• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜ್ಯಸಭೆಗೆ ಮಲ್ಲಿಕಾರ್ಜುನ್ ಖರ್ಗೆ; ಕಾಂಗ್ರೆಸ್ ಹೈಕಮಾಂಡ್ ಲೆಕ್ಕಾಚಾರ ಹೀಗಿದೆ!

|

ಬೆಂಗಳೂರು, ಜೂ. 07: ಇನ್ನೇನು ಮಲ್ಲಿಕಾರ್ಜುನ್ ಖರ್ಗೆ ಅವರು ಮುಖ್ಯಮಂತ್ರಿಯಾದರು ಎಂಬಂತಹ ರಾಜಕೀಯ ಸ್ಥಿತಿ ರಾಜ್ಯದಲ್ಲಿ ಎರಡು ಬಾರಿ ನಿರ್ಮಾಣವಾಗಿತ್ತು. ಆದರೆ ಮುಖ್ಯಮಂತ್ರಿ ಪದವಿಯ ಹತ್ತಿರಕ್ಕೆ ಬಂದು, ತಮ್ಮದಲ್ಲದ ಕಾರಣಕ್ಕೆ ಅಧಿಕಾರದಿಂದ ಖರ್ಗೆ ಅವರು ವಂಚಿತರಾದವರು. ಆ ಎರಡೂ ಸಲವೂ ಕಾಂಗ್ರೆಸ್‌ ಹೈಕಮಾಂಡ್ ಮೇಲೆ ಮಲ್ಲಿಕಾರ್ಜುನ್ ಖರ್ಗೆ ಅವರು ಒಂದಿನಿತು ಬೇಜಾರು ವ್ಯಕ್ತಪಡಿಸಲಿಲ್ಲ, ಬೇರೆಯವರು ಪಕ್ಷದಲ್ಲಿ ಅಸಮಾಧಾನ ವ್ಯಕ್ತಪಡಿಸದಂತೆ ನೋಡಿಕೊಂಡರು. ಕಾಂಗ್ರೆಸ್‌ ಪಕ್ಷದ ಮೇಲೆ ಖರ್ಗೆ ಅವರಿಗಿರುವ ನಿಷ್ಠೆ ಅಂಥದ್ದು.

ಅದು ನಿಜಾನೊ ಅಥವಾ ಯಾರಾದರೂ ಸುಮ್ಮನೆ ಅವರ ಪಕ್ಷನಿಷ್ಠೆಯನ್ನು ಹೊಗಳಲು ಅಥವಾ ತೆಗಳಲು ಹರಿಬಿಟ್ಟಿದ್ದ ಸುದ್ದಿಯೊ ಗೊತ್ತಿಲ್ಲ. ಇಂದಿರಾ ಗಾಂಧಿ ಅವರು ಮೊಮ್ಮಗಳಿಗೆ ಪ್ರಿಯಾಂಕಾ ಎಂದು ನಾಮಕರಣ ಮಾಡಿದಾಗ ತಮ್ಮ ಪುತ್ರನಿಗೆ ಪ್ರಿಯಾಂಕ್ ಎಂದು ನಾಮಕರಣ ಮಾಡಿದ್ದು ಇದೇ ಮಲ್ಲಿಕಾರ್ಜುನ್ ಖರ್ಗೆ. ಅಷ್ಟರ ಮಟ್ಟಿಗೆ ಹೈಕಮಾಂಡ್ ಬೆಂಬಲಿಸಿದವರು ಮಲ್ಲಿಕಾರ್ಜುನ್ ಖರ್ಗೆ ಎಂಬ ಮಾತಿದೆ. ಹೀಗಾಗಿ ಪಕ್ಷದಿಂದ ಖರ್ಗೆ ಅವರಿಗೆ ಆಗಿರುವ ಲಾಭಕ್ಕಿಂತ ಕಾಂಗ್ರೆಸ್ ಪಕ್ಷಕ್ಕೆ ಮಲ್ಲಿಕಾರ್ಜುನ್ ಖರ್ಗೆ ಅವರಿಂದ ಲಾಭವಾಗಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಅಂತಹ ವ್ಯಕ್ತಿತ್ವದ ಖರ್ಗೆ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತಾಗಿ ಅಕ್ಷರಶಃ ಆತಂಕಗೊಂಡಿದ್ದು ಕಾಂಗ್ರೆಸ್ ಹೈಕಮಾಂಡ್. ಅದೊಂದೆ ಕಾರಣಕ್ಕೆ ಖರ್ಗೆ ಅವರನ್ನು ರಾಜ್ಯಸಭೆಗೆ ಕಳಿಸಲು ಕಾಂಗ್ರೆಸ್ ನಿರ್ಧಾರ ಮಾಡಲಿಲ್ಲ. ಕಾಂಗ್ರೆಸ್ ಹೈಕಮಾಂಡ್ ತೀರ್ಮಾನದ ಹಿಂದೆ ಬಹುದೊಡ್ಡ ಲೆಕ್ಕಾಚಾರವಿದೆ.

