ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳವಾರ ಸಂಜೆ 6 ಗಂಟೆಗೆ ವಿಶ್ವಾಸಮತಕ್ಕೆ ಮುಹೂರ್ತ ಫಿಕ್ಸ್‌

|
Google Oneindia Kannada News

Recommended Video

ಸರ್ಕಾರದ ವಿರುದ್ಧ ಗುಡುಗಿದ ಸ್ಪೀಕರ್ ನಿನ್ನೆ ಹೇಳಿದ್ದೇನು ಗೊತ್ತಾ..? | Oneindia Kannada

ಬೆಂಗಳೂರು, ಜುಲೈ 22: ಗುರುವಾರ (ಜುಲೈ 18) ರಿಂದಲೂ ನಡೆಯುತ್ತಿರುವ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಇಂದೂ ಸಹ ಮುಗಿಯಲಿಲ್ಲ.

ಕಲಾಪದಲ್ಲಿ ಗದ್ದಲ, ಚರ್ಚೆ, ಸಿಟ್ಟು, ನಗು ಹಲವು ಭಾವ ಚಿತ್ರಗಳಲ್ಲಿ

ಇಂದು ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ಮುಗಿಸಲೇ ಬೇಕು ಎಂದು ರಾತ್ರಿ 11:45 ನಿಮಿಷದವರೆಗೆ ಕಲಾಪ ನಡೆಸಲಾಯಿತು. ಆದರೂ ಸಹ ವಿಶ್ವಾಸಮತ ಯಾಚನೆ ಚರ್ಚೆ ಮುಗಿಯಲೇ ಇಲ್ಲ.

ಮಂಗಳವಾರಕ್ಕೆ ಕಲಾಪ ಮುಂದೂಡಿಕೆ: ಮುಗಿಯದ ಚರ್ಚೆ, ಪ್ರತಿಭಟಿಸದ ಪ್ರತಿಪಕ್ಷಮಂಗಳವಾರಕ್ಕೆ ಕಲಾಪ ಮುಂದೂಡಿಕೆ: ಮುಗಿಯದ ಚರ್ಚೆ, ಪ್ರತಿಭಟಿಸದ ಪ್ರತಿಪಕ್ಷ

ಸಮಯ ಸರಿಯುತ್ತಿದ್ದಂತೆ ಆಡಳಿತ ಪಕ್ಷದ ಶಾಸಕರು ಕಲಾಪವನ್ನು ನಾಳೆಗೆ ಮುಂದೂಡುವಂತೆ ಗದ್ದಲ ಮಾಡಿದರು. ಕೊನೆಗೆ ರೋಸಿಹೋದ ಸ್ಪೀಕರ್ ರಮೇಶ್ ಕುಮಾರ್ ಅವರು ಸಿದ್ದರಾಮಯ್ಯ ಅವರ ಸಲಹೆ ಕೇಳಿದರು.

Confidence vote will done at Tuesday evening 6: speaker

ಸಿದ್ದರಾಮಯ್ಯ ಅವರು ಸಲಹೆ ನೀಡಿ, ನಾಳೆ (ಮಂಗಳವಾರ) ಜುಲೈ 23 ರ ಸಂಜೆ 4 ಗಂಟೆಗೆ ಚರ್ಚೆ ಮುಗಿಸುತ್ತೀವಿ, ಸಿಎಂ ಅವರು ಉತ್ತರ ನೀಡಲಿ ನಂತರ 6 ಗಂಟೆಗೆ ಮತಕ್ಕೆ ಹಾಕಿ ಎಂದು ಹೇಳಿದರು.

ಮಂಗಳವಾರ ದಾಟಿದರೆ ಸರಕಾರ ಸೇಫ್; ಸಿಎಂಗೆ ಜ್ಯೋತಿಷಿಗಳ ಸಲಹೆ ಮಂಗಳವಾರ ದಾಟಿದರೆ ಸರಕಾರ ಸೇಫ್; ಸಿಎಂಗೆ ಜ್ಯೋತಿಷಿಗಳ ಸಲಹೆ

ಅದರಂತೆ ಸ್ಪೀಕರ್ ರಮೇಶ್ ಕುಮಾರ್ ಸಿದ್ದರಾಮಯ್ಯ ಅವರ ಸಲಹೆಯಂತೆ ಸಂಜೆ 6 ಗಂಟೆಗೆ ವಿಶ್ವಾಸಮತಕ್ಕೆ ಹಾಕುತ್ತೀವಿ ಎಂದು ಸ್ಪೀಕರ್ ಹೇಳಿದರು. ಇದಕ್ಕೆ ಒಪ್ಪುವುದಿಲ್ಲ ಎಂದು ಬಿಜೆಪಿ ಸದಸ್ಯರು ಹೇಳುತ್ತಿದ್ದರೂ ಸಹ, ನಾಳೆ ಬೆಳಿಗ್ಗೆ 10 ಗಂಟೆಗೆ ಕಲಾಪವನ್ನು ಮುಂದೂಡಿ ಸ್ಪೀಕರ್ ಅವರು ಹೊರಟರು.

English summary
Speaker Ramesh Kumar said that vote of confidence will take place on Tuesday evening 6. Today's assembly session will end by 11:45 pm on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X