ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್‌ ಕಚೇರಿಗೆ ಹೋಗಲು ಕಾರು ಬಿಟ್ಟು ಸೈಕಲ್ ಏರಿದ ಸಿದ್ದರಾಮಯ್ಯ!

|
Google Oneindia Kannada News

ಬೆಂಗಳೂರು, ಜೂನ್ 29 : ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೈಕಲ್ ಸವಾರಿ ಆರಂಭಿಸಿದ್ದಾರೆ. ಕಾಂಗ್ರೆಸ್ ಕಚೇರಿಗೆ ಅವರು ಸೈಕಲ್‌ನಲ್ಲಿ ಹೊರಟಿದ್ದಾರೆ.

ಸೋಮವಾರ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿರುವ ನಿಲುವು ಖಂಡಿಸಿ ಸೈಕಲ್ ಸವಾರಿ ನಡೆಸಿದರು. ಕುಮಾರಕೃಪ ರಸ್ತೆಯಲ್ಲಿರುವ ನಿವಾಸದಿಂದ ಕಾಂಗ್ರೆಸ್ ಕಚೇರಿಗೆ ಸೈಕಲ್‌ನಲ್ಲಿ ತೆರಳಿದರು.

100 ರು ಗಡಿ ದಾಟಿದ ಇಂಧನ ಬೆಲೆ, ಪ್ರಧಾನಿ ವಿರುದ್ಧ ಕಿಡಿ!100 ರು ಗಡಿ ದಾಟಿದ ಇಂಧನ ಬೆಲೆ, ಪ್ರಧಾನಿ ವಿರುದ್ಧ ಕಿಡಿ!

Congress Leader Siddaramaiah Rides Bicycle To Protest Against Fuel Price Hike

ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್, ಮಾಜಿ ಶಾಸಕ ಚಲುವರಾಯಸ್ವಾಮಿ ಮುಂತಾದವರು ಸಿದ್ದರಾಮಯ್ಯ ಅವರ ಜೊತೆ ಮಾಸ್ಕ್ ಧರಿಸಿ ಕಾಂಗ್ರೆಸ್‌ ಕಚೇರಿಗೆ ಸೈಕಲ್‌ನಲ್ಲಿ ತೆರಳಿದರು.

ಸೈಕಲ್ ಏರಿದ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ವಿರುದ್ಧ ಎಫ್ಐಆರ್ಸೈಕಲ್ ಏರಿದ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ವಿರುದ್ಧ ಎಫ್ಐಆರ್

Congress Leader Siddaramaiah Rides Bicycle To Protest Against Fuel Price Hike

"ಕಚ್ಚಾತೈಲ ಬೆಲೆ ಕುಸಿದಿದ್ದರೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ನಿರಂತರ ಏರಿಸುತ್ತಾ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ದೇಶದ ಜನರನ್ನು ಸುಲಿಗೆ ಮಾಡುತ್ತಿದೆ" ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಕರ್ನಾಟಕ ಕಾಂಗ್ರೆಸ್ ಸೋಮವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸಲಿದೆ. ಈ ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ, ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಪಾಲ್ಗೊಳ್ಳಲಿದ್ದಾರೆ.

ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಸಿದ್ದರಾಮಯ್ಯ ತಮ್ಮ ನಿವಾಸದಿಂದ ಕಾಂಗ್ರೆಸ್ ಕಚೇರಿಗೆ ಸೈಕಲ್‌ನಲ್ಲಿ ತೆರಳಿದರು.

English summary
Opposition leader of Karnataka ride the bicycle for Congress office from his residence. He will join protest with party workers against fuel price hike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X