ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ತ ಸಿದ್ದರಾಮಯ್ಯ ಪ್ರಕೃತಿ ಚಿಕಿತ್ಸೆಗೆ: ಇತ್ತ, ಡಿ.ಕೆ.ಶಿವಕುಮಾರ್ ಬಣಕ್ಕೆ ಜಮೀರ್ ಅಹ್ಮದ್?

|
Google Oneindia Kannada News

ಸಿದ್ದರಾಮಯ್ಯ ಭಾವೀ ಮುಖ್ಯಮಂತ್ರಿ ಮತ್ತು ಇದಾದ ನಂತರ ನಡೆದ ಜಾರಿ ನಿರ್ದೇಶನಾಲಯದ (ಇಡಿ) ದಾಳಿಯ ನಂತರ, ಚಾಮರಾಜಪೇಟೆಯ ಶಾಸಕ ಜಮೀರ್ ಅಹ್ಮದ್ ಖಾನ್ ತಮ್ಮ ನಿಯತ್ತನ್ನು ಬದಲಾಯಿಸಿದರೇ ಎನ್ನುವ ಪ್ರಶ್ನೆ ಆಗಾಗ ಉದ್ಭವಾಗುತ್ತಲೇ ಇದೆ.

ಆದರೆ, ಸರಿಯಾದ ರಾಜಕೀಯ ದಾಳ ಉದುರಿಸುತ್ತಿರುವ ಮತ್ತು ಪಕ್ಷದ ಕಾರ್ಯಕರ್ತರಲ್ಲಿ ಬೇರೆ ಸಂದೇಶ ಹೋಗಬಾರದು ಎನ್ನುವ ಕಾರಣಕ್ಕಾಗಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮಾನ ಅಂತರವನ್ನು ಕಾಯ್ದುಕೊಂಡು ಬರುತ್ತಿದ್ದಾರೆ.

ಡಿ.ಕೆ. ಶಿವಕುಮಾರ್ ವಿರುದ್ಧ ದೂರು ಕೊಟ್ಟಿದ್ದ ಸಂಸದರಿಗೆ ರಾಜೀವ್ ಗಾಂಧಿ ಏನು ಹೇಳಿದ್ದರು?ಡಿ.ಕೆ. ಶಿವಕುಮಾರ್ ವಿರುದ್ಧ ದೂರು ಕೊಟ್ಟಿದ್ದ ಸಂಸದರಿಗೆ ರಾಜೀವ್ ಗಾಂಧಿ ಏನು ಹೇಳಿದ್ದರು?

ಸಿದ್ದರಾಮಯ್ಯನವರು ಬೆಂಗಳೂರಿನಲ್ಲಿದ್ದಾಗ ತಪ್ಪದೇ ದಿನವೊಂದಕ್ಕೆ ವಿಸಿಟ್ ಹಾಕುತ್ತಿದ್ದ ಜಮೀರ್, ಇಡಿ ದಾಳಿಯ ನಂತರ, ಅವರ ನಿವಾಸಕ್ಕೆ ಹೋಗುವುದನ್ನು ಕಮ್ಮಿ ಮಾಡಿದ್ದರು. ಇದರ ಬೆನ್ನಲ್ಲೇ, ಡಿ.ಕೆ.ಶಿವಕುಮಾರ್ ಅವರು ಜಮೀರ್ ಅಹ್ಮದ್ ನಿವಾಸಕ್ಕೆ ಭೇಟಿ ನೀಡಿದ್ದರು.

ಈ ವಿದ್ಯಮಾನ, ಸಿದ್ದರಾಮಯ್ಯ ಮತ್ತು ಜಮೀರ್ ಬಾಂಧವ್ಯದ ನಡುವೆ ಕಂದಕ ಸೃಷ್ಟಿಸಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿತ್ತು. ಇದು ಹೆಚ್ಚು ಪ್ರಚಾರ ಪಡೆದುಕೊಳ್ಳುತ್ತಿದ್ದಂತೆಯೇ, ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮದ ನಂತರ ಸಿದ್ದರಾಮಯ್ಯನವರು ಜಮೀರ್ ನಿವಾಸಕ್ಕೆ ಊಟಕ್ಕೆ ಹೋಗಿದ್ದರು. ಆದರೆ..

