ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಟ್ಟೆ ಪಂಚಾಯ್ತಿ ನಡೆಸಲು ಓಡೋಡಿ ಬಂದ ಅರುಣ್ ಸಿಂಗ್!

|
Google Oneindia Kannada News

ಬೆಂಗಳೂರು, ಜೂನ್ 16; ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮೂರು ದಿನಗಳ ಭೇಟಿಯಾಗಿ ರಾಜ್ಯಕ್ಕೆ ಆಗಮಿಸಿದ್ದಾರೆ. ಪ್ರತಿಪಕ್ಷ ಕಾಂಗ್ರೆಸ್ ಅರುಣ್ ಸಿಂಗ್ ಭೇಟಿಯನ್ನು ಟೀಕಿಸಿದೆ.

ಕರ್ನಾಟಕ ಕಾಂಗ್ರೆಸ್ ಅರುಣ್ ಸಿಂಗ್ ಭೇಟಿ ಬಗ್ಗೆ ಸರಣಿ ಟ್ವೀಟ್‌ಗಳನ್ನು ಮಾಡಿದೆ. 'ಅರುಣ್ ಸಿಂಗ್ ಅವರೇ, ಕಟ್ಟೆ ಪಂಚಾಯ್ತಿ ನಡೆಸಲು ಓಡೋಡಿ ಬರುವ ತಾವು, ಜನರ ಸಮಸ್ಯೆಗಳ ಬಗ್ಗೆ ಚಿಂತನೆ ನಡೆಸಲು ಸಮಯವಿಲ್ಲವೇ?' ಎಂದು ಪ್ರಶ್ನಿಸಿದೆ.

ಅರುಣ್‌ ಸಿಂಗ್‌ಗೆ ದೂರು; ಬಿಎಸ್‌ವೈ ವಿರುದ್ಧದ 5 ಆರೋಪಗಳು! ಅರುಣ್‌ ಸಿಂಗ್‌ಗೆ ದೂರು; ಬಿಎಸ್‌ವೈ ವಿರುದ್ಧದ 5 ಆರೋಪಗಳು!

ಅರುಣ್ ಸಿಂಗ್ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟದ ಸಚಿವರು, ಶಾಸಕರ ಜೊತೆ ಪ್ರತ್ಯೇಕ ಸಭೆಗಳನ್ನು ನಡೆಸಲಿದ್ದಾರೆ. ಜೂನ್ 18ರಂದು ಅರುಣ್ ಸಿಂಗ್ ಅಧ್ಯಕ್ಷತೆಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಸಹ ನಡೆಯಲಿದೆ.

ರಾಜ್ಯಕ್ಕೆ ಅರುಣ್ ಸಿಂಗ್; ಜೂನ್ 18ರಂದು ಬಿಜೆಪಿ ಕೋರ್ ಕಮಿಟಿ ಸಭೆ ರಾಜ್ಯಕ್ಕೆ ಅರುಣ್ ಸಿಂಗ್; ಜೂನ್ 18ರಂದು ಬಿಜೆಪಿ ಕೋರ್ ಕಮಿಟಿ ಸಭೆ

ಯಡಿಯೂರಪ್ಪ ವಿರುದ್ದ, ಕೆಲವು ಸಚಿವರ ವಿರುದ್ಧ ದೂರು ನೀಡಲು ಶಾಸಕರು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದಾರೆ. ಕೋವಿಡ್ ಕಾಲದಲ್ಲಿ ಆಡಳಿತ ಬಗ್ಗೆ ಗಮನಹರಿಸುವ ಬದಲು ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ವಿಡಿಯೋ; ನಾಯಕತ್ವ ಬದಲಾವಣೆ ಕುರಿತು ಬಿಎಸ್‌ವೈ ಮಾತು ವಿಡಿಯೋ; ನಾಯಕತ್ವ ಬದಲಾವಣೆ ಕುರಿತು ಬಿಎಸ್‌ವೈ ಮಾತು

