ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂತನ ಸಚಿವರಿಗೆ ಖಾತೆ ಹಂಚಿಕೆ : ಎಂ.ಬಿ.ಪಾಟೀಲ್‌ಗೆ ಗೃಹ ಖಾತೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 28: ಕಾಂಗ್ರೆಸ್‌ ಪಕ್ಷದ ಎಂಟು ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಆರು ದಿನಗಳ ಬಳಿಕ ಕೊನೆಗೂ ಖಾತೆ ಹಂಚಿಕೆ ಅಂತಿಮಗೊಂಡಿದೆ.

ಸಚಿವ ಸ್ಥಾನದ ಸಿಗದ ಅತೃಪ್ತ ಶಾಸಕರ ಅಸಮಾಧಾನ, ತಮಗೆ ನಿಗಮ, ಮಂಡಳಿ ನೀಡಿದ್ದಕ್ಕೆ ಮತ್ತು ನೀಡದೆ ಇರುವುದಕ್ಕೆ ಕೆಲವು ಶಾಸಕರ ಕೋಪ, ಪಕ್ಷದೊಳಗಿನ ಬಂಡಾಯದ ನಡೆಗಳು ಮತ್ತು ಇಂಥದ್ದೇ ಖಾತೆ ಬೇಕು ಎಂಬ ಸಚಿವರ ಹಠದ ನಡುವೆಯೇ ಹೈಕಮಾಂಡ್ ಗೊಂದಲಗಳಿಗೆ ಅಂತಿಮ ಷರಾ ಬರೆದಿದೆ.

ಕುಮಾರಸ್ವಾಮಿ ಸರ್ಕಾರದಲ್ಲಿ ಯಾರು ಯಾರು ಸಚಿವರಿದ್ದಾರೆ? ಇಲ್ಲಿದೆ ಪಟ್ಟಿಕುಮಾರಸ್ವಾಮಿ ಸರ್ಕಾರದಲ್ಲಿ ಯಾರು ಯಾರು ಸಚಿವರಿದ್ದಾರೆ? ಇಲ್ಲಿದೆ ಪಟ್ಟಿ

ಡಿಸೆಂಬರ್ 21ರಂದು ರಾಹುಲ್ ಗಾಂಧಿ, ಸಂಪುಟ ಸೇರುವ ಎಂಟು ಮಂದಿಯ ಹೆಸರನ್ನು ಅಂತಿಮಗೊಳಿಸಿದ್ದರು. ಮರುದಿನ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ನಡೆದಿತ್ತು. ಆದರೆ, ಅದರ ಬೆನ್ನಲ್ಲೇ ಮತ್ತೆ ಖಾತೆ ಹಂಚಿಕೆ ಗೊಂದಲ ತಲೆದೋರಿತ್ತು.

ಇದರಿಂದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಇಬ್ಬರೂ ಪುನಃ ರಾಹುಲ್ ಗಾಂಧಿ ಮೊರೆ ಹೋಗಿದ್ದರು. ಈಗ ಖಾತೆ ಹಂಚಿಕೆಯ ಪಟ್ಟಿಗೆ ರಾಹುಲ್ ಗಾಂಧಿ ಅನುಮೋದನೆ ನೀಡಿದ್ದಾರೆ. ಹೊಸ ಸಚಿವರಿಗೆ ಖಾತೆ ಹಂಚಿಕೆಯ ಜೊತೆಗೆ ಹಳೆಯ ಸಚಿವರ ಖಾತೆಯಲ್ಲಿಯೂ ಬದಲಾವಣೆ ಮಾಡಲಾಗಿದೆ.

ಎಂಬಿ ಪಾಟೀಲ್‌ಗೆ ಗೃಹಖಾತೆ

ಎಂಬಿ ಪಾಟೀಲ್‌ಗೆ ಗೃಹಖಾತೆ

ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರ ಬಳಿಯಿದ್ದ ಗೃಹ ಖಾತೆಯ ಮೇಲೆ ಕಣ್ಣಿಟ್ಟಿದ್ದ ಎಂ.ಬಿ. ಪಾಟೀಲ್, ಕೊನೆಗೂ ಅದನ್ನು ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪರಮೇಶ್ವರ್ ಅವರಿಗೆ ಬೆಂಗಳೂರು ನಗರ, ಸಂಸದೀಯ ವ್ಯವಹಾರ, ಐಟಿ ಬಿಟಿ ಖಾತೆಗಳ ಜವಾಬ್ದಾರಿ ನೀಡಲಾಗಿದೆ.

ಜಯಮಾಲಾಗೆ ತಪ್ಪಿದ ಖಾತೆ

ಜಯಮಾಲಾಗೆ ತಪ್ಪಿದ ಖಾತೆ

ಜಯಮಾಲಾ ಅವರು ತಮ್ಮ ಬಳಿಯಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಕಳೆದುಕೊಂಡಿದ್ದಾರೆ. ಆ ಇಲಾಖೆಯನ್ನು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಹೆಚ್ಚುವರಿಯಾಗಿ ವಹಿಸಲಾಗಿದೆ. ಜಯಮಾಲಾ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾಗಿ ಮುಂದುವರಿಯಲಿದ್ದಾರೆ.

