ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಬ್ಲಿಕ್ ಟಿವಿ 3 ಸಮೀಕ್ಷೆ, ಏಪ್ರಿಲ್ ನಿಂದ ಮೇಗೆ ಸ್ಥಾನ ಪಲ್ಲಟ

By Sachhidananda Acharya
|
Google Oneindia Kannada News

Recommended Video

Karnataka Elections 2018 : ಈ 3 ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದೆ

ಬೆಂಗಳೂರು, ಮೇ 9: ಕನ್ನಡದ ದ್ವಿತೀಯ ಜನಪ್ರಿಯ ವಾಹಿನಿ ಪಬ್ಲಿಕ್ ಟಿವಿ ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಮೂರು ಸಮೀಕ್ಷೆಗಳನ್ನು ನಡೆಸಿದೆ. ಕ್ವಾರ್ಟರ್ ಫೈನಲ್, ಸೆಮಿ ಫೈನಲ್ ಮತ್ತು ಫೈನಲ್ ಹೆಸರಿನಲ್ಲಿ ಮೂರು ಸಮೀಕ್ಷೆಗಳನ್ನು ನಡೆಸಿದ್ದು, ಪಕ್ಷಗಳ ಸ್ಥಾನಗಳು ಬದಲಾಗುತ್ತಾ ಹೋಗಿದ್ದನ್ನು ಗಮನಿಸಬಹುದಾಗಿದೆ.

ಕ್ವಾರ್ಟರ್ ಫೈನಲ್ ಸಮೀಕ್ಷೆಯನ್ನು ಏಪ್ರಿಲ್ 2ನೇ ವಾರದಲ್ಲಿ ನಡೆಸಲಾಗಿದೆ. ಇದರಲ್ಲಿ ಕಾಂಗ್ರೆಸಿಗೆ 85 - 95 ಸ್ಥಾನಗಳು, ಬಿಜೆಪಿಗೆ 75 - 85 ಮತ್ತು ಜೆಡಿಎಸ್ ಗೆ 40 - 45 ಸ್ಥಾನಗಳನ್ನು ನೀಡಲಾಗಿದೆ. ಇತರರು 0 - 5 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ. ಬಹಳ ಪ್ರಮುಖವಾಗಿ ಇಲ್ಲಿ ಕಾಂಗ್ರೆಸ್ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಸಮೀಕ್ಷೆ ಅಂದಾಜಿಸಿದೆ.

ಪಬ್ಲಿಕ್ ಟಿವಿ ಸಮೀಕ್ಷೆ : ಸಮ್ಮಿಶ್ರ ಸರ್ಕಾರ ರಚನೆ ಅಂತಾರೆ ಜನರು!ಪಬ್ಲಿಕ್ ಟಿವಿ ಸಮೀಕ್ಷೆ : ಸಮ್ಮಿಶ್ರ ಸರ್ಕಾರ ರಚನೆ ಅಂತಾರೆ ಜನರು!

ಇನ್ನು ಏಪ್ರಿಲ್ ಕೊನೆಯ ವಾರದಲ್ಲಿ ನಡೆಸಿದ ಎರಡನೇ ಸಮೀಕ್ಷೆ ಅಂದರೆ ಸೆಮಿಫೈನಲ್ ಸಮೀಕ್ಷೆಯಲ್ಲಿ ಕಾಂಗ್ರೆಸ್ 95 - 100 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಲಾಗಿತ್ತು. ಅಂದರೆ ಏಪ್ರಿಲ್ ಅಂತ್ಯದ ವೇಳೆಗೆ ಜನರು ನಿಧಾನವಾಗಿ ಕಾಂಗ್ರೆಸ್ ನತ್ತ ಹೆಚ್ಚು ವಾಲಿದ್ದರು. ಈ ಸಮೀಕ್ಷೆಯಲ್ಲಿ ಬಿಜೆಪಿಗೆ 80 - 85 ಸ್ಥಾನ, ಜೆಡಿಎಸ್ ಗೆ 40 - 45 ಸ್ಥಾನ ಮತ್ತು ಇತರರಿಗೆ 0 - 05 ಸ್ಥಾನ ಸಿಗಬಹುದು ಎಂದು ಸಮೀಕ್ಷೆ ಹೇಳಿತ್ತು.

