ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇವಿಎಂ ಬಗ್ಗೆ ಮತ್ತೆ ತಕರಾರು ಎತ್ತಿದ ಕಾಂಗ್ರೆಸ್ ಮುಖಂಡರು

|
Google Oneindia Kannada News

ಬೆಂಗಳೂರು, ಜೂನ್ 1: ಲೋಕಸಭೆ ಚುನಾವಣೆಯ ಫಲಿತಾಂಶದ ಬೆನ್ನಲ್ಲಿಯೇ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಹೊರಬಂದಿದೆ. ಅದರಲ್ಲಿನ ಗೆಲುವು ಕಾಂಗ್ರೆಸ್ ನಾಯಕರಲ್ಲಿ ಸಂತಸ ಮೂಡಿಸಿದೆ. ಬಿಜೆಪಿ ಅಲೆ ನಗರ/ಪಟ್ಟಣ ಪ್ರದೇಶಗಳಲ್ಲಿ ಅಷ್ಟು ದಟ್ಟವಾಗಿಲ್ಲ ಎಂಬುದು ಈ ಫಲಿತಾಂಶದಿಂದ ಗೊತ್ತಾಗಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿಕೊಂಡಿದ್ದಾರೆ.

ಆದರೆ, ಫಲಿತಾಂಶವು ಮತ್ತೊಂದು ಚರ್ಚೆಗೆ ನಾಂದಿ ಹಾಡಿದೆ. ಲೋಕಸಭೆ ಚುನಾವಣೆಯ ಫಲಿತಾಂಶಕ್ಕೂ, ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶಕ್ಕೂ ಇಷ್ಟು ವ್ಯತ್ಯಾಸ ಬರಲು ಹೇಗೆ ಸಾಧ್ಯ? ಇವಿಎಂ ಮತಯಂತ್ರಗಳಲ್ಲಿ ದೋಷ ಇರುವುದನ್ನು ಈ ಫಲಿತಾಂಶ ಸಾಬೀತುಪಡಿಸುತ್ತಿದೆ ಎಂದು ಕಾಂಗ್ರೆಸ್ ನಾಯಕರು ಮತ್ತೆ ಆರೋಪಿಸಿದ್ದಾರೆ.

ನಗರಸಭೆ, ಪುರಸಭೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಗಿಂತ ಅಧಿಕ ಸ್ಥಾನಗಳನ್ನು ಪಡೆದುಕೊಂಡಿದೆ. ಒಟ್ಟು ಘೋಷಣೆಯಾದ 1221 ಸೀಟುಗಳಲ್ಲಿ ಕಾಂಗ್ರೆಸ್ 509 ಸೀಟುಗಳಲ್ಲಿ ಗೆದ್ದಿದ್ದರೆ, ಬಿಜೆಪಿ 366 ಸೀಟುಗಳಲ್ಲಿ ಗೆಲುವು ಕಂಡಿದೆ. ಜೆಡಿಎಸ್ 174ರಲ್ಲಿ ಜಯಗಳಿಸಿದೆ. ಬಿಎಸ್‌ಪಿ 3, ಸಿಪಿಎಂ 2, ಸ್ವತಂತ್ರ ಅಭ್ಯರ್ಥಿಗಳು 160 ಹಾಗೂ ಇತರರು 7 ಸೀಟುಗಳಲ್ಲಿ ಗೆಲುವು ಸಾಧಿಸಿದ್ದಾರೆ.

ಸ್ಥಳೀಯ ಸಂಸ್ಥೆಗಳ ಚುನಾವಣೆ: ಗೆದ್ದು ಬೀಗಿದ ಕಾಂಗ್ರೆಸ್‌ಸ್ಥಳೀಯ ಸಂಸ್ಥೆಗಳ ಚುನಾವಣೆ: ಗೆದ್ದು ಬೀಗಿದ ಕಾಂಗ್ರೆಸ್‌

ಕರ್ನಾಟಕ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ 1221ರಲ್ಲಿ ಕಾಂಗ್ರೆಸ್ 509ರಲ್ಲಿ ಗೆಲುವು ಕಂಡಿದೆ. ಶೇ 42ರಷ್ಟು ಸೀಟುಗಳು ಕಾಂಗ್ರೆಸ್ ಪಾಲಾಗಿವೆ. ಇದು ಕರ್ನಾಟಕದ ಜನರು ಕಾಂಗ್ರೆಸ್ ಜತೆಗಿದ್ದಾರೆ ಎನ್ನುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

Array

ಫಲಿತಾಂಶದ ಬಗ್ಗೆ ತನಿಖೆಯಾಗಬೇಕು

ಆದರೆ, ಅದರ ನಡುವೆ ಅವರು ಅನುಮಾನವೊಂದನ್ನು ವ್ಯಕ್ತಪಡಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಅಷ್ಟು ದೊಡ್ಡ ಅಂತರದಲ್ಲಿ ಗೆಲುವು ಕಂಡ ಬಿಜೆಪಿ ಇಲ್ಲಿ ಸೋಲು ಅನುಭವಿಸಿರುವುದು ಹೇಗೆ ಎಂಬ ಅಚ್ಚರಿ ಮೂಡುತ್ತಿದೆ. ಇದರ ಬಗ್ಗೆ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.

