ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಬಜೆಟ್: ಸಾಲದ ಸರ್ಕಾರದ ಬಗ್ಗೆ ಡಾ. ಜಿ. ಪರಮೇಶ್ವರ್ ಸಿಡಿಮಿಡಿ

|
Google Oneindia Kannada News

ಬೆಂಗಳೂರು, ಮಾರ್ಚ್.08: ಕರ್ನಾಟಕದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಎಂಟನೇ ಬಾರಿ ಮಂಡಿಸಿರುವ ರಾಜ್ಯ ಬಜೆಟ್ ಯಾವುದೇ ಗುರಿ ಮತ್ತು ಕಾರಣ ಇಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಟೀಕಿಸಿದ್ದಾರೆ.

ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, 2021-22ನೇ ಸಾಲಿನ ರಾಜ್ಯ ಬಜೆಟ್, ಕರ್ನಾಟಕ ಇತಿಹಾಸದಲ್ಲೇ ಕೆಟ್ಟ ಬಜೆಟ್ ಎಂದಿದ್ದಾರೆ. ಮುಂದಿನ ದಿನದಲ್ಲಿ ಕರ್ನಾಟಕದ ಆಯವ್ಯಯ ಕೆಟ್ಟ ಪರಿಸ್ಥಿತಿಗೆ ಬರಲಿದೆ. ಆರ್ಥಿಕ ಪರಿಸ್ಥಿತಿ ಅಶಿಸ್ತು ಮಾಡಲು ಹೊರಟಿದ್ದಾರೆ ಎಂದು ಪರಮೇಶ್ವರ್ ಆರೋಪಿಸಿದ್ದಾರೆ.

ಕರ್ನಾಟಕ ಬಜೆಟ್ 2021: ಕೃಷಿ ಕ್ಷೇತ್ರಕ್ಕೆ ಏನು? ಎಷ್ಟು ಹಂಚಿಕೆ ಮಾಡಲಾಗಿದೆ?ಕರ್ನಾಟಕ ಬಜೆಟ್ 2021: ಕೃಷಿ ಕ್ಷೇತ್ರಕ್ಕೆ ಏನು? ಎಷ್ಟು ಹಂಚಿಕೆ ಮಾಡಲಾಗಿದೆ?

ರಾಜ್ಯ ಸರ್ಕಾರದ ಪ್ರಕಾರ ಶೇ.25ಕ್ಕಿಂತ ಮೇಲೆ ಹೋಗದಂತೆ ಸೂಚಿಸಲಾಗಿತ್ತು. ಆದರೆ ಅದನ್ನೂ ಮೀರಿ ಶೇ.26ರಷ್ಟು ಸಾಲ ಪಡೆದುಕೊಂಡಿದ್ದಾರೆ. 71 ಸಾವಿರ ಕೋಟಿ ರೂ ಸಾಲ ಮಾಡಿರೋದಾಗಿ ಘೋಷಣೆ ಮಾಡಿದ್ದಾರೆ ಎಂದು ಮಾಜಿ ಡಿಸಿಎಂ ಡಾ ಜಿ. ಪರಮೇಶ್ವರ್ ಕಿಡಿ ಕಾರಿದ್ದಾರೆ.

ಕರ್ನಾಟಕ ಬಜೆಟ್ ನಲ್ಲಿ ರೈತರಿಗೆ ಅನುಕೂಲಕರ ಯೋಜನೆಯಿಲ್ಲ

ಕರ್ನಾಟಕ ಬಜೆಟ್ ನಲ್ಲಿ ರೈತರಿಗೆ ಅನುಕೂಲಕರ ಯೋಜನೆಯಿಲ್ಲ

ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಹಸಿರು ಶಾಲು ಹಾಕಿಕೊಂಡು ಬಜೆಟ್ ಮಂಡಿಸುತ್ತಾರೆ. ಆದರೆ ಅದೇ ಬಜೆಟ್ ನಲ್ಲಿ ರೈತರಿಗೆ ಅನುಕೂಲಕರವಾದ ಯಾವುದೇ ಯೋಜನೆ ಕಾಣಿಸುತ್ತಿಲ್ಲ. ಕೃಷಿ, ನಿರಾವರಿಗೆ ಯಾವುದೇ ಯೋಜನೆ ಕಾಣ್ತಿಲ್ಲ. ಎರಡು ವಿಭಾಗಕ್ಕೆ 500 ಕೋಟಿ ರೂ. ಕೊಡುವುದಾಗಿ ಘೋಷಿಸಿದ್ದಾರೆ ಎಂದು ಮಾಜಿ ಡಿಸಿಎಂ ಡಾ ಜಿ. ಪರಮೇಶ್ವರ್ ದೂಷಿಸಿದ್ದಾರೆ.

500 ಕೋಟಿ ರೂ. ಅನುದಾನ ನೀಡುವುದಕ್ಕೆ ಕಾರಣವೇನು?

500 ಕೋಟಿ ರೂ. ಅನುದಾನ ನೀಡುವುದಕ್ಕೆ ಕಾರಣವೇನು?

