನಗೊಂಡಿರುವ ಉಮೇಶ್ ಜಾಧವ್ ಅವರು, ಕೆಪಿಸಿಸಿ ನೀಡಿದ್ದ ನೊಟೀಸ್‌ಗೂ ಉತ್ತರಿಸಿರಲಿಲ್ಲ, ವಿಪ್‌ ಅನ್ನೂ ಉಲ್ಲಂಘಿಸಿದ್ದಾರೆ. ಹಾಗಾಗಿ ಉಮೇಶ್ ಜಾಧವ್ ಅವರನ್ನೂ ಸೇರಿ ನಾಲ್ಕು ಕಾಂಗ್ರೆಸ್ ಶಾಸಕರ ವಿರುದ್ಧ ಸ್ಪೀಕರ್ ವಿರುದ್ಧ ಬಳಿ ದೂರು ನೀಡಿದ್ದಾರೆ.

ಸದನದಿಂದ ಹೊರನಡೆದ ಶಿವನಗೌಡ ನಾಯಕ್, ಅನುಮಾನಕ್ಕೆ ಪುಷ್ಠಿ ಸದನದಿಂದ ಹೊರನಡೆದ ಶಿವನಗೌಡ ನಾಯಕ್, ಅನುಮಾನಕ್ಕೆ ಪುಷ್ಠಿ

ಬಿಜೆಪಿ ಜೊತೆ ಕೈ ಸೇರಿಸಿದ್ದಾರೆ ಉಮೇಶ್‌?

ಬಿಜೆಪಿ ಜೊತೆ ಕೈ ಸೇರಿಸಿದ್ದಾರೆ ಉಮೇಶ್‌?

ಉಮೇಶ್ ಜಾಧವ್ ಅವರು ಸಂಪುಟ ವಿಸ್ತರಣೆ ಸಮಯದಿಂದಲೂ ಕಾಂಗ್ರೆಸ್‌ ವಿರುದ್ಧ ಕೆಂಪು ಬಾವುಟ ಹಾರಿಸಿದ್ದಾರೆ. ರಮೇಶ್ ಜಾರಕಿಹೊಳಿ ಬಣ ಸೇರಿ ಬಿಜೆಪಿಯೊಂದಿಗೆ ಕೈಸೇರಿಸಿ ಮುಂಬೈಗೆ ಸಹ ತೆರಳಿದ್ದರು ಎನ್ನಲಾಗಿತ್ತು.

ಅತೃಪ್ತ ಶಾಸಕರು ಯಾರ್ಯಾರು?

ಅತೃಪ್ತ ಶಾಸಕರು ಯಾರ್ಯಾರು?

ಕಾಂಗ್ರೆಸ್‌ನ ರಮೇಶ್ ಜಾರಕಿಹೊಳಿ, ಉಮೇಶ್‌ ಜಾಧವ್, ನಾಗೇಂದ್ರ, ಮಹೇಶ್ ಮುಕಟಳ್ಳಿ ಅವರುಗಳು ಕಾಂಗ್ರೆಸ್‌ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದಾರೆ. ಅವರೊಂದಿಗೆ ಕಾಂಗ್ರೆಸ್‌ನ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಮತ್ತು ಜೆಡಿಎಸ್‌ನ ಒಬ್ಬ ಶಾಸಕ ಸಹ ಅವರ ಜೊತೆ ಇದ್ದಾರೆ ಎನ್ನಲಾಗಿದೆ.

English summary
Congress MLA Umesh Jadhav may submit his resignation to assembly speaker in two or three days. Umesh Jadhav's brother Ramachandra jadhav said to media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X