ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಗರಣ ಮಾಡಿ ಅಧಿಕಾರ ಕಳೆದುಕೊಳ್ಳುವ ಕಾಂಗ್ರೆಸ್, ಈಗ ಸುಮ್ಮನಿರದಿದ್ದಲ್ಲಿ ಎಲ್ಲಾ ಬಾಯಿ ಬಿಡುವೆ

|
Google Oneindia Kannada News

ಬೆಂಗಳೂರು, ಜುಲೈ 12: ಕೋವಿಡ್ 19 ಉಪಕರಣ ಖರೀದಿಯಲ್ಲಿ ಬಿಎಸ್ವೈ ಸರಕಾರ ಭಾರೀ ಅಕ್ರಮ ಎಸಗಿದೆ ಎನ್ನುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಆರೋಪ ಹೊಸ ರೂಪ ಪಡೆಯುತ್ತಿದೆ.

'ಲೆಕ್ಕ ಕೊಡಿ' ಎಂದು ಸಿದ್ದರಾಮಯ್ಯ ಆರಂಭಿಸಿದ ಅಭಿಯಾನಕ್ಕೆ ಬಿಜೆಪಿಯವರು ತಿರುಗೇಟು ನೀಡುತ್ತಿದ್ದಾರೆ. ಈ ಸಂಬಂಧ, ಬಿಎಸ್ವೈ ಸರಕಾರಕ್ಕೆ ಆರು ಪ್ರಶ್ನೆಯನ್ನು ಸಿದ್ದರಾಮಯ್ಯ ಎಸೆದಿದ್ದಾರೆ.

ಕೊರೊನಾ ಭ್ರಷ್ಟಾಚಾರ: ರಾಜ್ಯ ಸರ್ಕಾರಕ್ಕೆ 6 ಲೆಕ್ಕ ಕೇಳಿದ ಸಿದ್ದರಾಮಯ್ಯಕೊರೊನಾ ಭ್ರಷ್ಟಾಚಾರ: ರಾಜ್ಯ ಸರ್ಕಾರಕ್ಕೆ 6 ಲೆಕ್ಕ ಕೇಳಿದ ಸಿದ್ದರಾಮಯ್ಯ

"ಇಂತಹ ಸಮಯದಲ್ಲಿ ಕಾಂಗ್ರೆಸ್ ಸುಮ್ಮನೇ ಇರದಿದ್ದಲ್ಲಿ, ಎಲ್ಲವನ್ನೂ ಬಾಯಿ ಬಿಡಬೇಕಾಗುತ್ತದೆ'ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ಕಾಂಗ್ರೆಸ್ಸಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.

ಕಾಂಗ್ರೆಸ್ ಸ್ನೇಹಿತರಲ್ಲಿ ನನ್ನದೊಂದು ಮನವಿ: ಕೇಂದ್ರ ಸಚಿವ ಸುರೇಶ್ ಅಂಗಡಿಕಾಂಗ್ರೆಸ್ ಸ್ನೇಹಿತರಲ್ಲಿ ನನ್ನದೊಂದು ಮನವಿ: ಕೇಂದ್ರ ಸಚಿವ ಸುರೇಶ್ ಅಂಗಡಿ

ಬಿಜೆಪಿಯ ಹಿರಿಯ ಮುಖಂಡ ಮುರುಗೇಶ್ ನಿರಾಣಿ, ಪೆನ್ ಡ್ರೈವ್ ನಲ್ಲಿ ಅಕ್ರಮ ಖರೀದಿ ಸಂಬಂಧ ದಾಖಲೆಗಳಿವೆ ಎಂದು ಹೇಳಿದ್ದಾರೆ ಎನ್ನಲಾದ ವಿಡಿಯೋ, ಸೋರಿಕೆಯಾದ ನಂತರ, ಸಿದ್ದರಾಮಯ್ಯನವರ ಹೋರಾಟ ಹೊಸ ಸ್ವರೂಪ ಪಡೆಯುತ್ತಿದೆ. ಡಾ.ಸುಧಾಕರ್, ಎಸೆದ ಚಾಲೆಂಜ್:

ಸಿದ್ದರಾಮಯ್ಯ ಟ್ವೀಟ್

"ಕೊರೊನಾ ನಿಯಂತ್ರಣದಲ್ಲಿ‌ ನಡೆದಿರುವ ಭ್ರಷ್ಟಾಚಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ #LekkaKodi ಎಂಬ ಹ್ಯಾಷ್ ಟ್ಯಾಗ್‌ನೊಂದಿಗೆ ರಾಜ್ಯ ಸರ್ಕಾರದ ವಿರುದ್ಧ ವಿಡಿಯೋ ಅಭಿಯಾನ ಶುರು ಮಾಡಲಾಗಿದೆ.

