ಇಂದು(ಏ.10) ಮಾಜಿ ಶಾಸಕ ಸುರೇಶ್ ಗೌಡ ಜೆಡಿಎಸ್ ಗೆ ಸೇರ್ಪಡೆ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 10 : ಮಾಜಿ ಶಾಸಕ ಹಾಗೂ ನಾಗಮಂಗಲ ಕಾಂಗ್ರೆಸ್ ಮುಖಂಡ ಸುರೇಶ್ ಗೌಡ ಅವರು ಸೋಮವಾರ (ಏಪ್ರಿಲ್ 10) ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ.

ಸೋಮವಾರ ಬೆಳಗ್ಗೆ 11ಕ್ಕೆ ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸುರೇಶ್ ಗೌಡ ಅವರನ್ನು ಪಕ್ಷಕ್ಕೆ ಬರ ಮಾಡಿಕೊಳ್ಳಲಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾಮಂಗಲ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯೂ ಆಗಿದ್ದಾರೆ.

Congress ex mla suresh gowda will be join Jds On April 10

ಇನ್ನು ಸುರೇಶ್ ಗೌಡ ಅವರು ಪಕ್ಷ ಸೇರ್ಪಡೆಗೆ ಜೆಡಿಎಸ್ ಮುಖಂಡರಲ್ಲಿ ಅಪಸ್ವರಗಳು ಕೇಳಿಬರುತ್ತಿವೆ. ಸೈಟ್ ಹಂಚಿಕೆಯಲ್ಲಿ ಜನರಿಗೆ ಮೋಸ ಮಾಡಿದ ಆರೋಪಗಳು ಸುರೇಶ್ ಅವರ ಮೇಲಿದೆ ಇದರಿಂದ ಪಕ್ಷಕ್ಕೆ ಸೇರಿಸಿಕೊಳ್ಳುವುದು ಬೇಡವೆಂದು ಕೆಲ ಜೆಡಿಎಸ್ ಮುಖಂಡರು ದೇವೇಗೌಡ ಹಾಗೂ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Congress former mla suresh gowda will be join Jds On April 10.
Please Wait while comments are loading...