ವಿಷಾದ, ನಾಚಿಕೆ ಯಾವುದೂ ಇಲ್ಲ

'ಈ ಗತಿಗೆಟ್ಟ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ಆಂತರಿಕ ಕಿತ್ತಾಟಗಳೇ ಸುದ್ದಿ ಮಾಡುತ್ತಿವೆ ಹೊರತು ಸಾಧನೆಗಳಲ್ಲ. ಈ ದುರಾಡಳಿತದ ಬಗ್ಗೆ ತಮಗೆ ಕನಿಷ್ಠ ವಿಷಾದ, ನಾಚಿಕೆ ಯಾವುದೂ ಇಲ್ಲವೇ?' ಎಂದು ಕಾಂಗ್ರೆಸ್ ಟೀಕಿಸಿದೆ.

ಕುರ್ಚಿ ಕದನ ನಡೆಸಲು ಸಮಯವಿದೆ

'ರಾಜ್ಯ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿರುವಾಗ ಬಿಜೆಪಿ ಕರ್ನಾಟಕ ಆಂತರಿಕ ಕಲಹ ತಾರಕಕ್ಕೇರಿದೆ. ಬೇಜವಾಬ್ದಾರಿ ಬಿಜೆಪಿ ಸರ್ಕಾರಕ್ಕೆ ಕುರ್ಚಿ ಕದನ ನಡೆಸಲು ಮಾತ್ರ ಭರಪೂರ ಸಮಯವಿದೆ' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ರಾಜ್ಯಕ್ಕೆ ಶಾಪ ತಟ್ಟಿದಂತೆ

'ಅಜ್ಜಿಗೆ ಅರಿವೆ ಚಿಂತೆ, ಮೊಮ್ಮಗಳಿಗೆ ಡಾಬಿನ ಚಿಂತೆ ಎನ್ನುವಂತೆ ರಾಜ್ಯದ ಜನತೆಗೆ ಬದುಕಿನ ಚಿಂತೆ, ಬಿಜೆಪಿಗೆ ಕುರ್ಚಿ ಕದನದ ಚಿಂತೆಯಾಗಿದೆ. ಎಂದಿಗೂ ಜನಪರವಾಗಿರದ ಬಿಜೆಪಿಗೆ ಅಧಿಕಾರ ಸಿಗುವುದು ರಾಜ್ಯಕ್ಕೆ 'ಶಾಪ' ತಟ್ಟಿದಂತೆ' ಎಂದು ಕಾಂಗ್ರೆಸ್ ಟೀಕೆ ಮಾಡಿದೆ.

Recommended Video

ಬಿಜೆಪಿ ಕಾರ್ ತಡೆಗಟ್ಟಿ ಪೆಟ್ರೋಲ್ ಬಂಕ್ ಬಳಿ ಮಹಿಳೆಯರ ಗಲಾಟೆ! | Oneindia Kannada

ಬಿಜೆಪಿ ಆದ್ಯತೆ ಜನತೆಯಲ್ಲ, ಅಧಿಕಾರ

'ಜನರ ವಿಷಯಗಳಿಗೆ ಮೌನ ವಹಿಸುವ ಬಿಜೆಪಿ ರಾಷ್ಟ್ರ ನಾಯಕರು ಕುರ್ಚಿ ಕಲಹ ನಿರ್ವಹಿಸಲು ಮಾತ್ರ ಗಡಿಬಿಡಿಯಲ್ಲಿ ಓಡೋಡಿ ಬರುತ್ತಾರೆ. ಬಿಜೆಪಿ ಆದ್ಯತೆ ಜನತೆಯಲ್ಲ, ಅಧಿಕಾರ' ಎಂದು ಕಾಂಗ್ರೆಸ್ ಟೀಕಿಸಿದೆ.

English summary
Karnataka Congress criticizes BJP state in charge Arun Singh visit to Karnataka. Arun Singh in Bengaluru for three days visit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X