ರಾಜ್ಯಸಭೆಗೆ ಖರ್ಗೆ: ಸೋನಿಯಾ ಪ್ರಬುದ್ದ ನಡೆಯ ಹಿಂದಿನ ಕಾರಣ 'ಪ್ರಧಾನಿ ಮೋದಿ'

ಡಿಕೆಶಿ, ಸಿದ್ದರಾಮಯ್ಯರಿಗೆ ಗೊತ್ತಿರಲಿಲ್ಲ

ಡಿಕೆಶಿ, ಸಿದ್ದರಾಮಯ್ಯರಿಗೆ ಗೊತ್ತಿರಲಿಲ್ಲ

ಹಲವು ಬಾರಿ ಮುಖ್ಯಮಂತ್ರಿಯಾಗುವ ಅವಕಾಶದಿಂದ ವಂಚಿತರಾದರೂ ಹೈಕಮಾಂಡ್ ನಿರ್ಧಾರವನ್ನು ಒಮ್ಮೆಯೂ ಪ್ರಶ್ನಿಸದ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ಎಂದು ಹೈಕಮಾಂಡ್ ದಿಢೀರ್ ಘೊಷಣೆ ಮಾಡಿಲ್ಲ. ಖರ್ಗೆ ಹೆಸರು ಪ್ರಕಟ ಮಾಡುವಾಗ ಹೈಕಮಾಂಡ್ ನಮ್ಮ ಸಲಹೆ ಕೇಳಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಖರ್ಗೆ ಹೆಸರು ಘೋಷಣೆ ಕುರಿತು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ಕೊಟ್ಟಿಲ್ಲ. ಹೀಗಾಗಿ ಇತ್ತೀಚಿನ ವರ್ಷಗಳಲ್ಲಿ ರಾಜ್ಯ ಕಾಂಗ್ರೆಸ್ ನಾಯಕರನ್ನು ಸಂಪರ್ಕಿಸದೆ ಹೈಕಮಾಂಡ್ ತೆಗೆದುಕೊಂಡಿರುವ ಏಕೈಕ ನಿರ್ಧಾರವಿದು.