ಕಾಂಗ್ರೆಸ್ ನಾಯಕರು ಕಂಡಂತೆ ರಾಜೀವ್ ಗಾಂಧಿ, ದೇವರಾಜ ಅರಸು ಹೀಗಿದ್ದರು!ಕಾಂಗ್ರೆಸ್ ನಾಯಕರು ಕಂಡಂತೆ ರಾಜೀವ್ ಗಾಂಧಿ, ದೇವರಾಜ ಅರಸು ಹೀಗಿದ್ದರು!

ಷಡ್ಯಂತ್ರದ ಭಾಗವಾಗಿ ನನ್ನ ಮೇಲೂ ಹಲವು ರೀತಿ ದಾಳಿಗಳಾಗುತ್ತಿವೆ

ಶುಭ ಶುಕ್ರವಾರದಂದು (ಆ 20) ಜಮೀರ್ ಅಹ್ಮದ್ ಅವರು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ದೇಶಾದ್ಯಂತ ಮುಸ್ಲಿಂ ಸಮುದಾಯದ ನಾಯಕರ ಹೆಸರನ್ನು ಪಟ್ಟಿ ಮಾಡಿ, ಇಡಿ ದಾಳಿ ನಡೆಸಲಾಗುತ್ತಿದೆ ಎಂದು ಜಮೀರ್ ಆರೋಪಿಸಿದ್ದಾರೆ. "ದೇಶದ ವಿವಿಧ ರಾಜ್ಯಗಳ ಪ್ರಬಲ ಮುಸ್ಲಿಂ ನಾಯಕರ ಪಟ್ಟಿಯನ್ನು ಸಿದ್ಧಪಡಿಸಿಕೊಂಡು ಅವರಿಗೆ ಕಿರುಕುಳ ನೀಡುವ ಪ್ರಯತ್ನ ನಡೆಯುತ್ತಿದೆ. ಇಂತಹ ಷಡ್ಯಂತ್ರದ ಭಾಗವಾಗಿ ನನ್ನ ಮೇಲೂ ಹಲವು ರೀತಿ ದಾಳಿಗಳಾಗುತ್ತಿವೆ. ಆದರೆ ಇದ್ಯಾವುದಕ್ಕೂ ನಾನು ಹೆದರುವುದಿಲ್ಲ" ಎಂದು ಜಮೀರ್ ಟ್ವೀಟ್ ಮಾಡಿದ್ದರು.

Recommended Video

ಕಾಂಗ್ರೆಸ್ ಯೋಗ್ಯತೆ ಬಗ್ಗೆ ಮಾತನಾಡಿದ ಬಿಜೆಪಿ ಕಟೀಲ್! | Oneindia Kannada
 ಕಳೆದ ಹತ್ತು ದಿನಗಳಲ್ಲಿ ಇವರಿಬ್ಬರ ನಡುವಿನ ಎರಡನೇ ವೈಯಕ್ತಿಕ ಭೇಟಿ

