ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜೀನಾಮೆ ನೀಡಿರುವ ಶಾಸಕರಿಗೆ ಕೊನೆ ಎಚ್ಚರಿಕೆ ಕೊಟ್ಟ ಸಿದ್ದರಾಮಯ್ಯ

|
Google Oneindia Kannada News

Recommended Video

ರಾಜೀನಾಮೆ ನೀಡಿರುವ ಎಲ್ಲಾ ಶಾಸಕರಿಗೆ ಕೊನೇ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ | Oneindia Kannada

ಬೆಂಗಳೂರು, ಜುಲೈ 09 : ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಲ್ಲರಿಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೊನೆಯ ಅವಕಾಶವನ್ನು ನೀಡಿದರು. ಮುಂಬೈನಿಂದ ಬಂದು ರಾಜೀನಾಮೆ ವಾಪಸ್ ಪಡೆಯಿರಿ ಇಲ್ಲವೆ ಅನರ್ಹತೆಗೆ ದೂರು ನೀಡುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.

ವಿಧಾನಸೌಧದಲ್ಲಿ ಮಂಗಳವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸಭೆಯಲ್ಲಿ ಪಾಲ್ಗೊಂಡಿದ್ದರು.

ಟ್ವೀಟ್ ಮೂಲಕ ಬಿಜೆಪಿಯ ತತ್ವ ಸಿದ್ಧಾಂತ ಲೇವಡಿ ಮಾಡಿದ ಕಾಂಗ್ರೆಸ್ಟ್ವೀಟ್ ಮೂಲಕ ಬಿಜೆಪಿಯ ತತ್ವ ಸಿದ್ಧಾಂತ ಲೇವಡಿ ಮಾಡಿದ ಕಾಂಗ್ರೆಸ್

Congress CLP leader Siddaramaiah press conference

ಶಾಸಕಾಂಗ ಪಕ್ಷದ ಸಭೆ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಸಿದ್ದರಾಮಯ್ಯ ಅವರು ಪ್ರತಿಪಕ್ಷ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. 'ರಾಜೀನಾಮೆ ನೀಡಿರುವ 10 ಶಾಸಕರು ಸಭೆಗೆ ಬಂದಿಲ್ಲ. ಉಳಿದ ಶಾಸಕರು ಸಭೆಗೆ ಬಂದು ಪಕ್ಷ ನಿಷ್ಠೆ ತೋರಿಸಿದ್ದಾರೆ' ಎಂದು ಹೇಳಿದರು.

ಯಾವ ಕಾರಣಕ್ಕೂ ರಾಜೀನಾಮೆ ಹಿಂದಕ್ಕೆ ಪಡೆಯೊಲ್ಲ: ರಾಮಲಿಂಗಾ ರೆಡ್ಡಿಯಾವ ಕಾರಣಕ್ಕೂ ರಾಜೀನಾಮೆ ಹಿಂದಕ್ಕೆ ಪಡೆಯೊಲ್ಲ: ರಾಮಲಿಂಗಾ ರೆಡ್ಡಿ

ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು

* ಪ್ರಸ್ತುತ ರಾಜಕೀಯ ಬೆಳವಣಿಗೆ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ವಿವರವಾದ ಚರ್ಚೆಯನ್ನು ನಡೆಸಿದ್ದೇವೆ. ಸಭೆಯಲ್ಲಿ ಪಾಲ್ಗೊಂಡ ಶಾಸಕರೆಲ್ಲ ಪಕ್ಷನಿಷ್ಠೆಯನ್ನು ತೋರಿಸಿದ್ದಾರೆ.

