ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಕಗ್ಗಂಟು : ಉಪಹಾರ ಸಭೆಯಲ್ಲಿ ಉಪಾಯ ಹುಡುಕಿದ ಸಿದ್ದು!

|
Google Oneindia Kannada News

ಬೆಂಗಳೂರು, ಜೂನ್ 25 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊನೆಗೂ ಪಕ್ಷದಲ್ಲಿನ ಭಿನ್ನಮತ ಶಮನಕ್ಕೆ ಮುಂದಾಗಿದ್ದಾರೆ. ಭಿನ್ನಮತೀಯ ಶಾಸಕರಿಗೆ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ಕೊಡುವ ಭರವಸೆ ನೀಡಿದ್ದಾರೆ. ಭಿನ್ನಮತೀಯರ ಜೊತೆ ಮಾತುಕತೆ ನಡೆಸಲು ಹೈಕಮಾಂಡ್ ನಾಯಕರು ಭಾನುವಾರ ಬೆಂಗಳೂರಿಗೆ ಬರಲಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಹಿರಿಯ ಸಚಿವರಿಗೆ ಏರ್ಪಡಿಸಿದ್ದ ಉಪಾಹಾರ ಕೂಟದಲ್ಲಿ ಸಿದ್ದರಾಮಯ್ಯ ಅವರು ಭಿನ್ನಮತ ಶಮನಗೊಳಿಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ. ಅತೃಪ್ತ ಶಾಸಕರ ಜೊತೆ ಸಿದ್ದರಾಮಯ್ಯ ಅವರೇ ಮಾತುಕತೆ ನಡೆಸಲಿದ್ದು, ಮನವೊಲಿಕೆ ಮಾಡಲಿದ್ದಾರೆ. ['ಸಂಭವಾಮಿ ಯುಗೇ ಯುಗೇ' ಅನ್ನುತ್ತಿದ್ದಾರೆ ಭಿನ್ನಮತೀಯರು!]

siddaramaiah

ಒಂದೂವರೆ ವರ್ಷದ ಹಿಂದೆ ನಿಗಮ ಮತ್ತು ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕಮಾಡಲಾಗಿದೆ. ನೇಮಕಾತಿ ಸಮಯದಲ್ಲೇ 18 ತಿಂಗಳ ಬಳಿಕ ಬೇರೆಯವರಿಗೆ ಸ್ಥಾನ ಬಿಟ್ಟುಕೊಡಬೇಕುಎನ್ನುವ ಷರತ್ತು ಹಾಕಲಾಗಿತ್ತು. ಆದ್ದರಿಂದ, ಸದ್ಯದಲ್ಲೇ ಖಾಲಿ ಆಗಲಿರುವ ಕೆಲವು ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ ಪಕ್ಷದ ಹಿರಿಯ ಶಾಸಕರನ್ನು ನೇಮಕ ಮಾಡುವ ಲೆಕ್ಕಾಚಾರ ಸಿದ್ದರಾಮಯ್ಯ ಅವರದ್ದು. [ಕೆಪಿಸಿಸಿ ಅಧ್ಯಕ್ಷ ಹುದ್ದೆ ಆಯ್ಕೆಯಲ್ಲಿ ಯುಟರ್ನ್: ಸಿದ್ದು ಮೇಲುಗೈ?]

ಎಲ್ಲಾ ಮಾಧ್ಯಮಗಳ ಸೃಷ್ಟಿ : ಶುಕ್ರವಾರ ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ ಅವರು, 'ಮಂತ್ರಿ ಮಂಡಲ ಪುನಾರಚನೆ ಬಳಿಕ ಅಸಮಾಧಾನ ಸಹಜ. ಅಸಮಾಧಾನಗೊಂಡ ಶಾಸಕರು ನಾಯಕತ್ವ ಬದಲಾವಣೆಗಾಗಿ ಪ್ರಯತ್ನ ನಡೆಸುತ್ತಿದ್ದಾರೆ ಎಂಬುದು ಮಾಧ್ಯಮಗಳ ಸೃಷ್ಟಿ' ಎಂದು ಹೇಳಿದರು. [ರಾಜೀನಾಮೆಗೆ ಮುಂದಾದ ಶಾಸಕ ಮಾಲೀಕಯ್ಯ ಗುತ್ತೇದಾರ್]

ಶಿಂಧೆ ಆಗಮನ : ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರು ಫ್ರಾನ್ಸ್ ಪ್ರವಾದಲ್ಲಿದ್ದು, ಭಾರತಕ್ಕೆ ಮರಳಿಲ್ಲ. ಆದ್ದರಿಂದ, ಸುಶೀಲ್ ಕುಮಾರ್ ಶಿಂಧೆ ಅವರು ಹೈಕಮಾಂಡ್ ಪರವಾಗಿ ರಾಜ್ಯಕ್ಕೆ ಆಗಮಿಸಲಿದ್ದು, ಅತೃಪ್ತ ಶಾಸಕರ ಜೊತೆ ಭಾನುವಾರ ಮಾತುಕತೆ ನಡೆಸಲಿದ್ದಾರೆ. [ನೂತನ ಜಿಲ್ಲಾ ಉಸ್ತುವಾರಿ ಸಚಿವ ಪಟ್ಟಿ]

ಶುಕ್ರವಾರ ಸಿದ್ದರಾಮಯ್ಯ ಅವರು ಶಾಸಕ ಎಸ್‌.ಟಿ.ಸೋಮಶೇಖರ್ (ಯಶವಂತಪುರ), ಮಾಲೀಕಯ್ಯ ಗುತ್ತೇದಾರ್ (ಅಫ್ಜಲ್‌ಪುರ) ಅವರ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಯಾದಗಿರಿ ಶಾಸಕ ಡಾ. ಎಬಿ ಮಾಲಕರೆಡ್ಡಿ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡುವ ಸಾಧ್ಯತೆ ಇದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಪುನಾರಚನೆ ಮಾಡಿದ ಬಳಿಕ ಪಕ್ಷದಲ್ಲಿ ಭಿನ್ನಮತ ಆರಂಭವಾಗಿದೆ. ಸಚಿವ ಸ್ಥಾನ ವಂಚಿತರಾದ ಶಾಸಕರು ಒಂದು ಕಡೆ ಅಸಮಾಧಾನಗೊಂಡಿದ್ದರೆ, ಸಚಿವ ಸ್ಥಾನದಿಂದ ಕೈಬಿಟ್ಟಿದ್ದಕ್ಕೆ ಕೆಲವರು ಅಸಮಾಧಾನಗೊಂಡಿದ್ದಾರೆ.

English summary
Karnataka chief minister Siddaramaiah on June 24, 2016 met senior ministers to chalk out a strategy to solve crisis in the party after cabinet reshuffle. Party sources said Siddaramaiah will discuss with all rebel MLA's with phone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X