ಅಷ್ಟಕ್ಕೂ ಖರ್ಗೆ ಅವರ ಹೆಸರನ್ನು ಹೈಕಮಾಂಡ್ ಘೋಷಣೆ ಮಾಡಿರುವುದು ಪೂರ್ವ ನಿರ್ಧಾರಿತ ತೀರ್ಮಾನ. ಸೋಲಿಲ್ಲದ ಸರದಾರ ಖರ್ಗೆ ಅವರನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲಿಸಿದ್ದು ಬಿಜೆಪಿಯ ರಾಜಕೀಯ ತಂತ್ರ. ಜೊತೆಗೆ ಖರ್ಗೆ ಅವರು ಕ್ಷೇತ್ರವನ್ನು ಕಡೆಗಣಿಸಿದ್ದು ಕೂಡ ಕಾರಣ ಎಂದು ಹೇಳಲಾಗುತ್ತಿದೆ. ಈ ಎಲ್ಲದರ ಮಧ್ಯೆ ಕಾಂಗ್ರೆಸ್ ಹೈಕಮಾಂಡ್ ತನ್ನ ಥಿಂಕ್‌ಟ್ಯಾಂಕ್‌ನಲ್ಲಿ ಮೊದಲ ಪ್ರಾಶಸ್ತ್ಯವನ್ನು ಖರ್ಗೆ ಅವರಿಗೆ ಕೊಟ್ಟಿದೆ.

ಸಿಎಂ ಸ್ಥಾನದಿಂದ ವಂಚಿತ

ಸಿಎಂ ಸ್ಥಾನದಿಂದ ವಂಚಿತ

ಮುಖ್ಯಮಂತ್ರಿ ಮಲ್ಲಿಕಾರ್ಜುನ್ ಖರ್ಗೆ ಅವರು 2005 ಹಾಗೂ 2013 ಹೀಗೆ ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿ ಆಗುವುದರಿಂದ ವಂಚಿತರಾಗಿದ್ದರು. ಮೊದಲ ಬಾರಿ ಜೆಡಿಎಸ್ ವಿರೋಧ ವ್ಯಕ್ತಪಡಿಸಿದ್ದರಿಂದ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗುವುದರಿಂದ ವಂಚಿತರಾಗಿದ್ದರು. ಬದಲಿಗೆ ಸ್ನೇಹಿತ ಧರಮ್ ಸಿಂಗ್ ಸಿಎಂ ಆಗಲು ಅವಕಾಶ ಮಾಡಿಕೊಟ್ಟಿದ್ದರು.

ನಂತರ 2013ರಲ್ಲಿ ಕಾಂಗ್ರೆಸ್ ಪಕ್ಷದಿಂದ ಮೊದಲ ಚುನಾವಣೆ ಗೆದ್ದಿದ್ದರೂ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಎಂದು ಕಾಂಗ್ರೆಸ್ ಹೈಕಮಾಂಡ್ ಘೋಷಣೆ ಮಾಡಿತ್ತು. ಆದಾಗ ಪರಿಶಿಷ್ಠ ಜಾತಿಯವರಿಗೆ ಮುಖ್ಯಮಂತ್ರಿ ಸ್ಥಾನ ಕೊಡಬೇಕು ಎಂಬ ಕೂಗು ಕೂಡ ಜೋರಾಗಿತ್ತು. ದಲಿತ ಮುಖ್ಯಮಂತ್ರಿ ಕೂಗನ್ನು ಹೈಕಮಾಂಡ್‌ಗೆ ಮುಜುಗುರವಾಗದಂತೆ ತಡೆದಿದ್ದು ಕೂಡ ಖರ್ಗೆ ಅವರು.

ರಾಜ್ಯಸಭೆ ಚುನಾವಣೆ; ಕರ್ನಾಟಕದಿಂದ ನಾಲ್ವರು ಅವಿರೋಧ ಆಯ್ಕೆ?

