ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್‌ನಲ್ಲಿ ಮೋದಿ ಪ್ರಭಾವ ಇದೆ: ಕಾಂಗ್ರೆಸ್‌ ಸೋಲಿಗೆ ಕಾರಣ ಬಿಚ್ಚಿಟ್ಟ ಪ್ರಿಯಾಂಕ್‌ಖರ್ಗೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 8: ಗುಜರಾತ್‌ ಚುನಾವಣೆಯಲ್ಲಿ ನಮ್ಮ ನಿರೀಕ್ಷೆಗೂ ಮೀರಿದ ಬಹಳ ಕಡಿಮೆ ಸ್ಥಾನ ಬಂದಿದೆ. ಅದರಲ್ಲಿ ಎರಡು ಮಾತಿಲ್ಲ. 80-95 ಕ್ಷೇತ್ರದಲ್ಲಿ ನಮ್ಮ ಗೆಲುವಿನ ನಿರೀಕ್ಷೆ ಇತ್ತು. ಮುನ್ನಡೆಗಳನ್ನು ನೋಡುತ್ತಿದ್ದರೆ, ಯಾಕೋ ನಮ್ಮ ನಿರೀಕ್ಷೆ ಮಟ್ಟಕ್ಕಿಲ್ಲ ಎಂದು ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಲಿನ ಸ್ಥಳೀಯ ನಾಯಕರ ಜೊತೆ ಮತ್ತೊಮ್ಮೆ ಮಾತನಾಡಬೇಕು. ಇದನ್ನು ಹೇಗೆ ಸರಿಪಡಿಸಬಹುದು ಎನ್ನುವುದರ ಬಗ್ಗೆ ಮಾತನಾಡುತ್ತೇವೆ ಎಂದರು.

ಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022 - ಲೈವ್ ಫಲಿತಾಂಶಗಳುಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022 - ಲೈವ್ ಫಲಿತಾಂಶಗಳು

ಗುಜರಾತ್‌ನಲ್ಲಿ ಕೆಲ ವರ್ಷಗಳಿಂದ ತ್ರಿ ಎಮ್‌(3M) ಬಹಳ ಕೆಲಸ ಮಾಡುತ್ತಿದೆ. ಒಂದು ಮನಿ, ಹಣದ ಬಲ, ಮಸಲ್‌ ಮತ್ತು ಮೋದಿ. 27 ವರ್ಷಗಳು ಆದರೂ ಕೂಡ ಪ್ರಧಾನಿ ಮೋದಿ ಕಾರ್ಪೋರೇಷನ್‌ ಚುನಾವಣೆಗೆ ಹೇಗೆ ಪ್ರಚಾರ ಮಾಡುತ್ತಾರೋ, ಹಾಗೆ ಪ್ರಚಾರ ಮಾಡುವ ಅಗತ್ಯ ಇದೆ ಎಂದರೆ, ಇವರ ಸಾಧನೆ ಏನಿದೆ..? ಎಂದು ಪ್ರಶ್ನಿಸಿದ್ದಾರೆ.

Congress MLA Priyank kharge Reaction On Gujarat Election Result 2022

ಇನ್ನು ಗುಜರಾತ್‌ನಲ್ಲಿ ಹೆದುರಿಸುವುದು ಬೆದರಿಸುವುದು ನಡೆಯುತ್ತದೆ. ನಮ್ಮ ಕಾರ್ಯಕರ್ತರ ಮೇಲೆ ಎರಡು ಬಾರಿ ಹಲ್ಲೆ ಆಗಿದೆ. ಜೊತೆಗೆ ಐಟಿ, ಇಡಿ ಎಲ್ಲಾ ಇದೆ. ಮತ್ತು ಬಿಜೆಪಿಯವರು ಚುನಾವಣೆಗೆ ಅಧಿಕ ಹಣ ಖರ್ಚು ಮಾಡಿದ್ದಾರೆ. ಈಗಾಗಲೇ ಅವರು ಏಳು ಬಾರಿ ಸಿಎಂ ಬದಲಾಯಿಸಿದ್ದಾರೆ. ಗುಜರಾತ್‌ ಸಾರ್ವಜನಿಕರಿಗೆ ಈಗಲೂ ನಿಮ್ಮ ಮುಖ್ಯಮಂತ್ರಿ ಯಾರು ಎಂದರೆ ಗೊತ್ತಿರುವುದಿಲ್ಲ ಎಂದು ವ್ಯಂಗ್ಯ ಮಾಡಿದರು.

ಗುಜರಾತ್‌ನಲ್ಲಿ ಇನ್ನೂ ಮೋದಿ ಅವರ ಪ್ರಭಾವ ಇದೆ. ಅದನ್ನೂ ಕೂಡ ನಾವು ತೆಗೆದುಹಾಕುವ ಹಾಗಿಲ್ಲ. ಇಷ್ಟಾದರೂ ಅವರಿಗೆ ಅವರ ಸಾಧನೆ ಮೇಲೆ ಗೆಲ್ಲಲು ಆಗುತ್ತಿಲ್ಲ. 27 ವರ್ಷವಾದರೂ ಸಹಿತ ನಾವು ಇಂತಹ ಒಂದು ಕೆಲಸ ಮಾಡಿದ್ದೇವೆ ಎಂದು ಹೇಳಿ ಗೆಲ್ಲಲು ಅವರಿಗೆ ಯಾವುದೇ ಉದಾಹರಣೆ ಇಲ್ಲ. ಇನ್ನು ನಾವು ನಮ್ಮ ಪಕ್ಷವನ್ನು ಸಂಘಟನೆ ಮಾಡಬೇಕು. ಅದನ್ನು ಮುಂದಿನ ದಿನಗಳಲ್ಲಿ ನಾವು ಮಾಡುತ್ತೇವೆ ಎಂದರು.

English summary
Congress MLA Priyank kharge on Gujarat Election Result.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X