ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದರಾಮಯ್ಯ, ಪರಮೇಶ್ವರ್ ಅಂಗಳಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳ ಅಂತಿಮ ಪಟ್ಟಿ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಏಪ್ರಿಲ್ 8: ಮೇ 12ರಂದು ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ಹೈಕಮಾಂಡ್ ಸೂಚನೆ ನೀಡಿದೆ. ಒಮ್ಮೆ ನೀವು ಪಟ್ಟಿಯನ್ನು ಅಂತಿಮಗೊಳಿಸಿದ ನಂತರ ನಾವು ಅದಕ್ಕೆ ಅಧಿಕೃತ ಮುದ್ರೆ ಒತ್ತುತ್ತೇವೆ ಎಂದು ಹೈಮಾಂಡ್ ಹೇಳಿದೆ.

ಎಐಸಿಸಿ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಮತ್ತು ಸ್ಟ್ರೀನಿಂಗ್ ಸಮಿತಿ ಅಧ್ಯಕ್ಷ ಮಧುಸೂಧನ್ ಮಿಸ್ತ್ರಿ ಜೊತೆ ಸಮಾಲೋಚನೆ ನಡೆಸಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವಂತೆ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಗೆ ಸೂಚನೆ ನೀಡಲಾಗಿದೆ.

ಬಿಜೆಪಿ & ಜೆಡಿಎಸ್ 25 ಸೀಟುಗಳಿಗಿಂತ ಹೆಚ್ಚು ಗೆಲ್ಲಲ್ಲ: ಸಿದ್ದರಾಮಯ್ಯಬಿಜೆಪಿ & ಜೆಡಿಎಸ್ 25 ಸೀಟುಗಳಿಗಿಂತ ಹೆಚ್ಚು ಗೆಲ್ಲಲ್ಲ: ಸಿದ್ದರಾಮಯ್ಯ

ಏಪ್ರಿಲ್ 15ರಂದು ಕಾಂಗ್ರೆಸ್ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ಅಭ್ಯರ್ಥಿಗಳ ಪಟ್ಟಿಯಲ್ಲಿ ಯಾವುದೇ ವಿವಾದಗಳು ಹೈಕಮಾಂಡ್ ಗೆ ಬೇಡವಾಗಿದ್ದು ರಾಜ್ಯಮಟ್ಟದಲ್ಲೇ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಗೆ ಪಟ್ಟಿ ಅಂತಿಗೊಳಿಸುವ ಹೊಣೆ ನೀಡಲಾಗಿದೆ.

Congress leaves final candidate list to Siddaramaiah, Parameshwar

ಕಾಂಗ್ರೆಸ್ ಗೆ ಇಲ್ಲಿಯವರೆಗೆ ಅಭ್ಯರ್ಥಿಗಳಿಂದ 1,000 ಅರ್ಜಿಗಳು ಬಂದಿವೆ. ಎಲ್ಲಾ ಕಾಂಗ್ರೆಸ್ ನ ಹಾಲಿ ಶಾಸಕರು ಮತ್ತು ಕಾಂಗ್ರೆಸ್ ಪಕ್ಷಕ್ಕೆ ಬೇರೆ ಪಕ್ಷದಿಂದ ವಲಸೆ ಬಂದವರು ಟಿಕೆಟ್ ಪಡೆಯುವ ಸಾಧ್ಯತೆ ಇದೆ.

ನನ್ನ ಟಿಕೆಟ್ಟೇ ಇನ್ನೂ ಕನ್‌ಫರ್ಮ್‌ ಆಗಿಲ್ಲ: ಪರಮೇಶ್ವರ್‌ನನ್ನ ಟಿಕೆಟ್ಟೇ ಇನ್ನೂ ಕನ್‌ಫರ್ಮ್‌ ಆಗಿಲ್ಲ: ಪರಮೇಶ್ವರ್‌

ಆದರೆ ಕಾಂಗ್ರೆಸ್ ಪಕ್ಷದ ಆಂತರಿಕ ಸಮೀಕ್ಷೆಯಲ್ಲಿ 30 ಶಾಸಕರು ಸೋಲಲಿದ್ದಾರೆ ಎಂಬ ವರದಿ ಬಂದಿರುವುದರಿಂದ ಇವರಿಗೆ ಟಿಕೆಟ್ ಸಿಗಲಿದೆಯಾ ಎಂಬ ಬಗ್ಗೆ ಅನುಮಾನಗಳಿವೆ.

ಏ.15 ಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಹಾಲಿ ಶಾಸಕರ ಮೇಲುಗೈ?!ಏ.15 ಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಹಾಲಿ ಶಾಸಕರ ಮೇಲುಗೈ?!

English summary
The Congress high command has told its Karnataka state unit to finalise the list of candidates for the May 12 Karnataka assembly elections. The high command has said that it would formally approve the list of candidates after the state unit finalises it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X