ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಪ್ತ 'ಡೈರಿ' ರಹಸ್ಯ: ಡಿಕೆಶಿಗೆ ಯಡಿಯೂರಪ್ಪ ಬಹಿರಂಗ ಸವಾಲು

|
Google Oneindia Kannada News

Recommended Video

ಡಿಕೆಶಿಗೆ ಯಡಿಯೂರಪ್ಪ ಬಹಿರಂಗ ಸವಾಲು | Oneindia Kannada

ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಖಾತೆಯ ಸಚಿವ ಡಿ ಕೆ ಶಿವಕುಮಾರ್ ಮೇಲಿನ ಐಟಿ ದಾಳಿಯ ವಿಚಾರದಲ್ಲಿ ಬಿಜೆಪಿ ಯಾಕೆ ಗಂಭೀರ ಹೋರಾಟಕ್ಕೆ ಮುಂದಾಗುತ್ತಿಲ್ಲ ಎನ್ನುವ ಚರ್ಚೆಯ ನಡುವೆ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಡಿಕೆಶಿಗೆ ಗಂಭೀರ ಸವಾಲೊಂದನ್ನು ಎಸೆದಿದ್ದಾರೆ.

ಬೆಂಗಳೂರಿನಲ್ಲಿ ಭಾನುವಾರ (ಜೂ 24) ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಯಡಿಯೂರಪ್ಪ, ಅದೇನೋ ನನ್ನಲ್ಲೂ ಡೈರಿ ಇದೆ ಎನ್ನುವ ಮಾತನ್ನು ಡಿ ಕೆ ಶಿವಕುಮಾರ್ ಅವರು ನೀಡಿದ್ದಾರೆ. ಬಹಿರಂಗ ಪಡಿಸಲಿ ನೋಡೋಣ ಎಂದು ಬಿಎಸ್ವೈ ಹೇಳಿದ್ದಾರೆ.

ನನ್ನ ಬಳಿಯೂ ಸಾಕಷ್ಟು ಡೈರಿಗಳಿವೆ,ಈಗ ಓಪನ್ ಮಾಡಲ್ಲ : ಡಿಕೆಶಿನನ್ನ ಬಳಿಯೂ ಸಾಕಷ್ಟು ಡೈರಿಗಳಿವೆ,ಈಗ ಓಪನ್ ಮಾಡಲ್ಲ : ಡಿಕೆಶಿ

ಗುಜರಾತ್ ನಿಂದ ರಾಜ್ಯಸಭೆಗೆ ಅಹಮದ್ ಪಟೇಲ್ ಆಯ್ಕೆಯನ್ನು ಹೇಗಾದರೂ ತಡೆಯಲೇ ಬೇಕೆಂದು ಬಿಜೆಪಿ ಶತಾಯಗತಾಯು ಹೋರಾಟಕ್ಕೆ ಇಳಿದಿತ್ತು. ಈ ವಿಚಾರ, ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿ ಏರ್ಪಟ್ಟಿತ್ತು.

ಸೋನಿಯಾ ಆಪ್ತವಲಯದ ಅಹಮದ್ ಪಟೇಲ್ ಅವರನ್ನು ಗೆಲ್ಲಿಸಲು, ಗುಜರಾತ್ ಕಾಂಗ್ರೆಸ್ ಶಾಸಕರ ನಿಯತ್ತು ಆ ಪಕ್ಷಕ್ಕೆ ಮುಖ್ಯವಾಗಿತ್ತು. ಅವರ ನಿಯತ್ತು ಬಿಜೆಪಿ ಕಡೆ ಹೋಗದಂತೆ ನೋಡಿಕೊಳ್ಳಲು, ಆ ಕೆಲಸವನ್ನು ಡಿ ಕೆ ಶಿವಕುಮಾರ್ ಅವರಿಗೆ ವಹಿಸಿತ್ತು. ಅದನ್ನು ಅವರು ಚೆನ್ನಾಗಿ ನಿಭಾಯಿಸಿದ್ದರು, ಅಲ್ಲಿಂದ ಅವರಿಗೆ ಐಟಿ ದಾಳಿಯ ಬಿಸಿ ಮುಟ್ಟಲಾರಂಭಿಸಿತು.

ಡಿಕೆಶಿ ಮೇಲೆ ಐಟಿ ದಾಳಿ: ಬಿಜೆಪಿ ಮುಖಂಡರ ಮೌನದ ಹಿಂದಿನ ಮರ್ಮವೇನು?ಡಿಕೆಶಿ ಮೇಲೆ ಐಟಿ ದಾಳಿ: ಬಿಜೆಪಿ ಮುಖಂಡರ ಮೌನದ ಹಿಂದಿನ ಮರ್ಮವೇನು?

