ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ನಾಯಕರು ವಿಶ್ವಾಸ ಮೂಡಿಸುತ್ತಿದ್ದಾರೆಂದು ಯಡಿಯೂರಪ್ಪ ಹೇಳಿದ್ಯಾಕೆ?

|
Google Oneindia Kannada News

ಬೆಂಗಳೂರು, ಸೆ. 25: ಪ್ರತಿ ಆರು ತಿಂಗಳಿಗೊಮ್ಮೆ ಕಾಂಗ್ರೆಸ್ ಪಕ್ಷದವರು ಹೀಗೆಯೇ ಮಾಡುತ್ತಾ ಇರಲಿ. ಅವರು ಹೀಗೆ ಮಾಡುವುದರಿಂದ ನನಗೆ ಆರು ತಿಂಗಳ ಕಾಲ ವಿಶ್ವಾಸ ಬರುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದ್ದಾರೆ. ವಿಧಾನಸಭೆ ಕಲಾಪದಲ್ಲಿ ಭಾಗವಹಿಸುವ ಮೊದಲು ವಿಧಾನಸೌಧದಲ್ಲಿ ಅವರು ಮಾತನಾಡಿದ್ದಾರೆ.

Recommended Video

ಸಿದ್ದು ಹೊಸ ತಂತ್ರಗಾರಿಕೆ | Siddaramaiah | Oneindia Kannada

ವಿಧಾನಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸುವ ಮೂಲಕ ನನಗೆ ವಿಶ್ವಾಸ ಮೂಡಿಸುವ ಕೆಲಸವನ್ನು ಕಾಂಗ್ರೆಸ್‌ ನಾಯಕರು ಮಾಡುತ್ತಿದ್ದಾರೆ. ಪ್ರತಿ ಆರು ತಿಂಗಳಿಗೊಮ್ಮೆ ಅವರು ಹೀಗೆಯೇ ಮಾಡಲಿ. ಅದರಿಂದ ಸರ್ಕಾರದ ಮೇಲೆ ಯಾವುದೇ ಪರಿಣಾಮವಾಗದು ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದರು.

ಅವಿಶ್ವಾಸ ನಿರ್ಣಯ: ವಿಧಾನಸಭೆ ಅಜೆಂಡಾದಲ್ಲಿ ಇಲ್ಲ; ಇದು ಭಂಡ ಸರ್ಕಾರಅವಿಶ್ವಾಸ ನಿರ್ಣಯ: ವಿಧಾನಸಭೆ ಅಜೆಂಡಾದಲ್ಲಿ ಇಲ್ಲ; ಇದು ಭಂಡ ಸರ್ಕಾರ

ರೈತರನ್ನು ಕರೆದು ಮಾತನಾಡುತ್ತೇನೆ: ಭೂಸುಧಾರಣಾ ಕಾಯಿದೆಗೆ ತಿದ್ದುಪಡಿ ವಿರೋಧಿಸಿ ಹೋರಾಟ ಮಾಡುತ್ತಿರುವ ರೈತರನ್ನು ಕರೆದು ಮಾತನಾಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಇವತ್ತು ಮಧ್ಯಾಹ್ನ ರೈತ ಸಂಘಟನೆಗಳ 4-5 ಮುಖಂಡರನ್ನು ಚರ್ಚೆಗೆ ಬರುವಂತೆ ಮನವಿ ಮಾಡಿದ್ದೇನೆ. ಮಧ್ಯಾಹ್ನ ರೈತ ಸಂಘದ ಮುಖಂಡರನ್ನು ಭೇಟಿಯಾತ್ತೇನೆ.

Congress leaders giving confidence by tabling no-confidence motion against state govt: Yediyurappa

ಈ ವರೆಗೆ ಕೈಗಾರಿಕೆಗೆ ಶೇ 2ರಷ್ಟು ಭೂಮಿಯನ್ನು ಮಾತ್ರ ಬಳಸಲಾಗುತ್ತಿದೆ. ನೀರಾವರಿ ಜಮೀನನ್ನು ಯಾರೇ ಖರೀದಿಸಿದರೂ ಕೂಡ ಅದನ್ನು ಕೃಷಿ ಉದ್ದೇಶಕ್ಕೆ ಬಳಸಬೇಕು. ಹೀಗಾಗಿ ನೀರಾವರಿ ಭೂಮಿಯನ್ನು ಯಾರೇ ಖರೀದಿ ಮಾಡಿದರೂ, ರೈತರಿಗೆ ಯಾವುದೇ ತೊಂದರೆ ಆಗಲ್ಲ ಆ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಹೇಳಿಕೆ ಕೊಟ್ಟಿದ್ದಾರೆ.

English summary
Chief Minister Yediyurappa said the Congress leaders were giving confidence to me by tabling no-confidence motion against the state government in the Assembly. He has spoken on the no-confidence motion in Vidhanasoudha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X