ಇನ್ನಷ್ಟು ಶಾಸಕರು ರಾಜೀನಾಮೆ ಸಾಧ್ಯತೆ: ಇಲ್ಲಿದೆ ಪಟ್ಟಿಇನ್ನಷ್ಟು ಶಾಸಕರು ರಾಜೀನಾಮೆ ಸಾಧ್ಯತೆ: ಇಲ್ಲಿದೆ ಪಟ್ಟಿ

* ಜುಲೈ 12ರಿಂದ ವಿಧಾನಸಭೆ ಅಧಿವೇಶನ ಆರಂಭವಾಗಲಿದೆ. ಅಧಿವೇಶನದಲ್ಲಿ ನಮ್ಮ ನಿಲುವು ಏನಾಗಿರಬೇಕು ಎಂದು ಶಾಸಕರ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ.

* ಬಿಜೆಪಿ ಕರ್ನಾಟಕದ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನವನ್ನು ನಡೆಸುತ್ತಿದೆ. ಶಾಸಕರಿಗೆ ಹಣ, ಸ್ಥಾನಮಾನದ ಆಮಿಷವೊಡ್ಡಲಾಗಿದೆ. ಇಷ್ಟೊಂದು ಹಣ ಪಕ್ಷಕ್ಕೆ ಎಲ್ಲಿಂದ ಬಂತು ಎಂದು ನಾನು ಪ್ರಶ್ನೆ ಮಾಡುತ್ತೇನೆ.

* ಆಪರೇಷನ್ ಕಮಲದ ರೂವಾರಿಗಳು ನರೇಂದ್ರ ಮೋದಿ ಮತ್ತು ಅಮಿತ್ ಶಾ. ಅವರ ಸೂಚನೆಯಂತೆ ಇಲ್ಲಿನ ನಾಯಕರು ಶಾಸಕರನ್ನು ಖರೀದಿ ಮಾಡುತ್ತಿದ್ದಾರೆ.

* ರಾಜೀನಾಮೆ ನೀಡಿರುವ ಶಾಸಕರಿಗೆ ವಾಪಸ್ ಬಂದು, ರಾಜೀನಾಮೆ ವಾಪಸ್ ಪಡೆಯಿರಿ ಎಂದು ಮನವಿ ಮಾಡುತ್ತೇನೆ. ರಾಜೀನಾಮೆ ನೀಡಿರುವ ಶಾಸಕರನ್ನು ಅನರ್ಹಗೊಳಿಸಲು ಸ್ಪೀಕರ್‌ಗೆ ಮನವಿ ಮಾಡಲು ಪಕ್ಷ ತೀರ್ಮಾನವನ್ನು ಕೈಗೊಂಡಿದೆ.

* ಪ್ರಜಾಪ್ರತಿನಿಧಿ ಕಾಯ್ದೆ 164-1ಬಿ ಅನ್ವಯ ಎಲ್ಲಾ ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಸ್ಪೀಕರ್‌ಗೆ ನಾವು ಮನವಿ ಮಾಡಲಿದ್ದೇವೆ. ಅದಕ್ಕೂ ಮೊದಲು ಶಾಸಕರು ವಾಪಸ್ ಬಂದು ರಾಜೀನಾಮೆ ವಾಪಸ್ ಪಡೆಯಲಿ ಎಂದು ಸಿದ್ದರಾಮಯ್ಯ ಹೇಳಿದರು.

* ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಎಲ್ಲಾ ಕಾಂಗ್ರೆಸ್ ನಾಯಕರು ಬಿಜೆಪಿಯ ನಡೆ ಖಂಡಿಸಿ ಒಂದು ಗಂಟೆ ಧರಣಿ ಮಾಡುತ್ತೇವೆ. ಬಳಿಕ ಸ್ಪೀಕರ್ ಕಚೇರಿಗೆ ತೆರಳಿ ರಾಜೀನಾಮೆ ನೀಡಿರುವ ಶಾಸಕರ ವಿರುದ್ಧ ದೂರು ನೀಡುತ್ತೇವೆ.

English summary
Congress CLP leader and Coordination committee chief Siddaramaiah press conference after CLP meeting on July 9, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X