ವಿರೋಧಪಕ್ಷಗಳ ಆರೋಪದಲ್ಲಿ ಹುರುಳಿಲ್ಲ: ಇವಿಎಂ-ವಿವಿಪ್ಯಾಟ್ ತಾಳೆ ಸಂಪೂರ್ಣ ಪಕ್ಕಾ ವಿರೋಧಪಕ್ಷಗಳ ಆರೋಪದಲ್ಲಿ ಹುರುಳಿಲ್ಲ: ಇವಿಎಂ-ವಿವಿಪ್ಯಾಟ್ ತಾಳೆ ಸಂಪೂರ್ಣ ಪಕ್ಕಾ

ಚುನಾವಣಾ ಆಯೋಗ ಸ್ಪಷ್ಟಪಡಿಸಲಿ

ಚುನಾವಣಾ ಆಯೋಗ ಸ್ಪಷ್ಟಪಡಿಸಲಿ

ಇದಕ್ಕೂ ಮೊದಲು ಮತ್ತೊಂದು ಟ್ವೀಟ್ ಮಾಡಿರುವ ಅವರು 'ದಿ ಕ್ವಿಂಟ್' ಪತ್ರಿಕೆಯ ವರದಿಯನ್ನು ಹಂಚಿಕೊಂಡಿದ್ದಾರೆ. ಇವಿಎಂ ಯಂತ್ರಗಳ ಮತಗಳಿಗೂ ವಿವಿಪ್ಯಾಟ್ ಮತಗಳಿಗೂ ತಾಳೆಯಾಗಿಲ್ಲ. ಇದರ ಬಗ್ಗೆ ಚುನಾವಣಾ ಆಯೋಗದ ಬಳಿ ಉತ್ತರ ಇದ್ದಂತಿಲ್ಲ. ಪ್ರಜಾಪ್ರಭುತ್ವದಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಬಹಳ ಮುಖ್ಯ. ಚುನಾವಣಾ ಆಯೋಗವು ಕೂಡಲೇ ಮತ್ತು ಸ್ಪಷ್ಟವಾಗಿ ಸ್ಪಷ್ಟೀಕರಣ ನೀಡಬೇಕು ಎಂದು ದಿನೇಶ ಗುಂಡೂರಾವ್ ಆಗ್ರಹಿಸಿದ್ದಾರೆ.

ಮೊದಲ ಸ್ಥಾನ ಹೇಗೆ ಬಂತು?

ಮೊದಲ ಸ್ಥಾನ ಹೇಗೆ ಬಂತು?

ಇವಿಎಂಗಳು ಸ್ಟ್ರಾಂಗ್ ರೂಮ್‌ನಲ್ಲಿ ಇರಬೇಕಿತ್ತು. ಆದರೆ ದೇಶದ ಉದ್ದಗಲಕ್ಕೂ ಇವಿಎಂ ಸಿಗುತ್ತವೆ. ಏಕೆ ಹೀಗೆ ಅವರು ಸಿಗುತ್ತಿವೆ?. ಲೋಕಸಭೆ ಚುನಾವಣೆ ಫಲಿತಾಂಶ ಇತ್ತೀಚೆಗೆ ಬಂದಿತ್ತು. ಅದರ ಬೆನ್ನಲ್ಲೇ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಬಂದಿದೆ. ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟು ದೊಡ್ಡ ಬದಲಾವಣೆ ಹೇಗೆ ಆಯ್ತು? ಕಾಂಗ್ರೆಸ್‌ಗೆ ಹೇಗೆ ಮೊದಲ ಸ್ಥಾನ ಬಂತು? ಎಂದು ಪಕ್ಷದ ವಕ್ತಾರ ಬ್ರಿಜೇಶ್ ಕಾಳಪ್ಪ ಅವರು ಇವಿಎಂ ಯಂತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಇವಿಎಂ ಹ್ಯಾಕ್ ಮಾಡಲು ಸಾಧ್ಯವೇ ಇಲ್ಲ: ಐಪಿಎಸ್ ಅಧಿಕಾರಿ ರೂಪಾ ಇವಿಎಂ ಹ್ಯಾಕ್ ಮಾಡಲು ಸಾಧ್ಯವೇ ಇಲ್ಲ: ಐಪಿಎಸ್ ಅಧಿಕಾರಿ ರೂಪಾ

ಪ್ರಿಯಾಂಕ್ ಖರ್ಗೆ ಅನುಮಾನ

ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದ ಸಂಖ್ಯೆಗಳನ್ನು ಟ್ವೀಟ್ ಮಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿನ ಮತಗಳ ಕ್ರಮದಲ್ಲಿ ಬದಲಾವಣೆ ವಿಚಿತ್ರವಾಗಿದೆ. ಇದು ಅನುಮಾನ ಹುಟ್ಟಿಸುವಂತಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

English summary
Karnataka Congress leaders including Dinesh Gundu Rao once again supected hacking in EVMs after the party winning in local body election results against BJP with huge margin of seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X