ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪುಟ ವಿಸ್ತರಣೆ: ಜು.18ಕ್ಕೆ ಕಾಂಗ್ರೆಸ್‌ ಹೈಕಮಾಂಡ್ ಜತೆ ಚರ್ಚೆ

By Manjunatha
|
Google Oneindia Kannada News

ಬೆಂಗಳೂರು, ಜುಲೈ 15: ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿಗಳಿಗೆ ನೇಮಕ ವಿಚಾರವಾಗಿ ಹೈಕಮಾಂಡ್ ಜತೆ ಚರ್ಚಿಸಲು ಕಾಂಗ್ರೆಸ್ ಮುಖಂಡರು ಜುಲೈ 18ರಂದು ದೆಹಲಿಗೆ ಹಾರಲಿದ್ದಾರೆ.

ಬಜೆಟ್ ಕಾರಣದಿಂದ ಮುಂದೂಡಲ್ಪಟ್ಟಿದ್ದ ಎರಡನೇ ಹಂತದ ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿಗಳ ನೇಮಕಾತಿ ಬಗ್ಗೆ ಹೈಕಮಾಂಡ್‌ ಬಳಿ ವಿಸ್ತೃತವಾಗಿ ಚರ್ಚಿಸಲಾಗುತ್ತದೆ.

ಸಂಪುಟ ವಿಸ್ತರಣೆ : 6 ಸ್ಥಾನಕ್ಕೆ 16ಕ್ಕೂ ಅಧಿಕ ಆಕಾಂಕ್ಷಿಗಳು ಸಂಪುಟ ವಿಸ್ತರಣೆ : 6 ಸ್ಥಾನಕ್ಕೆ 16ಕ್ಕೂ ಅಧಿಕ ಆಕಾಂಕ್ಷಿಗಳು

ಜುಲೈ 18ರಂದು ದೆಹಲಿಯಲ್ಲಿ ನಡೆಯುವ ಚರ್ಚೆಯಲ್ಲಿ ನೂತನ ಕೆಪಿಸಿಸಿ ಅಧ್ಯಕ್ಷ, ಉಪಾಧ್ಯಕ್ಷ, ಉಪಮುಖ್ಯಮಂತ್ರಿ ಪರಮೇಶ್ವರ್, ಸಚಿವ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ. ಈ ವಿಷಯವನ್ನು ಜಿ.ಪರಮೇಶ್ವರ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Congress leaders will discuss about cabinet expansion

ಅತೃಪ್ತರಿಗೆ ಈ ಬಾರಿ ಮಣೆ ಹಾಕಲು ಕಾಂಗ್ರೆಸ್ ನಿಶ್ಚಯಿಸಿದ್ದು, ಎಂಬಿ ಪಾಟೀಲ್ ಅವರಿಗೆ ಸಚಿವ ಸ್ಥಾನ ಗ್ಯಾರೆಂಟಿ ಎನ್ನಲಾಗುತ್ತಿದೆ. ಉಳಿದ ಅತೃಪ್ತರು ನಿಗಮ ಮಂಡಳಿ ಸ್ಥಾನಗಳಿಗೆ ಸಮಾಧಾನ ಮಾಡಿಕೊಳ್ಳಬೇಕಿದೆ.

ಲೋಕಸಭೆ ಚುನಾವಣೆಗೆ ಯುವ ಪಡೆ ಕಟ್ಟುತ್ತಿದ್ದಾರೆ ದಿನೇಶ್ ಗುಂಡೂರಾವ್ಲೋಕಸಭೆ ಚುನಾವಣೆಗೆ ಯುವ ಪಡೆ ಕಟ್ಟುತ್ತಿದ್ದಾರೆ ದಿನೇಶ್ ಗುಂಡೂರಾವ್

ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ನಿಗಮ ಮಂಡಳಿ ಸ್ಥಾನಗಳನ್ನು ಹಂಚಿಕೊಂಡಿದ್ದು ಕಾಂಗ್ರೆಸ್‌ಗೆ ಹೆಚ್ಚಿನ ಪಾಲು ದೊರೆತಿದೆ. ನಿನ್ನೆ ತಾನೇ ದೇವೇಗೌಡರು ತಮ್ಮ ಪಕ್ಷದ ಸಭೆಯಲ್ಲಿ 'ಜೆಡಿಎಸ್‌ಗೆ ನಿಗಮ ಮಂಡಳಿಗಳು ಕಡಿಮೆ ದೊರಕಲಿವೆ ಅವಕಾಶ ಸಿಗದವರು ಬೇಸರವಾಗುವುದು ಬೇಡ' ಎಂದಿದ್ದರು.

English summary
Congress leadrs Siddaramaiah, G parameshwar, DK Shivakuamr and new KPCC president and working president going to Delhi on July 18 to discuss about cabinet expansion and corporation council.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X