ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಂ ಬ್ರದರ್‌ಹುಡ್‌ಗೆ ಆರೆಸ್ಸೆಸ್ ಹೋಲಿಸಿದ ಕಾಂಗ್ರೆಸ್ ನಾಯಕಿ ರಮ್ಯಾ

|
Google Oneindia Kannada News

Recommended Video

ಆರೆಸ್ಸೆಸ್ ಹಾಗು ಮುಸ್ಲಿಂ ಬ್ರದರ್‌ಹುಡ್‌ಗೆ ಹೋಲಿಕೆ ಮಾಡಿದ ಕಾಂಗ್ರೆಸ್ ನಾಯಕಿ ರಮ್ಯಾ | Oneindia Kannada

ಬೆಂಗಳೂರು, ಆಗಸ್ಟ್ 30: ಮುಸ್ಲಿಂ ಕೋಮುವಾದವನ್ನು ಪ್ರಚೋದಿಸುವ ಮುಸ್ಲಿಂ ಬ್ರದರ್‌ಹುಡ್‌ ಸಂಘಟನೆಗೂ ಆರ್ಎಸ್‌ಎಸ್‌ಗೂ ಅನೇಕ ಸಾಮ್ಯತೆಗಳಿವೆ ಎಂದು ಕಾಂಗ್ರೆಸ್ ನಾಯಕಿ ರಮ್ಯಾ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇತ್ತೀಚೆಗೆ ಈ ಎರಡೂ ಸಂಘಟನೆಗಳು ಒಂದೇ ರೀತಿಯದ್ದಾಗಿವೆ ಎಂದು ಹೋಲಿಕೆ ಮಾಡಿದ್ದರು.

ಅದನ್ನು ಅನುಮೋದಿಸುವಂತೆ ರಮ್ಯಾ, ಮುಸ್ಲಿಂ ಬ್ರದರ್‌ಹುಡ್ ಮತ್ತು ಆರೆಸ್ಸೆಸ್ ನಡುವೆ ಹೋಲಿಕೆಗಳಿವೆ ಎಂದು ಟ್ವೀಟ್ ಮಾಡಿದ್ದಾರೆ. ಇವೆರಡೂ ಕಾಕತಾಳೀಯವೇ ಅಥವಾ ತಂತ್ರವೇ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.

RSS ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿಗೆ ಆಮಂತ್ರಣ ಬಂದಿಲ್ಲ: ಕಾಂಗ್ರೆಸ್RSS ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿಗೆ ಆಮಂತ್ರಣ ಬಂದಿಲ್ಲ: ಕಾಂಗ್ರೆಸ್

ಮುಸ್ಲಿಂ ಬ್ರದರ್‌ಹುಡ್ ಸ್ಥಾಪನೆಯಾಗಿದ್ದು 1920ರಲ್ಲಿ. ಆರೆಸ್ಸೆಸ್ ಕೂಡ 1920ರಲ್ಲಿ ಸ್ಥಾಪನೆಯಾಗಿದ್ದು. ಎರಡೂ ಸಂಘಟನೆಗಳು ಜಾತ್ಯತೀತ ದೇಶವನ್ನು ಆಕ್ರಮಿಸಲು ಬಯಸುತ್ತಿವೆ.

Congress leader Ramya compared RSS to Muslim Brotherhood

2011ರಲ್ಲಿ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾಗಳಲ್ಲಿ ನಡೆದ ಪ್ರತಿಭಟನೆಗಳು ಮುಸ್ಲಿಂ ಬ್ರದರ್‌ಹುಡ್‌ಗೆ ಉತ್ತೇಜನ ನೀಡಿ ಮೋರ್ಸಿಯನ್ನು ಅಧಿಕಾರಕ್ಕೆ ತಂದೆ, 2011ರಲ್ಲಿ ಅಣ್ಣಾ ಹಜಾರೆ ಚಳವಳಿ ಆರೆಸ್ಸೆಸ್‌ಗೆ ಪ್ರೋತ್ಸಾಹ ನೀಡಿ ಮೋದಿಯನ್ನು ಅಧಿಕಾರಕ್ಕೆ ತಂದಿತು.

'ಮಂಡ್ಯದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಮ್ಯಾ ಕಣಕ್ಕೆ''ಮಂಡ್ಯದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಮ್ಯಾ ಕಣಕ್ಕೆ'

ದೇಶದ ಮೇಲೆ ನಿಯಂತ್ರಣ ಸಾಧಿಸಲು ಬ್ರದರ್‌ಹುಡ್‌ ಬಯಸುತ್ತದೆ, ಅದೇ ರೀತಿ ಆರೆಸ್ಸೆಸ್ ಕೂಡ ನಿಯಂತ್ರಣಕ್ಕೆ ಬಯಸುತ್ತದೆ ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ.

ರಮ್ಯಾ ಅವರ ಟ್ವೀಟ್‌ಗೆ ತೀಕ್ಷ್ಣವಾದ ಪ್ರತಿಕ್ರಿಯೆಗಳು ಬಂದಿದ್ದು, ಈ ಹೋಲಿಕೆಯನ್ನು ಕಟುವಾಗಿ ಟೀಕಿಸಿದ್ದಾರೆ. ಇನ್ನು ಕೆಲವರು ರಮ್ಯಾ ಅವರನ್ನು ಸಮರ್ಥಿಸಿಕೊಂಡಿದ್ದಾರೆ.

ಆರೆಸ್ಸೆಸ್ ಹುಟ್ಟಿದ್ದು 1925ರಲ್ಲಿ ಸ್ಥಾಪನೆಯಾಗಿದ್ದೇ ಹೊರತು 1920ರಲ್ಲಿ ಅಲ್ಲ ಎಂದು ಅನೇಕರು ಹೇಳಿದ್ದಾರೆ. ಅರಬ್ ಪ್ರತಿಭಟನೆಗೂ ಅಣ್ಣಾ ಹಜಾರೆ ಅವರ ಹೋರಾಟಕ್ಕೂ ಹೋಲಿಕೆ ಮಾಡಿದ್ದನ್ನು ಕೆಲವರು ಖಂಡಿಸಿದ್ದಾರೆ.

ರಮ್ಯಾ, ಆಲೂಗೆಡ್ಡೆ, ಮೋದಿ, ಚಿನ್ನ, ಇತ್ಯಾದಿ ಟ್ವೀಟ್ಸ್ರಮ್ಯಾ, ಆಲೂಗೆಡ್ಡೆ, ಮೋದಿ, ಚಿನ್ನ, ಇತ್ಯಾದಿ ಟ್ವೀಟ್ಸ್

ಅಲ್ಲದೆ, ಈಜಿಪ್ಟ್‌ನ ಅಧ್ಯಕ್ಷ ಮೋರ್ಸಿ ಅವರೊಂದಿಗೆ ಮನಮೋಹನ್ ಸಿಂಗ್ ದ್ವಿಪಕ್ಷೀಯ ಮಾತುಕತೆ ನಡೆಸಿದ್ದ ಸಂದರ್ಭವನ್ನು ಅವರಿಗೆ ನೆನಪಿಸಿದ್ದಾರೆ.

English summary
Congress leader Ramya Divya Spandana compared RSS with Muslim Brotherhood in twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X