ಯಾರಿಗೆ ಯಾವ ಖಾತೆ?

ಯಾರಿಗೆ ಯಾವ ಖಾತೆ?

ಸಚಿವರ ಹೆಸರು ಕ್ಷೇತ್ರ ಖಾತೆ
ಜಿ ಪರಮೇಶ್ವರ ಕೊರಟಗೆರೆ ಬೆಂಗಳೂರು ನಗರ, ಕಾನೂನು ಮತ್ತು ನ್ಯಾಯ ಹಾಗೂ ಮಾನವ ಹಕ್ಕು, ಸಂಸದೀಯ ವ್ಯವಹಾರ, ಐಟಿ ಮತ್ತು ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ
ಆರ್ ವಿ ದೇಶಪಾಂಡೆ ಹಳಿಯಾಳ ಕಂದಾಯ ಇಲಾಖೆ
ಕೆ.ಜೆ ಜಾರ್ಜ್ ಸರ್ವಜ್ಞ ನಗರ ದೊಡ್ಡ ಮತ್ತು ಮಧ್ಯಮ ಕೈಗಾರಿಕೆ ಖಾತೆ
ಡಿ.ಕೆ ಶಿವಕುಮಾರ್ ಕನಕಪುರ ಜಲಸಂಪನ್ಮೂಲ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ
ಕೃಷ್ಣ ಭೈರೇಗೌಡ ಬ್ಯಾಟರಾಯನಪುರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
ಶಿವಶಂಕರ ರೆಡ್ಡಿ ಗೌರಿಬಿದನೂರು ಕೃಷಿ
ಪ್ರಿಯಾಂಕ್ ಖರ್ಗೆ ಚಿತ್ತಾಪೂರ ಸಮಾಜ ಕಲ್ಯಾಣ
ಯು.ಟಿ ಖಾದರ್ ಮಂಗಳೂರು ನಗರಾಭಿವೃದ್ಧಿ(ಬಿಬಿಎಂಪಿ ಹೊರತುಪಡಿಸಿ) ಹಾಗೂ ವಸತಿ
ಜಮೀರ್ ಅಹ್ಮದ್ ಖಾನ್ ಚಾಮರಾಜಪೇಟೆ ಆಹಾರ, ನಾಗರಿಕ ಪೂರೈಕೆ
ಶಿವಾನಂದ ಪಾಟೀಲ್ ಬಸವನ ಬಾಗೇವಾಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ವೆಂಕಟರಮಣಪ್ಪ ಪಾವಗಡ ಕಾರ್ಮಿಕ ಇಲಾಖೆ
ರಾಜಶೇಖರ ಪಾಟೀಲ್ ಹುಮ್ನಾಬಾದ್ ಗಣಿ ಮತ್ತು ಭೂವಿಜ್ಞಾನ
ಪುಟ್ಟರಂಗಶೆಟ್ಟಿ ಚಾಮರಾಜನಗರ ಹಿಂದುಳಿದ ವರ್ಗಗಳ ಕಲ್ಯಾಣ
ಜಯಮಾಲಾ ಎಂಎಲ್ಸಿ ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ
ನೂತನ ಸಚಿವರ ಖಾತೆಗಳು

ನೂತನ ಸಚಿವರ ಖಾತೆಗಳು

ಸಚಿವರ ಹೆಸರು ಕ್ಷೇತ್ರ ಖಾತೆ
ಎಂಬಿ ಪಾಟೀಲ್
ಬಬಲೇಶ್ವರ
ಗೃಹಖಾತೆ
ಆರ್ ಬಿ ತಿಮ್ಮಾಪುರ
ವಿಧಾನಪರಿಷತ್ ಸದಸ್ಯ (ಬಾಗಲಕೋಟೆ)
ಬಂದರು, ಒಳನಾಡು ಸಾರಿಗೆ, ಸಕ್ಕರೆ ಖಾತೆ
ಸತೀಶ್ ಜಾರಕಿಹೊಳಿ
ಯಮಕನಮರಡಿ
ಅರಣ್ಯ ಮತ್ತು ಪರಿಸರ ಇಲಾಖೆ
ಎಂಟಿಬಿ ನಾಗರಾಜ್
ಹೊಸಕೋಟೆ
ವಸತಿ
ಸಿ.ಎಸ್. ಶಿವಳ್ಳಿ
ಕುಂದಗೋಳ
ಪೌರಾಡಳಿತ
ಪರಮೇಶ್ವರ್ ನಾಯ್ಕ್
ಹೂವಿನ ಹಡಗಲಿ
ಮುಜರಾಯಿ, ಕೌಶಲಾಭಿವೃದ್ಧಿ
ರಹೀಂ ಖಾನ್
ಬೀದರ್ ಉತ್ತರ
ಯುವಜನ, ಕ್ರೀಡೆ
ಇ. ತುಕಾರಾಂ
ಸಂಡೂರು
ವೈದ್ಯಕೀಯ ಶಿಕ್ಷಣ, ಕುಟುಂಬ ಕಲ್ಯಾಣ

English summary
MB Patil become the new Home minister of Karnataka. Congress President Rahul Gandhi has approved the portfolio of new minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X