ಡಿಕೆಶಿ ಒಡೆತನದ ಸಂಸ್ಥೆಗಳಲ್ಲಿ ಯಡಿಯೂರಪ್ಪ ಆದಿಯಾಗಿ ಬಿಜೆಪಿ ಮುಖಂಡರು ಪಾಲುದಾರರಾಗಿದ್ದಾರೆ ಎನ್ನುವ ಗುಸುಗುಸು ಮಾತು ಕೇಳಿ ಬರುತ್ತಿದೆ. ಹಾಗಾಗಿ, ಬಿಜೆಪಿ ಮುಖಂಡರು ತುಟಿಪಿಟಿಕ್ ಅನ್ನೋದೇ ಇರುವುದಕ್ಕೆ ಇದೂ ಒಂದು ಕಾರಣ ಇದ್ದಿರಬಹುದು ಎನ್ನುವ ಗುಮಾನಿಯ ನಡುವೆ, ಬಿಎಸ್ವೈ ಹೇಳಿಕೆ ಗಂಭೀರತೆ ಪಡೆದುಕೊಂಡಿದೆ. ಬಿಎಸ್ವೈ ಹೇಳಿದ್ದೇನು, ಮುಂದೆ ಓದಿ

ಡಿಕೆಶಿಗೆ ಯಡಿಯೂರಪ್ಪ ಬಹಿರಂಗ ಸವಾಲು

ಡಿಕೆಶಿಗೆ ಯಡಿಯೂರಪ್ಪ ಬಹಿರಂಗ ಸವಾಲು

ಶಿವಕುಮಾರ್ ಅವರ ಬಳಿಯಿರುವ ಗುಪ್ತಡೈರಿಯಲ್ಲಿ ಏನಿದು ಎನ್ನುವ ಕುತೂಹಲ ನಮಗೂ ಇದೆ. ಹೇಗೂ, ಸಿಐಡಿ ಮತ್ತು ಎಸಿಬಿ ರಾಜ್ಯ ಸರಕಾರದ ಸುಪರ್ದಿಯಲ್ಲಿ ಬರುತ್ತದೆ. ತನಿಖೆಗೆ ಒಳಪಡಿಸಲಿ. ಇದಕ್ಕೆ ಅಡ್ಡಿಪಡಿಸಲು ನಾವು ಯಾರು ಎಂದು ಯಡಿಯೂರಪ್ಪ, ಡಿಕೆಶಿಗೆ ಬಹಿರಂಗ ಸವಾಲು ಎಸೆದಿದ್ದಾರೆ.

ನಮಗಾಗಲಿ ಅಥವಾ ನಮ್ಮ ಪಕ್ಷದ ಮುಖಂಡರಿಗಾಗಲಿ ಭಯವಿಲ್ಲ

ನಮಗಾಗಲಿ ಅಥವಾ ನಮ್ಮ ಪಕ್ಷದ ಮುಖಂಡರಿಗಾಗಲಿ ಭಯವಿಲ್ಲ

ನಮಗಾಗಲಿ ಅಥವಾ ನಮ್ಮ ಪಕ್ಷದ ಮುಖಂಡರಿಗಾಗಲಿ ಯಾವುದೇ ಭಯವಿಲ್ಲ, ಡಿ ಕೆ ಶಿವಕುಮಾರ್ ಡೈರಿ ರಹಸ್ಯ ಬಿಡುಗಡೆ ಮಾಡುತ್ತಾರೆಂದರೆ ಅದನ್ನು ನಾವು ಸ್ವಾಗತಿಸುತ್ತೇವೆ. ಸಮಯ ಬಂದಾಗ ಎಲ್ಲವನ್ನೂ ಬಹಿರಂಗ ಪಡಿಸುತ್ತೇವೆ ಎಂದು ಡಿಕೆಶಿ ಸಹೋದರರು ಹೇಳುತ್ತಿದ್ದಾರೆ, ಬಹಿರಂಗ ಪಡಿಸಲಿ - ಯಡಿಯೂರಪ್ಪ.