ನಮ್ಮ ಪಕ್ಷದ ಎಲ್ಲ ಶಾಸಕರು, ಸಂಸದರು, ಕಾರ್ಯಕರ್ತರು ವಿಡಿಯೊ ಮಾಡಿ, ಶೇರ್ ಮಾಡುವ ಮೂಲಕ ಇದರಲ್ಲಿ ಭಾಗವಹಿಸಬೇಕೆಂದು‌ ವಿನಂತಿ. ಕೊರೊನಾ ನಿಯಂತ್ರಣದ ಉದ್ದೇಶಕ್ಕಾಗಿ ಖರ್ಚು ಮಾಡಿದ ಹಣದ ಲೆಕ್ಕ ಕೊಡಿ. ಲೆಕ್ಕ ಕೇಳುವುದು ರಾಜ್ಯದ ಜನತೆಯ ಹಕ್ಕು!! ಲೆಕ್ಕ ಕೊಡುವುದು ನಿಮ್ಮ ಕರ್ತವ್ಯ!!" ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.

ಕಾಂಗ್ರೆಸ್ಸಿನವರಿಗೆ ಯಾವಾಗಲೂ ಮೊಸರಿನಲ್ಲಿ ಕಲ್ಲು ಹುಡುಕುವ ಬುದ್ದಿ

ಕಾಂಗ್ರೆಸ್ಸಿನವರಿಗೆ ಯಾವಾಗಲೂ ಮೊಸರಿನಲ್ಲಿ ಕಲ್ಲು ಹುಡುಕುವ ಬುದ್ದಿ

ಸಿದ್ದರಾಮಯ್ಯನವರ ಆರೋಪಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಸಚಿವ ಡಾ.ಸುಧಾಕರ್, "ಕಾಂಗ್ರೆಸ್ಸಿನವರಿಗೆ ಯಾವಾಗಲೂ ಮೊಸರಿನಲ್ಲಿ ಕಲ್ಲು ಹುಡುಕುವ ಬುದ್ದಿ. ಆರಂಭದಲ್ಲಿ ಕೊರೊನೊ ಸೋಂಕು ನಿಯಂತ್ರಿಸುವ ತುರ್ತು ಅವಶ್ಯಕತೆ ಇತ್ತು. ಆ ಸಮದಲ್ಲಿ ಇದ್ದ ಬೆಲೆಗೂ, ಈಗಿನ ಬೆಲೆಗೂ ವ್ಯತ್ಯಾಸವಿರುವುದಿಲ್ಲವೇ" ಎಂದು ಸುಧಾಕರ್ ಪ್ರಶ್ನಿಸಿದ್ದಾರೆ.

ವೈದ್ಯಕೀಯ ಉಪಕರಣಗಳ ಬೆಲೆ

ವೈದ್ಯಕೀಯ ಉಪಕರಣಗಳ ಬೆಲೆ

"ಈಗ ವೈದ್ಯಕೀಯ ಉಪಕರಣಗಳ ಬೆಲೆ ಮಾರುಕಟ್ಟೆಯಲ್ಲಿ ಇಳಿದಿದೆ. ಅದು, ಸಿದ್ದರಾಮಯ್ಯನವರಿಗೂ ಗೊತ್ತಿರುವ ವಿಚಾರ. ಸದಾ ಅಕ್ರಮ ಎಸಗುತ್ತಾ ಅಧಿಕಾರ ಕೆಳೆದುಕೊಳ್ಳುವ ಕಾಂಗ್ರೆಸ್ಸಿನವರು ಈ ಸಮಯದಲ್ಲಾದರೂ ಸುಮ್ಮನಿರಲಿ. ಇಲ್ಲದಿದ್ದರೆ, ಎಲ್ಲವನ್ನೂ ಬಾಯಿ ಬಿಡಬೇಕಾಗುತ್ತದೆ"ಎಂದು ಸುಧಾಕರ್ ಎಚ್ಚರಿಸಿದ್ದಾರೆ.

ಸಹಕಾರ ಸಚಿವ ಎಸ್.ಟಿ.ಸೋಮಶೇಖರ್

ಸಹಕಾರ ಸಚಿವ ಎಸ್.ಟಿ.ಸೋಮಶೇಖರ್

ವೈದ್ಯಕೀಯ ಉಪಕರಣ ಖರೀದಿ ಸಂಬಂಧ ಎಲ್ಲಾ ದಾಖಲೆಗಳನ್ನು ಕೊಡಲು ಸಿದ್ದರಿದ್ದೇವೆ ಎಂದು ಸಾರಿ ಸಾರಿ ಹೇಳಿದ್ದೇವೆ. ವಿಧಾನಸೌಧಕ್ಕೆ ಬಂದು ಖರೀದಿ ಸಂಬಂಧ ಎಲ್ಲಾ ದಾಖಲೆಗಳನ್ನು ನೋಡಲಿ, ಯಾರು ಬೇಡ ಅಂದವರು. ಅದು ಬಿಟ್ಟು, ಮೈಸೂರಿನಲ್ಲಿ ಕುಳಿತು ಸುಮ್ಮನೆ ಆರೋಪಿಸುವುದು ಸರಿಯಲ್ಲ"ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

English summary
Irregularities in Medical Equipment Purchase: Karnataka Congress Leaders Should Keep Quite, Otherwise Everything We Will Expose: Higher Education Minister Dr.Sudhakar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X