ಖರ್ಗೆ ಎದುರಿಸಲಾಗದ ಮೋದಿ

ಖರ್ಗೆ ಎದುರಿಸಲಾಗದ ಮೋದಿ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ 2014ರಲ್ಲಿ ಅಸ್ತಿತ್ವಕ್ಕೆ ಬಂದಮೇಲೆ ಹೈಕಮಾಂಡ್‌ಗೆ ಬೆನ್ನೆಲುಬಾಗಿ ನಿಂತವರು ಖರ್ಗೆ. 2ಜಿ, ಕೋಲ್‌ಗೇಟ್ ಸೇರಿದಂತೆ ಬಹುಕೋಟಿ ಹಗರಣಗಳಿಂದ ಜರ್ಜರಿತವಾಗಿದ್ದ ಕಾಂಗ್ರೆಸ್ ಪಕ್ಷಕ್ಕೆ ಕ್ಲೀನ್ ಇಮೇಜ್‌ ನಾಯಕತ್ವ ಅಗತ್ಯವಾಗಿತ್ತು. ಜೊತೆಗೆ ಹಿಂದುಳಿದ ಜನಾಂಗದ ನಾಯಕ ಖರ್ಗೆ ಅವರ ಖಡಕ್ ಉರ್ದು ಮಿಶ್ರಿತ ಹಿಂದಿ ಹಾಗೂ ಇಂಗ್ಲೀಷ್ ವಾಕ್ ಚಾತುರ್ಯ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತೀರಾ ಅನಿವಾರ್ಯವಾಗಿತ್ತು. ಹೀಗಾಗಿಯೆ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕನಾಗಿ ಖರ್ಗೆ ಲೋಕಸಭೆಯಲ್ಲಿ ಮೋದಿ-ಶಾ ಜೋಡಿಯನ್ನು ಬಲವಾಗಿಯೆ ಎದುರಿಸಿದ್ದರು. ಕಾಂಗ್ರೆಸ್ ಮುಕ್ತ ಭಾರತ ಎಂದು ಬೀಗುತ್ತಿದ್ದ ಬಿಜೆಪಿ ಎದುರು ಬಂಡೆಯಂತೆ ನಿಂತಿದ್ದು ಮಲ್ಲಿಕಾರ್ಜುನ್ ಖರ್ಗೆ.

ಲೋಕಸಭೆಯಲ್ಲಿ ನೇರವಾಗಿ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ನೇರವಾಗಿ ಎದುರಿಸಲಾರದೆ, ಅವರನ್ನು ಸೋಲಿಸಲು ಬಿಜೆಪಿ ಹೈಕಮಾಂಡ್ ಕಳೆದ ಲೋಕಸಭಾ ಚುನಾವಣೆಗೂ ಮೊದಲೇ ತಂತ್ರ ಮಾಡಿತ್ತು. ಪ್ರಬಲ ನಾಯಕ ಲೋಕಸಭೆಯನ್ನು ಪ್ರವೇಶಿಸದಂತೆ ತಡೆಯುವಲ್ಲಿಯೂ ಸಫಲವಾಗಿತ್ತು. ಸೋಲಿಗೆ ಖರ್ಗೆ ಅವರ ಕೆಲ ತಪ್ಪುಗಳು ಕಾರಣವಾಗಿದ್ದರೂ, ಲೋಕಸಭೆಯಲ್ಲಿ ಹಿನ್ನಡೆಯಾಗಿದ್ದು ಕಾಂಗ್ರೆಸ್‌ ಪಕ್ಷಕ್ಕೆ.

ರಾಜ್ಯಸಭೆಯಲ್ಲಿ ಬಲಾಬಲ

ರಾಜ್ಯಸಭೆಯಲ್ಲಿ ಬಲಾಬಲ

245 ಸದಸ್ಯರ ಬಲದ ರಾಜ್ಯಸಭೆಗೆ ಕರ್ನಾಟಕದ 4 ಸ್ಥಾನಗಳು ಸೇರಿದಂತೆ 24 ಸ್ಥಾನಗಳಿಗೆ ಜೂನ್ 19ರಂದು ಚುನಾವಣೆ ನಡೆಯಲಿದೆ. ಬಿಜೆಪಿಯ 75 ಸದಸ್ಯರು ಸೇರಿದಂತೆ ಎನ್‌ಡಿಎ ಪ್ರತಿನಿಧಿಸುವ 87 ರಾಜ್ಯಸಭಾ ಸದಸ್ಯರಿದ್ದಾರೆ. ಮುಂದಿನ ವರ್ಷ ರಾಜ್ಯಸಭೆಯಲ್ಲಿಯೂ ಬಹುಮತ ಹೊಂದುವ ವಿಶ್ವಾಸವನ್ನು ಬಿಜೆಪಿ ನಾಯಕರು ವ್ಯಕ್ತಪಡಿಸಿದ್ದಾರೆ.