4ವರ್ಷಗಳಲ್ಲಿ ವಿಶ್ವವೇ ಮೆಚ್ಚುವ ಕೆಲಸ ಪ್ರಧಾನಿಗಳ ನೇತೃತ್ವದಲ್ಲಿ ನಡೆದಿದೆ

4ವರ್ಷಗಳಲ್ಲಿ ವಿಶ್ವವೇ ಮೆಚ್ಚುವ ಕೆಲಸ ಪ್ರಧಾನಿಗಳ ನೇತೃತ್ವದಲ್ಲಿ ನಡೆದಿದೆ

ಅಭಿವೃದ್ದಿ ಎಂದರೆ ಅದು ಮೋದಿ ಸರಕಾರ, ನಾಲ್ಕು ವರ್ಷಗಳಲ್ಲಿ ವಿಶ್ವವೇ ಮೆಚ್ಚುವ ಕೆಲಸ ನಮ್ಮ ಪ್ರಧಾನಿಗಳ ನೇತೃತ್ವದಲ್ಲಿ ನಡೆದಿದೆ. ಎಲ್ಲಾ ರಂಗದಲ್ಲೂ ಕೇಂದ್ರ ಸರಕಾರ ಸಮರ್ಥನೀಯವಾದ ಕೆಲಸವನ್ನು ಮಾಡಿದೆ ಎಂದು ಯಡಿಯೂರಪ್ಪ, ಕೇಂದ್ರ ಸರಕಾರದ ನಾಲ್ಕು ವರ್ಷಗಳ ಕಿರುಹೊತ್ತಿಗೆ ಬಿಡುಗಡೆಗೊಳಿಸಿ ಹೇಳಿಕೆಯನ್ನು ನೀಡಿದ್ದಾರೆ.

ತೀವ್ರ ಹೋರಾಟ ನಡೆಸುತ್ತಿರುವುದು ಚರ್ಚೆಯ ವಿಷಯವಾಗಿತ್ತು

ತೀವ್ರ ಹೋರಾಟ ನಡೆಸುತ್ತಿರುವುದು ಚರ್ಚೆಯ ವಿಷಯವಾಗಿತ್ತು

ಡಿ ಕೆ ಶಿವಕುಮಾರ್ ಮೇಲೆ ನಡೆಯುತ್ತಿರುವ ಆದಾಯ ತೆರಿಗೆ ವಿಚಾರಣೆ ರಾಜ್ಯದಲ್ಲಿ ಭಾರೀ ಸುದ್ದಿಯಾಗುತ್ತಿದ್ದರೂ, ಬಿಜೆಪಿ ಇದಕ್ಕೆ ಯಾವುದೇ ತೀವ್ರ ಹೋರಾಟ ನಡೆಸುತ್ತಿರುವುದು ಚರ್ಚೆಯ ವಿಷಯವಾಗಿತ್ತು. ತೋರಿಕೆಗೆ ಬಿಜೆಪಿಯಿಂದ ಪ್ರತಿಕ್ರಿಯೆಯೊಂದು ವ್ಯಕ್ತವಾಗಿದ್ದರೂ, ಬಿಜೆಪಿಯಿಂದ ಹೋರಾಟ ನಡೆಯಲೇ ಇರಲಿಲ್ಲ. ಹಾಗಾಗಿ, ಬಿಎಸ್ವೈ ಸವಾಲು ಮತ್ತೊಂದು ಸುತ್ತಿನ ರಾಜಕೀಯ ಸಮರಕ್ಕೆ ನಾಂದಿ ಹಾಡುವ ಸಾಧ್ಯತೆಯಿಲ್ಲದಿಲ್ಲ.

ಅಬ್ದುಲ್ ಕಲಾಂ ಅವರ ಹೆಸರನ್ನು ಇಡಲಿ

ಅಬ್ದುಲ್ ಕಲಾಂ ಅವರ ಹೆಸರನ್ನು ಇಡಲಿ

ಸಾಲಮನ್ನಾ ಮಾಡುತ್ತೇವೆ ಎಂದಿದ್ದ ಸಮ್ಮಿಶ್ರ ಸರಕಾರ ಈಗ ಅದನ್ನು ಮರೆತಿದೆ. ಜನರ ದಿಕ್ಕು ತಪ್ಪಿಸುವ ಕೆಲಸಕ್ಕೆ ಸರಕಾರ ಮುಂದಾಗಿದ್ದು, ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಲು ಮುಂದಾಗಿದೆ. ಇದೆಲ್ಲಾ ಈಗ ಅವಶ್ಯಕತೆಯ ವಿಚಾರವೇ ಅಲ್ಲ. ಆದರೂ, ಸರಕಾರಕ್ಕೆ ಮರುನಾಮಕರಣ ಮಾಡಬೇಕು ಎಂದಿದ್ದರೆ, ಅಬ್ದುಲ್ ಕಲಾಂ ಅವರ ಹೆಸರನ್ನು ಇಡಲಿ - ಯಡಿಯೂರಪ್ಪ.

English summary
Confidence information in the diary releasing: Karnataka BJP State President BS Yeddyurappa challenge to Minister DK Shivakumar, BSY said, let DKS release the diary whatever he has, we are also waiting for that.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X