ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

12 ಕ್ಷೇತ್ರಗಳಿಗೆ ಕರ್ನಾಟಕ ಕಾಂಗ್ರೆಸ್ ಅಭ್ಯರ್ಥಿಗಳು ಅಂತಿಮ, ಪಟ್ಟಿ

|
Google Oneindia Kannada News

Recommended Video

Lok Sabha Elections 2019 : ಕರ್ನಾಟಕದ 12 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಅಂತಿಮಗೊಳಿಸಿದ ಕಾಂಗ್ರೆಸ್

ಬೆಂಗಳೂರು, ಮಾರ್ಚ್ 22 : ಲೋಕಸಭಾ ಚುನಾವಣೆಗೆ ಕರ್ನಾಟಕದ 12 ಸ್ಥಾನಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದೆ. ಸೋನಿಯಾ ಗಾಂಧಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಪಟ್ಟಿ ಅಂತಿಮವಾಗಿದ್ದು, ಅಧಿಕೃತವಾಗಿ ಘೋಷಣೆಯಾಗಬೇಕಿದೆ.

ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆ ಮುಗಿಸಿಕೊಂಡು ಸಿದ್ದರಾಮಯ್ಯ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.

ಲೋಕಸಭಾ ಚುನಾವಣೆ : ಕರ್ನಾಟಕ ಬಿಜೆಪಿ ಪಟ್ಟಿಯಲ್ಲಿ ಅಚ್ಚರಿಯೇ ಇಲ್ಲಲೋಕಸಭಾ ಚುನಾವಣೆ : ಕರ್ನಾಟಕ ಬಿಜೆಪಿ ಪಟ್ಟಿಯಲ್ಲಿ ಅಚ್ಚರಿಯೇ ಇಲ್ಲ

ಬೆಂಗಳೂರು ಕೇಂದ್ರ, ಧಾರವಾಡ ಮತ್ತು ಬೀದರ್ ಕ್ಷೇತ್ರವನ್ನು ಮುಸ್ಲಿಂ ಸಮುದಾಯಕ್ಕೆ ಬಿಟ್ಟುಕೊಡಬೇಕು ಎಂದು ಸಭೆಯಲ್ಲಿ ಚರ್ಚೆ ನಡೆಯಿತು. ಅಂತಿಮವಾಗಿ ಎರಡು ಕ್ಷೇತ್ರವನ್ನು ಸಮುದಾಯಕ್ಕೆ ಬಿಟ್ಟುಕೊಡಲು ತೀರ್ಮಾನಿಸಲಾಯಿತು.

ಮೈಸೂರು ಉಳಿಸಿಕೊಂಡು, ತುಮಕೂರು ಬಿಟ್ಟುಕೊಟ್ಟ ಕಾಂಗ್ರೆಸ್‌!ಮೈಸೂರು ಉಳಿಸಿಕೊಂಡು, ತುಮಕೂರು ಬಿಟ್ಟುಕೊಟ್ಟ ಕಾಂಗ್ರೆಸ್‌!

ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಚುನಾವಣೆಯನ್ನು ಎದುರಿಸುತ್ತಿದೆ. 28 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸ್ಪರ್ಧೆ ಮಾಡುತ್ತಿದೆ. 8 ಕ್ಷೇತ್ರಗಳಲ್ಲಿ ಜೆಡಿಎಸ್ ಕಣಕ್ಕಿಳಿಯಲಿದೆ. ಜೆಡಿಎಸ್ ಇನ್ನೂ ಹಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಬೇಕಿದೆ....

ಲೋಕಸಭಾ ಚುನಾವಣೆ 2019 : ಜೆಡಿಎಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಲೋಕಸಭಾ ಚುನಾವಣೆ 2019 : ಜೆಡಿಎಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ

* ಬಾಗಲಕೋಟೆ - ವೀಣಾ ಕಾಶಪ್ಪನವರ್
* ಬೀದರ್ - ಈಶ್ವರ ಖಂಡ್ರೆ
* ಹಾವೇರಿ - ಡಿ.ಆರ್.ಪಾಟೀಲ್
* ಬೆಂಗಳೂರು ಗ್ರಾಮಾಂತರ - ಡಿ.ಕೆ.ಸುರೇಶ್

ಯಾರು ಅಭ್ಯರ್ಥಿಗಳು

ಯಾರು ಅಭ್ಯರ್ಥಿಗಳು

* ಕಲಬುರಗಿ -ಮಲ್ಲಿಕಾರ್ಜುನ ಖರ್ಗೆ
* ಕೋಲಾರ - ಕೆ.ಎಚ್.ಮುನಿಯಪ್ಪ
* ಚಿಕ್ಕಬಳ್ಳಾಪುರ - ವೀರಪ್ಪ ಮೊಯ್ಲಿ
* ಚಾಮರಾಜನಗರ - ಆರ್.ಧ್ರುವನಾರಾಯಣ್

ಅಭ್ಯರ್ಥಿಗಳ ವಿವರ

ಅಭ್ಯರ್ಥಿಗಳ ವಿವರ

* ಚಿತ್ರದುರ್ಗ - ಬಿ.ಎನ್.ಚಂದ್ರಪ್ಪ
* ರಾಯಚೂರು - ಬಿ.ವಿ.ನಾಯಕ್
* ಬಳ್ಳಾರಿ - ವಿ.ಎಸ್.ಉಗ್ರಪ್ಪ
* ಚಿಕ್ಕೋಡಿ - ಪ್ರಕಾಶ್ ಹುಕ್ಕೇರಿ

ಕಾಂಗ್ರೆಸ್‌ ಸಂಭಾವ್ಯ ಪಟ್ಟಿ

ಕಾಂಗ್ರೆಸ್‌ ಸಂಭಾವ್ಯ ಪಟ್ಟಿ

* ದಕ್ಷಿಣ ಕನ್ನಡ - ವಿನಯ್ ಕುಮಾರ್ ಸೊರಕೆ
* ಧಾರವಾಡ - ಸದಾನಂದ ಡಂಗನವರ್/ಶಾಕಿರ್ ಸನದಿ
* ಬೆಂಗಳೂರು ಸೆಂಟ್ರಲ್ - ರಿಜ್ವಾನ್ ಅರ್ಷದ್
* ಮೈಸೂರು-ಕೊಡಗು - ವಿಜಯ ಶಂಕರ್
* ಕೊಪ್ಪಳ - ರಾಜಶೇಖರ್ ಹಿಟ್ನಾಳ್
* ದಾವಣಗೆರೆ - ಎಸ್.ಎಸ್.ಮಲ್ಲಿಕಾರ್ಜುನ್
* ಬೆಂಗಳೂರು ದಕ್ಷಿಣ - ಪ್ರಿಯಾಕೃಷ್ಣ

English summary
In a election committee meeting Congress finalized the 12 names for Lok sabha elections 2019 in Karnataka. Out of 28 seat Congress contesting in 20 seats. 8 seats hared with JD(S) as pre-poll alliance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X