• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮಿತ್ ಶಾಗೆ ಯಾವ ಜ್ವರವೂ ಇಲ್ಲ: ಬಿ.ಕೆ. ಹರಿಪ್ರಸಾದ್ ಮತ್ತೆ ವಿವಾದ

|
Google Oneindia Kannada News

ಬೆಂಗಳೂರು, ಜನವರಿ 18: ಕಾಂಗ್ರೆಸ್ ಶಾಸಕರನ್ನು ಅಪಹರಿಸಿದ್ದಕ್ಕೆ ಅಮಿತ್ ಶಾಗೆ ಹಂದಿಜ್ವರ ಬಂದಿದೆ ಎಂದು ವಿವಾದಾತ್ಮಕ ಹೇಳಿಕೆ ಮೂಲಕ ತೀವ್ರ ಟೀಕೆಗೆ ಗುರಿಯಾಗಿದ್ದ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್, ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬಿ.ಕೆ.ಹರಿಪ್ರಸಾದ್‌ರನ್ನು ನಿಮ್ಹಾನ್ಸ್‌ಗೆ ಸೇರಿಸಲು ರಾಹುಲ್‌ಗೆ ಬಿಜೆಪಿ ಮನವಿ! ಬಿ.ಕೆ.ಹರಿಪ್ರಸಾದ್‌ರನ್ನು ನಿಮ್ಹಾನ್ಸ್‌ಗೆ ಸೇರಿಸಲು ರಾಹುಲ್‌ಗೆ ಬಿಜೆಪಿ ಮನವಿ!

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಯಾವ ಹಂದಿ ಜ್ವರವೂ ಇಲ್ಲ. ಇದಕ್ಕೆ ದಾಖಲೆಗಳಿವೆ ಎಂದು ಹರಿಪ್ರಸಾದ್ ಹೇಳಿದ್ದಾರೆ.

ಅಮಿತ್ ಶಾ ಆರೋಗ್ಯದಲ್ಲಿ ಚೇತರಿಕೆ: ಆಸ್ಪತ್ರೆಯಿಂದ ಶೀಘ್ರ ಬಿಡುಗಡೆಅಮಿತ್ ಶಾ ಆರೋಗ್ಯದಲ್ಲಿ ಚೇತರಿಕೆ: ಆಸ್ಪತ್ರೆಯಿಂದ ಶೀಘ್ರ ಬಿಡುಗಡೆ

'ಅಮಿತ್ ಶಾ ಅವರಿಗೆ ಯಾವುದೇ ಫ್ಲೂ ಬಂದಿಲ್ಲ ಎಂದು ನಮ್ಮ ಬಳಿ ವರದಿಯಿದೆ. ನಮಗೂ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್‌) ಪರಿಚಿತ ಜನರಿದ್ದಾರೆ. ಅಮಿತ್ ಶಾ ಫ್ಲೂನಿಂದ ಅಲ್ಲಿಗೆ ದಾಖಲಾಗಿಲ್ಲ ಎಂದು ಅವರು ಹೇಳುತ್ತಾರೆ. ಉಳಿದ ಸತ್ಯಾಂಶಗಳನ್ನು ಪಡೆದುಕೊಂಡು ನಿಮ್ಮ ಮುಂದೆ ಬರುತ್ತೇನೆ' ಎಂದು ಅವರು ಹೇಳಿದ್ದಾರೆ.

ಅಮಿತ್ ಶಾ ಅವರ ಅನಾರೋಗ್ಯದ ಬಗ್ಗೆ ಗುರುವಾರವಷ್ಟೇ ವ್ಯಂಗ್ಯವಾಡಿದ್ದ ಬಿ.ಕೆ. ಹರಿಪ್ರಸಾದ್ ಅವರನ್ನು ನಿಮ್ಹಾನ್ಸ್‌ಗೆ ಸೇರಿಸುವಂತೆ ಬಿಜೆಪಿ ಕಾರ್ಯಕರ್ತರು ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದರು.

'ಕಾಂಗ್ರೆಸ್ ಶಾಸಕರನ್ನು ಕಿಡ್ನಾಪ್‌ ಮಾಡಿ ಬಾಂಬೆಯಲ್ಲಿಟ್ಟಿದ್ದಾರೆ. ಆರ್‌ಎಸ್‌ಎಸ್‌ ಮತ್ತು ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರು ಅವರಿಗೆ ಸರ್ಪಗಾವಲಾಗಿದ್ದಾರೆ. ಕೆಲವು ಶಾಸಕರು ಈಗಾಗಲೇ ವಾಪಸ್ ಬಂದಿರುವುದರಿಂದ ಅಮಿತ್ ಶಾ ಅವರಿಗೆ ಗಾಬರಿಯಾಗಿ ಜ್ವರ ಬಂದಿದೆ. ಜ್ವರ ಎಂದರೆ ಕಮ್ಮಿ ಜ್ವರ ಅಲ್ಲ, ಅದು ಹಂದಿ ಜ್ವರ ಕರ್ನಾಟಕದಲ್ಲಿ ಸರ್ಕಾರವನ್ನು ಕಡೆವಲು ಪ್ರಯತ್ನ ಮಾಡಿದರೆ ಕೇವಲ ಹಂದಿ ಜ್ವರ ಅಲ್ಲ ವಾಂತಿ, ಭೇದಿ ರೋಗಗಳು ಬರುತ್ತವೆ' ಎಂದು ಬಿ.ಕೆ.ಹರಿಪ್ರಸಾದ್ ಹೇಳಿದ್ದರು.

ಅಮಿತ್ ಶಾ ಕುರಿತು ವಿವಾದಾತ್ಮಕ ಹೇಳಿಕೆ: 'ದಿ ಕ್ವಿಂಟ್' ವಿರುದ್ಧ ಮುಗಿಬಿದ್ದ ಟ್ವಿಟ್ಟಿಗರುಅಮಿತ್ ಶಾ ಕುರಿತು ವಿವಾದಾತ್ಮಕ ಹೇಳಿಕೆ: 'ದಿ ಕ್ವಿಂಟ್' ವಿರುದ್ಧ ಮುಗಿಬಿದ್ದ ಟ್ವಿಟ್ಟಿಗರು

'ಹರಿಪ್ರಸಾದ್ ಅವರು ಅಮಿತ್ ಶಾ ಅವರ ಆರೋಗ್ಯವನ್ನು ವ್ಯಂಗ್ಯವಾಡಿದ್ದಾರೆ. ಇದು ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಇಂತಹ ನಾಗರಿಕ ಸಮಾಜದಲ್ಲಿ ಬದುಕಲು ಅರ್ಹರಲ್ಲ. ರಾಹುಲ್ ಗಾಂಧಿ ಅವರಿಗೆ ಮನವಿ ಮಾಡುತ್ತಿದ್ದೇವೆ. ಹರಿಪ್ರಸಾದ್ ಅವರನ್ನು ನಿಮ್ಹಾನ್ಸ್‌ಗೆ ಸೇರಿಸಿ' ಎಂದು ಬಿಜೆಪಿ ಟ್ವೀಟ್ ಮಾಡಿತ್ತು.

English summary
Congress leader BK Hariprasad again dragged into a controversy by saying, he has a report that BJP President Amit Shah doesn't have any flu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X