ಕಳೆದ ಹತ್ತು ದಿನಗಳಲ್ಲಿ ಇವರಿಬ್ಬರ ನಡುವಿನ ಎರಡನೇ ವೈಯಕ್ತಿಕ ಭೇಟಿ

ಈ ಹೇಳಿಕೆ ನೀಡಿದ ಬೆನ್ನಲ್ಲೇ ಜಮೀರ್ ಅಹ್ಮದ್ ಖಾನ್ ಅವರು ಮತ್ತೆ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಕಳೆದ ಹತ್ತು ದಿನಗಳಲ್ಲಿ ಇವರಿಬ್ಬರ ನಡುವಿನ ಎರಡನೇ ವೈಯಕ್ತಿಕ ಭೇಟಿ ಇದಾಗಿದೆ. ಈ ಭೇಟಿಯ ಬಗ್ಗೆ ಡಿಕೆಶಿಯವರನ್ನು ಕೇಳಿದಾಗ, ಹಾಗೇ ತೇಲಿಸಿ ಉತ್ತರವನ್ನು ನೀಡಿದ್ದಾರೆ. ಪಕ್ಷದ ಬೇರೆ ಬೇರೆ ವಿಚಾರಗಳಿರುತ್ತವೆ, ಆ ಬಗ್ಗೆ ಭೇಟಿ ನಡೆದಿದೆ ಎಂದು ಡಿಕೆಶಿ ಉತ್ತರ ನೀಡಿದ್ದಾರೆ. ಆದರೆ, ಬಿಜೆಪಿ ಈ ಭೇಟಿಗೆ ಬೇರೆ ಅರ್ಥ ಕಲ್ಪಿಸಿದೆ.

ಡಿಕೆಶಿ ಬಣ ಸೇರಿ ಗುರು ಸಿದ್ದರಾಮಯ್ಯಗೆ ನಿರಾಸೆ ಮೂಡಿಸಿದ್ದಾರೆ

"ಮುಂದಿನ ವಲಸೆಗೆ ಚಾಮರಾಜಪೇಟೆ ಕ್ಷೇತ್ರ ಸುರಕ್ಷಿತ ಎಂದು @siddaramaiah ಲೆಕ್ಕಾಚಾರ ಹಾಕಿ ನೆಮ್ಮದಿಯಿಂದ ಪ್ರಕೃತಿ ಚಿಕಿತ್ಸೆಗೆ ತೆರಳಿದ್ದಾರೆ. ಆದರೆ ರಾತ್ರಿ ಬೆಳಗಾಗುವಷ್ಟರಲ್ಲಿ #IMAZameer ಬಣ್ಣ ಬದಲಾಯಿಸಿದ್ದಾರೆ. ಡಿಕೆಶಿ ಬಣ ಸೇರಿ ಗುರು ಸಿದ್ದರಾಮಯ್ಯಗೆ ನಿರಾಸೆ ಮೂಡಿಸಿದ್ದಾರೆ. ಇನ್ನೆತ್ತ ವಲಸೆ ಸಿದ್ದರಾಮಯ್ಯ?" ಎಂದು ಬಿಜೆಪಿಯ ಕರ್ನಾಟಕ ಘಟಕ ಈ ರೀತಿಯ ಟ್ವೀಟ್ ಅನ್ನು ಮಾಡಿ ಕುತೂಹಲ ಸೃಷ್ಟಿಸಿದೆ.

 ಸಿದ್ದರಾಮಯ್ಯನವರು ಬೆಂಗಳೂರು ಹೊರವಲಯದ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ

ಸಿದ್ದರಾಮಯ್ಯನವರು ಬೆಂಗಳೂರು ಹೊರವಲಯದ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಬೆಂಗಳೂರು ಹೊರವಲಯದ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ (ಶನಿವಾರ, ಆಗಸ್ಟ್ 21) ತೆರಳಲಿದ್ದಾರೆ. ಸುಮಾರು ಹತ್ತು ದಿನ ಅವರ ಚಿಕಿತ್ಸೆ ಪಡೆಯಲಿದ್ದಾರೆ. ತಾವು ಬಾದಾಮಿ ಬಿಟ್ಟು ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸಿದ್ದರಾಮಯ್ಯ ಖಡಾಖಂಡಿತವಾಗಿ ಹೇಳಿದ್ದರೂ, ಬಿಜೆಪಿಯ ಟ್ವೀಟ್ ಮತ್ತು ಡಿಕೆಶಿ ಮತ್ತು ಜಮೀರ್ ಅಹ್ಮದ್ ಅವರ ಭೇಟಿ ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.

English summary
Congress Leader Zameer Ahmed Khan Again Met D K Shivakumar, Interesting BJP Tweet. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X