ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ, ಸ್ಪೀಕರ್ ಯಾರು?

By Gururaj
|
Google Oneindia Kannada News

ಬೆಂಗಳೂರು, ಮೇ 22 : ಕಾಂಗ್ರೆಸ್-ಜೆಡಿಎಸ್ ಸರ್ಕಾರ ಅಸ್ತಿತ್ವಕ್ಕೆ ಬರಲು ವೇದಿಕೆ ಸಿದ್ಧವಾಗಿದೆ. ಎಚ್.ಡಿ.ಕುಮಾರಸ್ವಾಮಿ ಅವರು ಬುಧವಾರ ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಕಾಂಗ್ರೆಸ್-ಜೆಡಿಎಸ್‌ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡುತ್ತಿವೆ. ಆದರೆ, ಸ್ಪೀಕರ್ ಸ್ಥಾನವನ್ನು ಯಾರು ಪಡೆಯಲಿದ್ದಾರೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಜೆಡಿಎಸ್ ಪಕ್ಷ ಸ್ಪೀಕರ್‌ ಪಟ್ಟಕ್ಕೆ ಪಟ್ಟು ಹಿಡಿದಿದ್ದಾರೆ.

ಸಮ್ಮಿಶ್ರ ಸರ್ಕಾರ ಆರು ತಿಂಗಳೂ ಬಾಳುವುದಿಲ್ಲ: ಈಶ್ವರಪ್ಪಸಮ್ಮಿಶ್ರ ಸರ್ಕಾರ ಆರು ತಿಂಗಳೂ ಬಾಳುವುದಿಲ್ಲ: ಈಶ್ವರಪ್ಪ

Congress-JDS alliance : Who will get assembly speaker post

ಒಂದು ವೇಳೆ ಮೈತ್ರಿಯಲ್ಲಿ ಅಪಸ್ವರ ಉಂಟಾದರೆ ಸಹಾಯಕ್ಕೆ ಬೇಕಾಗುತ್ತದೆ ಎಂದು ಜೆಡಿಎಸ್ ಸ್ಪೀಕರ್ ಸ್ಥಾನ ನಮಗೆ ಬೇಕು ಎಂದು ಪಟ್ಟು ಹಿಡಿದಿದೆ. ಕಾಂಗ್ರೆಸ್ ಪಕ್ಷವೂ ಸ್ಪೀಕರ್ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದು, ಯಾರನ್ನು ಸ್ಪೀಕರ್ ಮಾಡಲಾಗುತ್ತದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಶಾಸಕರ ಬಲವಿದ್ದಲ್ಲಿ ಪವಿತ್ರ-ಅಪವಿತ್ರ ಪ್ರಶ್ನೆಯೇ ಇಲ್ಲ: ಎಚ್‌ಡಿಕೆಶಾಸಕರ ಬಲವಿದ್ದಲ್ಲಿ ಪವಿತ್ರ-ಅಪವಿತ್ರ ಪ್ರಶ್ನೆಯೇ ಇಲ್ಲ: ಎಚ್‌ಡಿಕೆ

ಎಚ್.ಡಿ.ಕುಮಾರಸ್ವಾಮಿ ಅವರು ಬುಧವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಮಾಣ ವಚನ ಸಮಾರಂಭ ನಡೆದ ಎರಡು ದಿನದಲ್ಲಿ ನೂತನ ಸ್ಪೀಕರ್ ಆಯ್ಕೆ ನಡೆಯಬೇಕಿದೆ. ಜೆಡಿಎಸ್ ಸ್ಪೀಕರ್ ಹುದ್ದೆಗೆ ನಮ್ಮಲ್ಲಿ ಹಿರಿಯ ಶಾಸಕರು ಯಾರಿದ್ದಾರೆ? ಎಂದು ಹುಡುಕಾಟ ನಡೆಸಿದೆ.

ಕಾಂಗ್ರೆಸ್ ಸದನದಲ್ಲಿ 78 ಸ್ಥಾನಗಳನ್ನು ಹೊಂದಿದೆ. ಕಾಂಗ್ರೆಸ್‌ಗೆ ಸ್ಪೀಕರ್ ಸ್ಥಾನ ಸಿಗಬಹುದು ಎಂಬ ಮಾತು ಕೇಳಿಬಂದಿತ್ತು. ಹಿರಿಯ ಸದಸ್ಯರಾದ ಆರ್.ವಿ.ದೇಶಪಾಂಡೆ, ರಮೇಶ್ ಕುಮಾರ್ ಅವರ ಹೆಸರು ಕೇಳಿಬಂದಿತ್ತು.

ಮಹತ್ವದ ಸಭೆ : ಸಚಿವ ಸ್ಥಾನ ಹಂಚಿಕೆ ಕುರಿತು ಚರ್ಚೆ ನಡೆಸಲು ಮಂಗಳವಾರ ಸಂಜೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಮಹತ್ವದ ಸಭೆ ನಡೆಯಲಿದೆ. 'ಸ್ಪೀಕರ್ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟು ಕೊಡಲು ಜೆಡಿಎಸ್ ಒಪ್ಪಿದೆ. ರಮೇಶ್ ಕುಮಾರ್ ಅವರು ಸ್ಪೀಕರ್ ಆಗಲಿದ್ದಾರೆ' ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ.

English summary
All set for JD(S)-Congress alliance government in Karnataka. H.D.Kumaraswamy will take oath as Chief Minister on May 23, 2018. Who will get assembly speaker post?.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X