• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮಲಿಂಗಾ ರೆಡ್ಡಿ, ಪ್ರತಿ ಸಲ‌ ಎಲೆಕ್ಷೆನ್‌ನಲ್ಲಿ ಗೆಲ್ಲುತ್ತಿರುವುದೇ ರೌಡಿಗಳ ಕೃಪೆಯಿಂದ: ಬಿಜೆಪಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 3 : ರೌಡಿಗಳ ಕಿಂಗ್ ಕೊತ್ವಾಲನ ಚಹಾ ಲೋಟ ಎತ್ತುತ್ತಿದ್ದ ಪುಡಿ ರೌಡಿ ಡಿ.ಕೆ. ಶಿವಕುಮಾರ್ ನ ರಾಜ್ಯಾಧ್ಯಕ್ಷನ್ನಾಗಿ ಮಾಡಿರೋ ಕಾಂಗ್ರೆಸ್ ಗೆ ಬಿಜೆಪಿಯ ಬಗ್ಗೆ ಮಾತಾಡೋ ನೈತಿಕತೆ ಇದಿಯಾ ಎಂದು ಪ್ರಶ್ನಿಸಿಕೊಳ್ಳಲಿ ಎಂದು ಬಿಜೆಪಿ ಕಿಡಿಕಾರಿದೆ.

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಅಧ್ಯಕ್ಷರಿಂದ ಆರಂಭವಾಗುವ ಇವರ ಕ್ರೂರ ನಾಯಕರ ಪಟ್ಟಿ ಮೊನ್ನೆ ಮೊನ್ನೆ ಬಾರಲ್ಲಿ ಅಮಾಯಕರಿಗೆ ಹೊಡೆದ ಮರಿರೌಡಿ ನಲಪಾಡ್ ವರೆಗೂ ಇದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ರೌಡಿಗಳ ಬಗ್ಗೆ ಮಾತಾಡುವ ಕಾಂಗ್ರೆಸ್ ಕುಖ್ಯಾತ ಕೊಲೆ‌ ಅರೋಪಿ ವಿನಯ್ ಕುಲಕರ್ಣಿ ಬಗ್ಗೆ ಮಾತಾಡಲ್ಲವೇಕೆ? ಕಾಂಗ್ರೆಸ್‌ಗೇ ಜೀವ ಭಯವೇ? ನಲಪಾಡ್ ಹೊಡೆದುಬಿಟ್ಟಾರೆಂಬ ಭಯವೇ? ಎಂದು ಬಿಜೆಪಿ ಪ್ರಶ್ನಿಸಿದೆ.
ಇನ್ನೂ ಕೆ‌ಜೆ ಜಾರ್ಜೆ ನನ್ನ ಸಾವಿಗೆ ಕಾರಣ ಎಂದು ಜೀವಬಿಟ್ಟ ಡಿವೈಎಸ್‌ಪಿ ಗಣಪತಿ ನೆನಪಿದೆಯೇ? ಅಷ್ಟೇ ಅಲ್ಲ, ಕಾಂಗ್ರೆಸ್‌ನಲ್ಲಿ ದರೋಡೆ‌ ಕೋರರೂ ಇದ್ದಾರೆ ಎಂದು ಟೀಕಿಸಿದೆ. 2011 ರಲ್ಲಿ ಜಮೀರ್ ಅಹ್ಮದ್ ವಿರುದ್ಧ ದರೋಡೆ ಪ್ರಕರಣ ದಾಖಲಾಗಿ ವಾರೆಂಟ್ ನೀಡಲಾಗಿತ್ತು. ಎಲ್ಲಿ ತಮ್ಮ ಮನೆ ದರೋಡೆ ಮಾಡಿಬಿಟ್ರೆ ಎಂದು ಗ್ಯಾಂಗ್‌ ಲೀಡರ್ ಡಿ.ಕೆ. ಶಿವಕುಮಾರ್ ಸುಮ್ಮನಿದ್ದಾರೆಯೇ? ಪಿಎಸ್‌ಐ ಟಿ. ಆರ್‌. ಶ್ರೀನಿವಾಸ್‌ರನ್ನು ಸಾರ್ವಜನಿಕವಾಗಿ ಅವಮಾನಿಸುವುದರ ಜೊತೆಗೆ ಜೀವ ಬೆದರಿಕೆಯೂ ಹಾಕ್ತಾರೆ ನಿಮ್ಮ ಡಿ. ಕೆ. ಶಿವಕುಮಾರ್ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಎಲ್ಲ ಬಿಡ್ರೀ, ಬೆಂಗಳೂರಿನ ಸಕಲ ರೌಡಿಗಳನ್ನೂ ಪೋಷಿಸಿ, ಪ್ರೋತ್ಸಾಹಿಸುತ್ತಿರುವ ಮಹಾನ್ ನಾಯಕ ರಾಮಲಿಂಗಾ ರೆಡ್ಡಿ, ಪ್ರತಿ ಸಲ‌ ಎಲೆಕ್ಷೆನ್‌ನಲ್ಲಿ ಗೆಲ್ಲುತ್ತಿರುವುದೇ ರೌಡಿಗಳ ಕೃಪೆಯಿಂದ ಎಂಬುದು ಇಡೀ ಲೋಕಕ್ಕೇ ಗೊತ್ತು. ಬೇಕಾದ್ರೆ ರೌಡಿ ನಾಗನ ಜೊತೆ ರೆಡ್ಡಿ ಸಾಹೇಬರ ಸಂಬಂಧವೇನು ಎಂಬುದನ್ನು ಮಾಧ್ಯಮಗಳೇ ಬಿಚ್ಚಿಟ್ಟಿದ್ದಾವೆ ನೋಡಿ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಇನ್ನು ಸೌಮ್ಯಾ ರೆಡ್ಡಿಯವರು ಹೇಗೆ ಗೆದ್ದರು ಎಂಬುದನ್ನು ನಾವು ಹೇಳಲು ಹೋಗುವುದಿಲ್ಲ ಬಿಡಿ. ಹೀಗೆ ಕೊತ್ವಾಲನ ರೈಟ್‌ಹ್ಯಾಂಡಾಗಿ ಡಿ.ಕೆ.ಶಿವಕುಮಾರ್ ಇದ್ದರೆ ಲೆಫ್ಟ್‌ಹ್ಯಾಂಡಲ್ಲಿ ನಿಂತವರೇ ನಮ್ಮ ನಿಮ್ಮೆಲ್ಲರ ಸೋಲಿನ ಸರದಾರ ಬಿ.ಕೆ.ಹರಿ ಪ್ರಸಾದ್ ಎಂದಿದೆ.

