ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿ.ಟಿ.ರವಿ ವಿರುದ್ಧ ಮಹಿಳಾ ಆಯೋಗಕ್ಕೆ ಕಾಂಗ್ರೆಸ್‌ ದೂರು

|
Google Oneindia Kannada News

ಬೆಂಗಳೂರು, ಏಪ್ರಿಲ್ 25 : ಮಾಜಿ ಸಚಿವ, ಬಿಜೆಪಿ ನಾಯಕ ಸಿ.ಟಿ.ರವಿ ಅವರ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸಿ.ಟಿ.ರವಿ ಅವರು ಮಹಿಳೆಯರನ್ನು ಅವಮಾನಿಸಿದ್ದಾರೆ ಎಂದು ದೂರಿನಲ್ಲಿ ಆರೋಪ ಮಾಡಲಾಗಿದೆ.

ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಬಿ.ಪುಷ್ಪ ಅಮರನಾಥ್, ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಸೇರಿದಂತೆ ಹಲವು ಮಹಿಳಾ ನಾಯಕಿಯರು ಸಿ.ಟಿ.ರವಿ ಅವರ ವಿರುದ್ಧ ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.

ಲೋಕಸಭಾ ಚುನಾವಣೆ : ಕರ್ನಾಟಕದಲ್ಲಿ 29 ಮಹಿಳಾ ಅಭ್ಯರ್ಥಿಗಳು ಕಣದಲ್ಲಿಲೋಕಸಭಾ ಚುನಾವಣೆ : ಕರ್ನಾಟಕದಲ್ಲಿ 29 ಮಹಿಳಾ ಅಭ್ಯರ್ಥಿಗಳು ಕಣದಲ್ಲಿ

Congress files complaint against BJP MLA CT Ravi

ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ 14/4/2019ರಂದು ಚಿಕ್ಕಮಗಳೂರು ಕ್ಷೇತ್ರದ ಶಾಸಕ ಸಿ.ಟಿ.ರವಿ ಅವರು ಸ್ತ್ರೀಯರನ್ನು ಅಪಮಾನ ಮಾಡುವ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ರಾಜ್ಯದ ಪ್ರಮುಖ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಜಯಮಾಲ ರಾಹುಲ್ ಗಾಂಧಿಗೆ ಮೊದಲು ಬಜೆ ಕಳುಹಿಸಿಕೊಡಲಿ:ಸಿಟಿ ರವಿಜಯಮಾಲ ರಾಹುಲ್ ಗಾಂಧಿಗೆ ಮೊದಲು ಬಜೆ ಕಳುಹಿಸಿಕೊಡಲಿ:ಸಿಟಿ ರವಿ

ಸಿ.ಟಿ.ರವಿ ಅವರು ಪ್ರಚಾರ ಸಭೆಯಲ್ಲಿ, 'ಮೋದಿ ವಿರೋಧಿಸುವವರು ತಾಯಿ ಗಂಡ್ರು, ಯಾರಾದರೂ ಜಾತಿ, ಧರ್ಮದ ಕಾರಣಕ್ಕೆ ಮೋದಿ ವಿರೋಧಿಸಿದರೆ ಉಂಡ ಮನೆಗೆ ದ್ರೋಹ ಬಗೆದಂತೆ' ಎಂಬ ಹೇಳಿಕೆಯನ್ನು ನೀಡಿದ್ದರು.

ಸಾರ್ವಜನಿಕರ ಎದುರು ತಮ್ಮ ಪಕ್ಷ ಬೆಂಬಲಿಸಿದ ಮತದಾರರು 'ತಾಯಿ ಗಂಡರು' ಎಂದು ಹೇಳಿಕೆ ನೀಡುವ ಮೂಲಕ ಮಹಿಳೆಯರ ಘನತೆಯನ್ನು ಅಪಮಾನಿಸಿ ಟೀಕೆ ಮಾಡಿದ್ದಾರೆ. ಸ್ತ್ರೀ ಸಂಕುಲವನ್ನು ಕ್ಷುಲ್ಲಕವಾಗಿ ನಿಂದಿಸುವ ಮೂಲಕ ತಮ್ಮ ಶಾಸಕ ಸ್ಥಾನದ ಘನತೆಯನ್ನು ಅಮಮಾನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

English summary
Karnataka Mahila Congress filed the complaint against Chikkamagaluru BJP MLA C.T. Ravi. In a complaint alleged that C.T. Ravi insulted the women during the Lok sabha elections 2019 campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X