ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಠಾತ್ತನೆ ಬೆಂಗಳೂರಿಗೆ ಕೆ.ಸಿ.ವೇಣುಗೋಪಾಲ, ನಾಳೆ ಬಹು ಮಹತ್ವದ ಸಭೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 15: ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಹಠಾತ್ತೆಂದು ಇಂದು ರಾತ್ರಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಆಪರೇಷನ್ ಕಮಲದ ಭೀತಿ ಹೆಚ್ಚಾಗಿರುವುದರಿಂದ ವೇಣುಗೋಪಾಲ್ ಆಗಮಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ಹೇಳುತ್ತಿವೆ.

ಸಿದ್ದರಾಮಯ್ಯ ಸಹ ಇಂದು ಅಥವಾ ನಾಳೆ ಬೆಳಿಗ್ಗೆ ಯೂರೋಪ್ ಪ್ರವಾಸದಿಂದ ವಾಪಸ್ಸಾಗುತ್ತಿದ್ದು, ವೇಣುಗೋಪಾಲ್, ಸಿದ್ದರಾಮಯ್ಯ ಅವರುಗಳು ಒಟ್ಟಾಗಿ ನಾಳೆ ಜಾರಕಿಹೊಳಿ ಸಹೋದರರು ಸೇರಿದಂತೆ ಹಲವರು ಜೊತೆ ಸಭೆ ನಡೆಸಲಿದ್ದಾರೆ.

Congress in charge KC Venugopal coming to Bengaluru suddenly

ಆಪರೇಷನ್ ಕಮಲದ ಭೀತಿ ಹೆಚ್ಚಾಗಿರುವ ಕಾರಣದಿಂದಲೇ ಕೆ.ಸಿ.ವೇಣುಗೋಪಾಲ್ ಅವರು ಬೆಂಗಳೂರಿಗೆ ಬರುತ್ತಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಸಹ ನಾಳೆ ನಗರಕ್ಕೆ ಬರುತ್ತಿರುವ ಕಾರಣ ಅವರೊಂದಿಗೂ ವೇಣುಗೋಪಾಲ್ ಸಭೆ ನಡೆಸಲಿದ್ದಾರೆ.

ಲೋಕಸಭೆ ಚುನಾವಣೆಗೆ ವಿಶೇಷ ಸಮಿತಿ ರಚಿಸಿದ ರಾಹುಲ್ ಗಾಂಧಿಲೋಕಸಭೆ ಚುನಾವಣೆಗೆ ವಿಶೇಷ ಸಮಿತಿ ರಚಿಸಿದ ರಾಹುಲ್ ಗಾಂಧಿ

ಡಿ.ಕೆ.ಶಿವಕುಮಾರ್ ಅವರಿಗೆ ಇಂದು ಜಾಮೀನು ದೊರೆತಿದೆಯಾದರೂ ಲೋಕಸಭೆ ಚುನಾವಣೆ ವೇಳೆಗೆ ಶಿವಕುಮಾರ್‌ಗೆ ಮತ್ತೆ ಇಡಿ ಸಂಕಷ್ಟ ಎದುರಾಗಲಿದೆ ಎಂಬ ಸುದ್ದಿ ಇದೆ. ಹಾಗಾಗಿ ಆ ಕುರಿತು ಸಹ ನಾಳೆ ವೇಣುಗೋಪಾಲ್ ಚರ್ಚೆ ಮಾಡಲಿದ್ದಾರೆ.

ರಮೇಶ್ ಕೆನ್ನೆ ಸವರಿದ ಸಿಎಂ, ಅಕ್ಕ ಪಕ್ಕ ಕುಳಿತ ಸತೀಶ್-ಲಕ್ಷ್ಮಿ ಹೆಬ್ಬಾಳ್ಕರ್ ರಮೇಶ್ ಕೆನ್ನೆ ಸವರಿದ ಸಿಎಂ, ಅಕ್ಕ ಪಕ್ಕ ಕುಳಿತ ಸತೀಶ್-ಲಕ್ಷ್ಮಿ ಹೆಬ್ಬಾಳ್ಕರ್

ಸಿದ್ದರಾಮಯ್ಯ ಅವರು ಯೂರೋಪ್ ತೆರಳಿದಂದಿನಿಂದಾ ರಾಜ್ಯ ರಾಜಕಾರಣದಲ್ಲಿ ಭಾರಿ ಘಟನೆಗಳು ನಡೆದಿದ್ದು. ಎಲ್ಲದರ ಬಗ್ಗೆ ನಾಳೆ ಕೂಲಂಕುಷ ಚರ್ಚೆ ನಡೆಯಲಿದೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಹ ವಿಸ್ತೃತ ಮಾತುಕತೆ ನಾಳೆ ನಡೆದು ಪಟ್ಟಿ ಸಹ ಅಂತಿಮವಾಗಲಿದೆ.

English summary
Congress Karnataka in charge KC Venugopla coming to Bengaluru suddenly. Siddaramiah also returning from Europe tour tomorrow so Venugopal and Siddaramiah will attend very important meeting tomorrow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X