ರೌಡಿಗಳಿಂದ ಇವರು ಈಗಲೂ ಸೆಲ್ಯೂಟ್ ಹೊಡೆಯುವಷ್ಟು ಹವಾ ಇಟ್ಟಿದ್ದಾರೆ ಎಂಬುದು ಹಳೆ‌ ವಿಷಯ. ರೌಡಿಗಳು, ಕಳ್ಳರು, ಕೊಲೆಗಾರರು, ದರೋಡೆಕೋರರು, ಭ್ರಷ್ಟಾಚಾರಿಗಳೇ ನಾಯಕರಾಗಿರೋ ಕಾಂಗ್ರೆಸ್ ರೌಡಿ‌ ರಾಜ್ಯದ ಬಗ್ಗೆ ಭಾಷಣ ಬಿಗಿಯುತ್ತಿರುವುದು, ಅಲ್ಲೆಲ್ಲೋ ಇರುವ ಅಲ್‌ಖೈದಾದವನು ಶಾಂತಿಯ ಸಂದೇಶ ಸಾರಿದಷ್ಟೇ ಅದಕ್ಕೆ ಪ್ರಾಮುಖ್ಯತೆ. ಭಯದಿಂದ ಅಣ್ಣಾ ಎಂದು ಕರೆಸಿಕೊಳ್ಳುವ ಡಿ.ಕೆ.ಶಿವಕುಮಾರ್ ಪಟಾಲಮ್ಮಿನಿಂದ ಬಿಜೆಪಿಗೆ ಪಾಠ ಬೇಕಾಗಿಲ್ಲ ಎಂದು ಬಿಜೆಪಿ ಕಿಡಿಕಾರಿದರು.

English summary
bjp said, Congress has no moral right to speak about BJP
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X