Congress emerges as a biggest party in all three surveys by Public TV

ಈ ಎರಡೂ ಸಮೀಕ್ಷೆಗಳು ನಡೆಸುವಾಗಲೂ ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಕಾಲಿಟ್ಟಿರಲಿಲ್ಲ. ಹೀಗಾಗಿ ಮೋದಿ ಕರ್ನಾಟಕಕ್ಕೆ ಬಂದ ನಂತರ ಅಂದರೆ ಮೇ 3ರ ನಂತರ ಮತ್ತೊಂದು ಫೈನಲ್ ಸಮೀಕ್ಷೆ ನಡೆಸಲಾಗಿದೆ. ಈ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 89 - 94 ಸ್ಥಾನಗಳನ್ನು ಗೆಲ್ಲಲಿದೆ. ಕೊನೆಯ ಹಂತದಲ್ಲಿ ಕಾಂಗ್ರೆಸ್ ಸ್ಥಾನಗಳು ಇಳಿಕೆಯಾಗಿರುವುದನ್ನು ಇಲ್ಲಿ ಗಮನಿಸಬಹುದು.

ಪಬ್ಲಿಕ್ ಟಿವಿ ಸಮೀಕ್ಷೆ: ಚುನಾವಣೆಯ ನಂತರ ಕಾಂಗ್ರೆಸ್ಸೇತರ ಸರ್ಕಾರ?ಪಬ್ಲಿಕ್ ಟಿವಿ ಸಮೀಕ್ಷೆ: ಚುನಾವಣೆಯ ನಂತರ ಕಾಂಗ್ರೆಸ್ಸೇತರ ಸರ್ಕಾರ?

ಮೋದಿ ರಾಜ್ಯಕ್ಕೆ ಬಂದ ನಂತರ ಒಂದಷ್ಟು ಮತಗಳನ್ನು ಬಿಜೆಪಿ ಕಡೆಗೆ ಎಳೆದುಕೊಂಡಿದ್ದಾರೆ ಎಂಬುದನ್ನು ಸಮೀಕ್ಷೆ ಹೇಳುತ್ತಿದೆ. ಅದಕ್ಕೆ ಪುಷ್ಠಿ ನೀಡುವಂತೆ ಬಿಜೆಪಿಯ ಸ್ಥಾನಗಳೂ 86 - 91 ಕ್ಕೆ ಏರಿಕೆಯಾಗಬಹುದು ಎಂದು ಸಮೀಕ್ಷೆಯು ಹೇಳಿದೆ. ಇನ್ನು ಜೆಡಿಎಸ್ 38 - 43 ಸ್ಥಾನಗಳನ್ನು ಪಡೆಯಬಹುದು. ಇತರರ 0- 6 ಸ್ಥಾನಗಳನ್ನು ಗೆಲ್ಲಬಹುದು ಎಂದು ಸರ್ವೆ ಅಂದಾಜಿಸಿದೆ.

ಕಳೆದ 1 ತಿಂಗಳ ಅಂತರದಲ್ಲಿ ಸ್ಥಾನಗಳು ಬದಲಾವಣೆಯಾದರೂ, ಒಟ್ಟಾರೆ ಮೂರೂ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಅತೀ ದೊಡ್ಡ ಪಕ್ಷವಾಗಿಯೇ ಹೊರ ಹೊಮ್ಮಿದೆ.

English summary
Karnataka assembly elections 2018: Public TV opinion poll: Congress emerged as a biggest party in all the three surveys conducted by Kannada news channel Public TV.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X