2021-22ನೇ ಕರ್ನಾಟಕ ಬಜೆಟ್ ನಲ್ಲಿ ಡಾ. ಬಿ ಆರ್ ಅಂಬೇಡ್ಕರ್ಸ, ಜಗಜೀವನ್ ಸೇರಿದಂತೆ ಕೆಲವು ಕಾರ್ಪೋರೇಶನ್ ಗಳಿಗೆ ಭಾರಿ ಅನುದಾನ ನೀಡಲಾಗಿದೆ. ಈ ಕಾರ್ಪೋರೇಷನ್ ಗಳಿಗೆ 500 ಕೋಟಿ ರೂಪಾಯಿ ಘೋಷಣೆ ಮಾಡಿರುವುದು ಯಾವ ಪುರುಷಾರ್ಥಕ್ಕೆ ಎಂದು ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಪ್ರಶ್ನಿಸಿದ್ದಾರೆ. ಕಳೆದ‌ ಬಾರಿ ಕ್ರಿಶ್ಚಿಯನ್ ಸಮುದಾಯಕ್ಕೆ 200 ಕೋಟಿ ರೂ. ಬಿಡುಗಡೆ ಮಾಡೋದಾಗಿ ಘೋಷಿಸಿದ್ದರು. ಆದರೆ ಒಂದೇ ಒಂದು ರೂಪಾಯಿ ಬಿಡುಗಡೆಯಾಗಿಲ್ಲವೇಕೆ ಎಂದು ಪ್ರಶ್ನೆ ಮಾಡಿದ್ದಾರೆ.

ಎರಡೂವರೆ ಲಕ್ಷ ಕೋಟಿ ರೂ. ಬಜೆಟ್ ಮಂಡನೆ

ಎರಡೂವರೆ ಲಕ್ಷ ಕೋಟಿ ರೂ. ಬಜೆಟ್ ಮಂಡನೆ

ಕರ್ನಾಟಕದ 2021-22ನೇ ಸಾಲಿನ ಬಜೆಟ್ ಒಟ್ಟು ಗಾತ್ರ 2,46,207 ಕೋಟಿ ರೂಪಾಯಿ ಆಗಿದೆ. ಸರ್ಕಾರದ ನಿರೀಕ್ಷಿತ ಆದಾಯ 2.43 ಲಕ್ಷ ಕೋಟಿ ರೂಪಾಯಿ ಆಗಿದೆ. ಒಟ್ಟು ವೆಚ್ಚ 2.46 ಲಕ್ಷ ರೂಪಾಯಿ ತಗಲುತ್ತದೆ. ಬಜೆಟ್ ನ ಒಟ್ಟು ಕೊರತೆ 15,134 ಕೋಟಿ ರೂಪಾಯಿ ಆಗುತ್ತದೆ. ವಿತ್ತೀಯ ಕೊರತೆ 59240 ಕೋಟಿ ರೂಪಾಯಿ ಆಗುವ ಸಾಧ್ಯತೆಯಿದ್ದು, ರಾಜ್ಯದ ಒಟ್ಟು ಸಾಲ 4,57 ,899 ಆಗುವ ಸಾಧ್ಯತೆಗಳಿದೆ. ಇದರಿಂದಾಗಿ ರಾಜ್ಯದ ಸರಾಸರಿ ತಲಾದಾಯ 26.90ಕ್ಕೆ ಇಳಿಕೆಯಾಗುವ ಸಾಧ್ಯತೆಯಿದೆ.

ಸರ್ಕಾರದ ಆದಾಯದ ಮೂಲದ ಲೆಕ್ಕಾಚಾರ

ಸರ್ಕಾರದ ಆದಾಯದ ಮೂಲದ ಲೆಕ್ಕಾಚಾರ

ಕರ್ನಾಟಕ ಸರ್ಕಾರದ ಆದಾಯದ ಮೂಲವನ್ನು 100 ರೂಪಾಯಿ ಲೆಕ್ಕದಲ್ಲಿ ಲೆಕ್ಕ ಹಾಕಲಾಗಿದೆ. ಅಂದರೆ ಸರ್ಕಾರಕ್ಕೆ ಬರುವ ಒಟ್ಟು ಆದಾಯ 100 ರೂಪಾಯಿ ಆಗಿದ್ದರೆ ಅದರಲ್ಲಿ ರಾಜ್ಯ ತೆರಿಗೆ ಮೂಲಕ 50 ರೂಪಾಯಿ, ಸಾಲದ ಮೂಲಕ 29 ರೂಪಾಯಿ, ಕೇಂದ್ರ ತೆರಿಗೆ ಮೂಲಕ 10 ರೂಪಾಯಿ, ಕೇಂದ್ರ ಸರ್ಕಾರದ ಸಹಾಯ ಅನುದಾನದ ಅಡಿ 6 ರೂಪಾಯಿ, ರಾಜ್ಯದ ತೆರಿಗೇತರ ರಾಜಸ್ವ 3 ರೂಪಾಯಿ ಮತ್ತು ಸಾರ್ವಜನಿಕ ಲೆಕ್ಕ ನಿವ್ವಳ 2 ರೂಪಾಯಿ ಆಗಲಿದೆ.

Recommended Video

Karnataka Budget 2021 : ಯಡಿಯೂರಪ್ಪ ಅವರ 2021 ಬಜೆಟ್ ! | Oneindia Kannada

English summary
Congress Leader Dr. G Parameshwar Reaction to Karnataka Budget 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X