ಸಧ್ಯ ರಾಜ್ಯಸಭೆಯಲ್ಲಿ ಎನ್‌ಡಿಎಗೆ ಬಹುಮತವಿಲ್ಲ. ಹೀಗಾಗಿ ಲೋಕಸಭೆಯಲ್ಲಿ ಪಾಸ್‌ ಆಗಿ ಬರುವ ವಿಧೇಯಕಗಳ ಮೇಲೆ ಚರ್ಚೆ ನಡೆಸಲು ಮಲ್ಲಿಕಾರ್ಜುನ್ ಖರ್ಗೆ ಅವರ ಅಗತ್ಯವನ್ನು ಕಾಂಗ್ರೆಸ್ ಹೈಕಮಾಂಡ್ ಗಮನಿಸಿದೆ. ಹಾಗಾಗಿಯೆ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪ್ರತಿನಿಧಿಸಲು ಹಾಗೂ ಪಕ್ಷದ ನಿರ್ಧಾರಗಳನ್ನು ಇಟ್ಟುಕೊಂಡು ಉಳಿದ ಯುಪಿಎ ಸದಸ್ಯ ಪಕ್ಷಗಳ ಸಂಸದ ಅಭಿಪ್ರಾಯ ಹೊಂದಿಸುವಂತೆ ಮಾಡುವುದು ಕಾಂಗ್ರೆಸ್ ಹೈಕಮಾಂಡ್ ಲೆಕ್ಕಾಚಾರ.

ಹಗುರವಾಗಿ ಪರಿಗಣಿಸುವಂತಿಲ್ಲ

ಹಗುರವಾಗಿ ಪರಿಗಣಿಸುವಂತಿಲ್ಲ

ಬಿಜೆಪಿ ನಾಯಕರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಗುಲಾಂ ನಬಿ ಆಜಾದ್ ಸೇರಿದಂತೆ ಹಲವು ನಾಯಕರ ಮೇಲೆ ಆರೋಪಗಳನ್ನು ಮಾಡಬಹುದು. ಆದರೆ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಹಗುರವಾಗಿ ಪರಿಗಣಿಸುವುದು ಸಾಧ್ಯವಿಲ್ಲ. ಸಮುದಾಯದ ನಾಯಕ ಎನ್ನುವುದು ಒಂದು ಕಾರಣವಾದರೆ ಖರ್ಗೆ ಅವರಿಗೆ ಇರುವ ಅನುಭವ ಮತ್ತೊಂದು ಕಾರಣ.

ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆಗಳಲ್ಲಿ ಕೆಲಸ ಮಾಡಿದ ಅನುಭವ ಮಲ್ಲಿಕಾರ್ಜುನ್ ಖರ್ಗೆ ಅವರಿಗಿದೆ. ಹೀಗಾಗಿ ಈಗ ರಾಜ್ಯಸಭೆ ವಿರೋಧ ಪಕ್ಷ ನಾಯಕರನ್ನಾಗಿ ಖರ್ಗೆ ನೇಮಕ ಮಾಡಲು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಮಾಡಿದೆ. ಹೀಗಾಗಿಯೆ ಹಲವು ಲೆಕ್ಕಾಚಾರಗಳನ್ನು ಇಟ್ಟುಕೊಂಡು ಖರ್ಗೆ ಅವರನ್ನು ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ.

English summary
Congress high command decides to appoint Mallikarjun Kharge as leader of opposition in Rajya Sabha,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more